Lorry Strike Withdraw: ಈ ಸರಕು ವಾಹನಗಳಿಗೆ ಬೆಂಗಳೂರು ಪ್ರವೇಶಿಸಬಹುದು, ಮುಷ್ಕರ ವಾಪಸ್
ಬೇಡಿಕೆ ಈಡೇರಿಕೆ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರು ಸಂಘಗಳ ಒಕ್ಕೂಟವು ಪ್ರತಿಭಟನೆಯನ್ನು ವಾಪಾಸ್ ಪಡೆದಿದೆ.
ಬೆಂಗಳೂರು, ಮಾರ್ಚ್ 16: ಬೇಡಿಕೆ ಈಡೇರಿಕೆ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರು ಸಂಘಗಳ ಒಕ್ಕೂಟವು ಪ್ರತಿಭಟನೆಯನ್ನು ವಾಪಾಸ್ ಪಡೆದಿದೆ.
ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯು ಬೆಂಗಳೂರು ನಗರಕ್ಕೆ ಮಧ್ಯಮ ಮತ್ತು ಲಘು ಸರಕು ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 12ಗಂಟೆಯಿಂದ ನಡೆಯಬೇಕಿದ್ದ ಮುಷ್ಕರವನ್ನು ಒಕ್ಕೂಟ ಹಿಂಪಡೆದಿದೆ.

ಇನ್ನು ಮುಂದೆ ನಗರದಲ್ಲಿ ಲಘು ಮತ್ತು ಮಧ್ಯಮ ಸರಕು ಸಾಗಾಣಿಕೆ ವಾಹನಗಳು ಸಂಚರಿಸಬಹುದು. 7.5 ಮೆಟ್ರಿಕ್ ಟನ್ ಲಗೇಜ್ ಹೊತ್ತ ವಾಹನಗಳ ಓಡಾಟಕ್ಕೆ ಟ್ರಾಫಿಕ್ ಕಮೀಷನರ್ ಅಸ್ತು ಎಂದಿದ್ದಾರೆ. ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳನ್ನು ನಗರದ ಒಳಗೆ ನಿಷೇಧ ಮಾಡಿರುವುದಕ್ಕೆ ಬೆಂಗಳೂರು ನಗರ ಟೆಂಪೋ ಮಾಲೀಕರ ಸಂಘಗಳ ಒಕ್ಕೂಟದಿಂದ ಮುಷ್ಕರಕ್ಕೆ ಕರೆ ನೀಡಿತ್ತು. ಅದನ್ನು ಈಗ ವಾಪಸ್ ಪಡೆಯಲಾಗಿದೆ.
ರಾಜ್ಯದಲ್ಲಿ ವಾಣಿಜ್ಯ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ (FC) ನವೀಕರಣವನ್ನು ಕ್ಯೂಆರ್ ಕೋಡ್ ಇರುವ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಿಕೆ ಕಡ್ಡಾಯ ಮಾಡಿ ಆದೇಶಿಸಿತ್ತು. ಈ ಆದೇಶ ವಿರುದ್ಧ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ವಿರೋಧಿಸಿತ್ತು. ಈ ಪೈಕಿ ಸದ್ಯ ನಗರಗಳಿಗೆ ಮಧ್ಯಮ ಲಘು ವಾಹನಗಳಿಗೆ ಅವಕಾಶ ಸಿಕ್ಕಿದೆ.
ಲಾರಿ ಮಾಲೀಕರು ಇಟ್ಟಿದ್ದ ಬೇಡಿಕೆಗಳು ಇವು
* ಬೆಂಗಳೂರು- ಮೈಸೂರು ಎಕ್ಸಪ್ರೆಸ್ ವೇನಲ್ಲಿ ಬೈಕ್, ನಿಧಾನಗತಿಯಲ್ಲಿ ಚಲಿಸುವ ಟ್ರಾಕ್ಟರ್, ಆಟೋರಿಕ್ಷಾ ಓಡಾಟವನ್ನು ರದ್ದುಗೊಳಿಸಬೇಕು.

* ವಾಣಿಜ್ಯ ವಾಹನ ನವೀಕರಣ ಸಮಯದಲ್ಲಿ ಕ್ಯೂಆರ್ ಕೋಡ್ ಆಧಾರಿತ ರಿಫ್ಲ್ಕ್ಟರ್ ಟೇಪ್ ಅಳವಡಿಕೆ ಕಡ್ಡಾಯ ನಿರ್ಧಾರದಿಂದ ಹಿಂದೆ ಸರಿಯಬೇಕು.
* ಲಾರಿ ಬಾಡಿಗೆ ಸಹಿತ ಟೋಲ್ ಸುಂಕವನ್ನು ಬಾಡಿಗೆ ನೀಡಿದವರೇ ಕೊಡಬೇಕು.
* ನೈಸ್ ರಸ್ತೆಯಲ್ಲಿ ಹಿಂದಿನ 10 ವರ್ಷದಿಂದಲೂ ಟೋಲ್ ಹಣ ತೆಗೆದುಕೊಳ್ಳುತ್ತಿದ್ದು, ಅದನ್ನು ನಿಲ್ಲಿಸಬೇಕು.












Click it and Unblock the Notifications