2025 ರ ವೇಳೆಗೆ 'ತಂಬಾಕು ಮುಕ್ತ ಪೀಳಿಗೆ'ಗಾಗಿ ನ್ಯೂಜಿಲೆಂಡ್ ಮಾದರಿಯ ಕಾನೂನು ಜಾರಿಗೆ ಚಿಂತನೆ
ನ್ಯೂಜಿಲೆಂಡ್‌ನಲ್ಲಿ 2008 ರ ನಂತರ ಜನಿಸಿದವರು ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಖರೀದಿಸದಂತೆ ಹೊಸ ಕಾನೂನು ಜಾರಿಗೆ ತರಲಾಗಿದೆ.
ಬೆಂಗಳೂರು, ಫೆಬ್ರವರಿ. 28: ರಾಜ್ಯದಲ್ಲಿ ಯುವಸಮೂಹ ತಂಬಾಕು ಉತ್ಪನ್ನಗಳಿಂದ ದೂರವಿರುವಂತೆ ಮಾಡಲು ಸರ್ಕಾರ ಹಲವು ಕ್ರಮಗಳನ್ನು, ಜಾಗೃತಿ ಕಾರ್ಯಕ್ರಗಳನ್ನು ಮಾಡುತ್ತಿದ್ದು, ಇದಕ್ಕೆ ಮತ್ತೊಂದು ಹೊಸ ಯೋಜನೆ ಸೇರಿಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳ ಮಾರಾಟ, ಖರೀದಿ ವಿಷಯದಲ್ಲಿ ನ್ಯೂಜಿಲೆಂಡ್ ಜಾರಿಗೆ ತಂದಿರುವ ಹೊಸ ಕಾನೂನನ್ನು ಅನುಸರಿಸುವತ್ತ ಹೆಜ್ಜೆಯಿಡುತ್ತಿದೆ.
ನ್ಯೂಜಿಲೆಂಡ್‌ನಲ್ಲಿ 2008 ರ ನಂತರ ಜನಿಸಿದವರು ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಖರೀದಿಸದಂತೆ ಹೊಸ ಕಾನೂನು ಜಾರಿಗೆ ತರಲಾಗಿದೆ. ಇದರಿಂದ ಪ್ರಭಾವಿತವಾಗಿರುವ ರಾಜ್ಯ ಆರೋಗ್ಯ ಇಲಾಖೆಯು 2025 ರ ಹೊತ್ತಿಗೆ ಕರ್ನಾಟಕದಲ್ಲಿ ತಂಬಾಕು ಮುಕ್ತ ಪೀಳಿಗೆಯನ್ನು ರಚಿಸಲು ಇದೇ ಮಾದರಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

ಈ ಕಾನೂನು ಜಾರಿಯ ಪರಿಣಾಮವಾಗಿ, ವರ್ಷಗಳು ಕಳೆದಂತೆ, ಕಡಿಮೆ ಜನರು ಮಾತ್ರ ತಂಬಾಕು ಖರೀದಿಸಲು ಸಾಧ್ಯವಾಗುತ್ತದೆ ಮತ್ತು ತಂಬಾಕು ಮುಕ್ತ ಪೀಳಿಗೆಗೆ ದಾರಿ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ. ಆರೋಗ್ಯ ಇಲಾಖೆಯ ವಿಭಾಗವಾದ ರಾಜ್ಯ ತಂಬಾಕು ನಿಯಂತ್ರಣ ಘಟಕವು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಅದರ ಪ್ರಕಾರ, 2007 ರಲ್ಲಿ ಮತ್ತು ನಂತರ ಜನಿಸಿದವರಿಗೆ ಕರ್ನಾಟಕದಾದ್ಯಂತ ಯಾವುದೇ ತಂಬಾಕು ಉತ್ಪನ್ನಗಳು ಸಿಗುವುದಿಲ್ಲ.
"ತಂಬಾಕು ಬಳಕೆಗೆ ಕಾನೂನು ವಯಸ್ಸು 18. 2007 ರಲ್ಲಿ ಮತ್ತು ನಂತರ ಜನಿಸಿದವರು 2025 ರ ವೇಳೆಗೆ 18 ವರ್ಷಕ್ಕೆ ತಲುಪುತ್ತಾರೆ. ನಾವು 18 ವರ್ಷಗಳ ನಂತರವೂ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗದ ಪೀಳಿಗೆಯನ್ನು ನಿರ್ಮಿಸಲು ಬಯಸುತ್ತೇವೆ. ಉದಾಹರಣೆಗೆ, 2007 ರಲ್ಲಿ ಜನಿಸಿದವರು 2030 ರಲ್ಲಿ 23 ವರ್ಷಗಳನ್ನು ತಲುಪುತ್ತಾರೆ. ಆದರೆ ಅವರು ತಂಬಾಕು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ವರ್ಷಗಳು ಕಳೆದಂತೆ ತಂಬಾಕು ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗಲಿದೆ' ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

"ಬಹುಪಾಲು ತಂಬಾಕು-ಬಳಕೆದಾರರು ತಮ್ಮ ಬಾಲ್ಯ ಮತ್ತು ಹದಿಹರೆಯದಲ್ಲಿಯೇ ಸಿಗರೇಟ್ ಸೇವನೆ ಅಭ್ಯಾಸ ಮಾಡಿರುತ್ತಾರೆ. ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ 2 ರ ಪ್ರಕಾರ, ಕರ್ನಾಟಕದಲ್ಲಿ 22.8 ಪ್ರತಿಶತ ವಯಸ್ಕರು (ಸುಮಾರು 2.5 ಕೋಟಿ) ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಯುವಕರು ನಮ್ಮ ರಾಷ್ಟ್ರದ ಸಂಪತ್ತು. ಹೀಗಾಗಿ ಈ ತಂಬಾಕು ಮುಕ್ತ ಪೀಳಿಗೆಗಾಗಿ ಈ ಮಾದರಿಯನ್ನು ಬಳಸಿಕೊಂಡು ಮಕ್ಕಳಿಗೆ ತಂಬಾಕು ಸುಲಭವಾಗಿ ಸಿಗದಂತೆ ಮಾಡುವುದು ಮತ್ತು ತಂಬಾಕು ಮುಕ್ತ ಪೀಳಿಗೆಯನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ" ಎಂದು ಮೂಲಗಳು ಹೇಳಿವೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು












Click it and Unblock the Notifications