ಮತ ಚಲಾಯಿಸಿ ಫೋಟೋಗೆ ಫೋಸ್ ಕೊಟ್ಟ ಬಿಬಿಎಂಪಿ ಆಯುಕ್ತ ತುಷಾರ್ ಗಿರಿ ನಾಥ್
ಬೆಂಗಳೂರು , ಮೇ. 10: ರಾಜ್ಯದ ವಿಧಾನಸಭಾ ಚುನಾವಣೆಗೆ ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ರಾಜಕೀಯ ನಾಯಕರು, ಚಲನಚಿತ್ರ ನಟ ನಟಿಯರು ಬೆಳಗ್ಗೆಯೇ ಸರತಿಯಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರಿನ ಮತಗಟ್ಟೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ತಮ್ಮ ಹಕ್ಕು ಚಲಾಯಿಸಿದ ಬಳಿಕ ಪೋಟೋಗೆ ಪೋಸ್ ನೀಡಿ ಮತ್ತಷ್ಟು ಜನರಿಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.

ಇನ್ನು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಬುಧವಾರ ಮತ ಚಲಾಯಿಸಿದ್ದಾರೆ. ಕುಟುಂಬ ಸಮೇತ ಆಗಮಿಸಿ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಮತಗಟ್ಟೆ ನಂಬರ್ 127ರಲ್ಲಿ ಮತದಾನ ಮಾಡಿದ್ದಾರೆ. ಜಕ್ಕೂರಿನ ಮತಗಟ್ಟೆ ನಂಬರ್ 127ರಲ್ಲಿ ಮನೋಜ್ ಕುಮಾರ್ ಮೀನಾ ಮೊದಲ ಮತದಾರರಾಗಿದ್ದಾರೆ.
ಮತ ಹಾಕಿ ಮಾತನಾಡಿರುವ ಅವರು, ನನ್ನ ಮಕ್ಕಳು ಮೊದಲ ಬಾರಿ ಮತ ಚಲಾಯಿಸುತ್ತಿದ್ದಾರೆ. ನಾವೇ ನಂ 127 ಮತಗಟ್ಟೆಯಲ್ಲಿ ಮೊದಲ ಮತದಾರರು. 224 ವಿಧಾನಸಭಾ ಕ್ಷೇತ್ರದಲ್ಲಿ 51 ಕೋಟಿ 31 ಲಕ್ಷ ಜನ ಮತ ಹಾಕುತ್ತಿದ್ದಾರೆ. ಈ ಬಾರಿ ವಿವಿಧ ಥೀಮ್‌ಗಳಲ್ಲಿ ಬೂತ್‌ಗಳನ್ನು ಬೂತ್ ಮಾಡಿದ್ದೇವೆ. ಮತದಾನಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಥೀಮ್ ಬೂತ್ ಮಾಡಲಾಗಿದೆ" ಎಂದಿದ್ದಾರೆ.
ಮತ ಚಲಾಯಿಸಿ ಫೋಟೋಗೆ ಫೋಸ್ ಕೊಟ್ಟ ಬಿಬಿಎಂಪಿ ಆಯುಕ್ತ ತುಷಾರ್ ಗಿರಿ ನಾಥ್#KarnatakaAssemblyElection2023 #BBMP #KarnatakaElection2023 #Election2023 #KarnatakaElectionsWithOi https://t.co/xslnA9doHF
— oneindiakannada (@OneindiaKannada) May 10, 2023

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಪತ್ನಿ ವನಿತಾ ಸೂದ್ ಜೊತೆ ಸರ್ ಎಂ.ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದ್ದಾರೆ.












Click it and Unblock the Notifications