ಕರ್ನಾಟಕದಲ್ಲಿ ವಾಹನಗಳ ಪ್ಲಾಸ್ಟಿಕ್ ಬಿಡಿಭಾಗ ತಯಾರಿಕಾ ಘಟಕ: ಎಲ್ಲಿ? ಉದ್ಯೋಗ ಸೃಷ್ಟಿ, ಯೋಜನೆ ಪೂರ್ಣ ಮಾಹಿತಿ

ಬೆಂಗಳೂರು, ನವೆಂಬರ್ 29: ಕರ್ನಾಟಕದಲ್ಲಿ ವಾಹನ ಪ್ಲಾಸ್ಟಿಕ್ ಬಿಡಿಭಾಗ ತಯಾರಿಕಾ ಘಟಕ ಸ್ಥಾಪನೆ ಕಾಲ ಸನ್ನಿಹಿತವಾಗಿದೆ. ಈ ಯೋಜನೆ ಸಂಬಂಧ ಕೊರಿಯಾ ಮೂಲದ ನಿಫ್ಕೊ ಕಂಪನಿಯ ಅಂಗಸಂಸ್ಥೆಯಾಗಿರುವ ನಿಫ್ಕೊ ಸೌತ್‌ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಜೊತೆ ಕರ್ನಾಟಕ ಸರ್ಕಾರವು ಬುಧವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಯೋಜನೆಯಿಂದ ಆಗುವ ಲಾಭ, ಉದ್ಯೋಗ ಸೃಷ್ಟಿ, ಸ್ಥಳ, ಅಂದಾಜು ವೆಚ್ಚದ ಮಾಹಿತಿ ಇಲ್ಲಿ ತಿಳಿಯಿರಿ.

ಬೆಂಗಳೂರಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಅವರು, ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಹ್ಯುನ್-ಡಾನ್ ಚೋಯ್ ಅವರ ಜೊತೆ ವಿಸ್ತೃತವಾಗಿ ಚರ್ಚಿಸಿದರು. ಕಂಪನಿಗೆ ರಾಜ್ಯ ಸರ್ಕಾರವು ಕೊಡಮಾಡಲಿರುವ ಸೌಲಭ್ಯಗಳು ಮತ್ತು ಉತ್ತೇಜನೆಗಳ ಬಗ್ಗೆ ಸಚಿವರು ಚೋಯ್‌ ಅವರಿಗೆ ವಿವರಿಸಿದರು. ತದನಂತರ ಸಚಿವರ ಸಮ್ಮುಖದಲ್ಲಿ 'ಎಂಒಯು'ಗೆ ಸಹಿ ಹಾಕಲಾಯಿತು.

Karnataka Govt Make MOU with Nifco ptd for Vehicle Plastic Spare Parts Manufacturing Unit Build in state

ಈ ಒಪ್ಪಂದದ ಪ್ರಕಾರ, ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು, ವಾಹನಗಳ ಪ್ಲಾಸ್ಟಿಕ್ ಬಿಡಿಭಾಗಗಳನ್ನು ತಯಾರಿಸುವ ಹೊಸ ಘಟಕವನ್ನು ಗೌರಿಬಿದನೂರಿನಲ್ಲಿ ಸ್ಥಾಪಿಸಲು ₹288 ಕೋಟಿ ಹೂಡಿಕೆ ಮಾಡಲಿದೆ. ಈ ತಯಾರಿಕಾ ಘಟಕದಲ್ಲಿ 400 ಜನರಿಗೆ ಉದ್ಯೋಗ ಅವಕಾಶಗಳು ಲಭ್ಯ ಇರಲಿವೆ. ಇದರಲ್ಲಿ ಶೇ.65ರಷ್ಟು ಉದ್ಯೋಗಗಳು ಮಹಿಳೆಯರಿಗೆ ದೊರೆಯಲಿವೆ. ಈ ಯೋಜನೆಯು ಐದು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಕೈಗಾರಿಕೆ ಇಲಾಖೆ ತಿಳಿಸಿದೆ.

ದಾಖಲೆ ವಿನಿಮಯ: ನಿಯಮಗಳಡಿ ನೆರವು

ಸಚಿವರ ಸಮ್ಮುಖದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್ ಸೆಲ್ವಕುಮಾರ್ ಮತ್ತು ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಹ್ಯುನ್-ಡಾನ್ ಚೋಯ್ ಅವರು ಒಪ್ಪಂದಕ್ಕೆ ಸಹಿ ಹಾಕಿ, ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

Karnataka Govt Make MOU with Nifco ptd for Vehicle Plastic Spare Parts Manufacturing Unit Build in state

ರಾಜ್ಯದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ನೀತಿ/ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಅನುಮತಿ /ನೋಂದಣಿ ಪಡೆಯಲು ಕರ್ನಾಟಕ ಸರ್ಕಾರವು ನಿಫ್ಕೊ ಸೌತ್‌ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಕಂಪನಿಗೆ ಅಗತ್ಯ ನೆರವು ಕಲ್ಪಿಸಲಿದೆ.

ಹುಂಡೈ ಮೋಟರ್ ಇಂಡಿಯಾ, ಕಿಯಾ ಮೋಟರ್ಸ್‌, ನಿಸಾನ್‌, ಫೋರ್ಡ್‌ ಮತ್ತು ಟೊಯೊಟಾ ಮುಂತಾದವು ನಿಫ್ಕೊದ ಭಾರತದಲ್ಲಿನ ಪ್ರಮುಖ ಗ್ರಾಹಕ ಕಂಪನಿಗಳಾಗಿವೆ. ಒಪ್ಪಂದ ಸಹಿ ಹಾಕವಾಗ ಕೈಗಾರಿಕೆ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ಸಾವಿರಾರು ಉದ್ಯೋಗ ಸೃಷ್ಟಿ

ಬೆಂಗಳೂರಿನಲ್ಲಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಸಮ್ಮುಖದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 62 ಯೋಜನೆಗಳಿಗೆ ಜಾರಿಗೆ ಸಹಿ ಹಾಕಲಾಗಿದೆ. ಇದರಿಂದ ಸುಮಾರು 10 ಸಾವಿರಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಮೂಲಕ ರಾಜ್ಯದಲ್ಲಿ ಕೈಗಾರಿಕೋದ್ಯಮ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+