ಕರ್ನಾಟಕ KSRTC 'ರಾಷ್ಟ್ರ-ವಿಶ್ವ ಮಟ್ಟದ' ಪ್ರಶಸ್ತಿಗಳಿಗೆ ಭಾಜನ, ಮುಂಬೈನಲ್ಲಿ ಕಾರ್ಯಕ್ರಮ

ಬೆಂಗಳೂರು, ಫೆಬ್ರವರಿ 09: ಕರ್ನಾಟಕದಾದ್ಯಂತ ಜನರಿಗೆ ಪರಿಣಾಮಕಾರಿ ಸಂಚಾರ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಾಧನೆಗೆ ನಿರಂತರವಾಗಿ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ. ಕೆಎಸ್‌ಆರ್‌ಟಿಸಿ ಈವರೆಗೆ ಜಾರಿಗೆ ತಂದ ಹೊಸ ಹೊಸ ಉಪಕ್ರಮಗಳು ಜನರಿಗೆ ಹತ್ತಿರವಾಗಿದೆ. ಈ ಕಾರಣದಿಂದಲೇ ಸಂಸ್ಥೆಗೆ ಮತ್ತೆ 'ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು' ಲಭಿಸಿದೆ.

ಹೌದು, ಕೆಎಸ್‌ಆರ್‌ಟಿಸಿ ಅನುಷ್ಠಾನಗೊಳಿಸಿರುವ ಈ ಕೆಳಗಿನ ಉಪಕ್ರಮಗಳಿಗೆ ರಾಷ್ಟ್ರೀಯ ಹಾಗೂ ವಿಶ್ಚ ನಾವೀನ್ಯತೆ ಪ್ರಶಸ್ತಿಗಳು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಇದೇ ಫೆಬ್ರವರಿ ತಿಂಗಳ 17, 18 ಮತ್ತು 21 ಫೆಬ್ರವರಿ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆಯಲಿವೆ. ಅಂದು ಕೆಎಸ್‌ಆರ್‌ಟಿಸಿ ಅಧಿಕಾರಿ, ಆಡಳಿತ ವರ್ಗ ಪ್ರಶಸ್ತಿ ಗೌರವ ಸ್ವೀಕರಿಸಲಿದೆ.

Karnataka KSRTC Get National and World Innovation Awards for This Reason

ಪ್ರಶಸ್ತಿಗಳ ವಿವರ

* ಉತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ

* ಕನಸುಗಳ ಕಂಪನಿಗಳು: ಉದ್ಯೋಗದಲ್ಲಿ ಆರೋಗ್ಯ ನಿರ್ವಹಣೆಗೆ ಗೌರವ

* ವರ್ಷದ ವ್ಯವಹಾರ ನಾಯಕ ಪ್ರಶಸ್ತಿ: ಕಾರ್ಯಸ್ಥಳ ಮತ್ತು ಜನ ಸಂಪತ್ತು ಅಭಿವೃದ್ಧಿ

* ವಿಶ್ವ ಆರೈಕೆ ಪ್ರಶಸ್ತಿ: ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮ

* ವಿಶ್ವ ನಾವಿನ್ಯತೆ ಪ್ರಶಸ್ತಿ: ಆರೋಗ್ಯ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆ

* ಜಾಗತಿಕ ತಯಾರಿಕಾ ನಾಯಕರ ಪ್ರಶಸ್ತಿ: ಸುಸ್ಥಿರತೆಯ ಗೌರವ

* ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ, ಲಭಿಸಿವೆ ಎಂದು ಕೆಎಸ್‌ಆರ್‌ಟಿಸಿ ಭಾನುವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಕರ್ನಾಟಕ ಸಾರಿಗೆ ವಿಚಾರದಲ್ಲಿ KSRTC ಬಸ್ ಹೊಸ ಹೊಸ ಆವಿಷ್ಕಾರ ಮಾಡುತ್ತಿದೆ. ಅಂತರ ನಗರ ಬಸ್‌ಗಳ ಸುಧಾರಣೆ, ಅಗತ್ಯ ಹೊಸ ಬಸ್‌ಗಳ ಖರೀದಿ, ಐಶಾರಾಮಿ ಮತ್ತು ವಿಶೇಷ ಆರಾಮದಾಯಕ ಪ್ರಯಾಣ ಸೇವೆ ಒದಗಿಸುವುದು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ.

ಮುಖ್ಯವಾಗಿ ನೌಕರರ ಸಿಬ್ಬಂದಿ, ಚಾಲಕರು, ನಿರ್ವಾಹಕರಿಗೆ ಆರೋಗ್ಯ ವಿಮೆ ಸೌಲಭ್ಯ, ಜೀವ ವಿಮೆ ಸೌಲಭ್ಯ ಒದಗಿಸುವು ಮೂಲಕ ಅವರಿಗೆ ಮತ್ತವರ ಕುಟುಂಬಗಳಿಗೆ ಆಸರೆಯಾಗಿದೆ. ಒಂದು ಕೋಟಿ ರೂಪಾಯಿ ಜೀವ ವಿಮೆ ಇದೆ. ವಿಮೆ ಕನಿಷ್ಠ ಮೊತ್ತವನ್ನು ಹೆಚ್ಚಳ ಮಾಡಿದೆ. ಇದಲ್ಲದೇ ಇತ್ತಿಚೆಗೆ ನೌಕರರ ಬೇಡಿಕೆಗಳ ಈಡೇರಿಯ ಭರವಸೆಯನ್ನು ಸರ್ಕಾರ ನೀಡಿದೆ. ಹೀಗೆ ಇದೆಲ್ಲ ಕಾರಣಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಾಧನೆ, ಸೇವೆ ಗುರುತಿಸಿ ರಾಷ್ಟ್ರ ಹಾಗೂ ವಿಶ್ವಮಟ್ಟದ ಪ್ರಶಸ್ತಿಗಳು ಹುಡುಕೊಂಡು ಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+