ಜಯಲಲಿತಾ ಜಾಮೀನು ಅರ್ಜಿ ವಜಾಕ್ಕೆ ಕಾರಣವೇನು?
ಬೆಂಗಳೂರು, ಅ.7: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಯಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. 'ಭ್ರಷ್ಟಾಚಾರ ಪ್ರಕರಣ ತುಂಬಾ ಗಂಭೀರವಾಗಿದ್ದು, ಈ ಸಂದರ್ಭದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ' ಎಂದು ನ್ಯಾ. ಚಂದ್ರಶೇಖರ್ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಹೈಕೋರ್ಟ್ ಹಾಲ್ 28ರಲ್ಲಿ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಬೆಳಗ್ಗೆ ಆರಂಭಗೊಂಡಿತ್ತು. ಮಧ್ಯಾಹ್ನ 3.45ರ ಹೊತ್ತಿಗೆ ಜಯಾ ಅವರಿಗೆ ಜಾಮೀನು ಸಿಕ್ಕಿದೆ ಎಂಬ ಗಾಳಿ ಸುದ್ದಿ ಹಬ್ಬಿತು. ಜಯಾ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದರು. ಅದರೆ, Anti Climx ನಂತೆ ಜಯಾ ಅವರ ಜಾಮೀನು ಅರ್ಜಿ ತಿರಸ್ಕಾರಗೊಂಡ ಸುದ್ದಿ 4.19ರ ಹೊತ್ತಿಗೆ ದೃಢಪಟ್ಟಿದೆ.
ಕಾರಣ 1: ಸರ್ಕಾರಿ ಅಭಿಯೋಜಕ ಜಿ, ಭವಾನಿ ಸಿಂಗ್ ಅವರು ಜಯಲಲಿತಾ ಅವರಿಗೆ ಜಾಮೀನು ನೀಡಲು ತಮ್ಮ ಆಕ್ಷೇಪಣೆ ಏನು ಇಲ್ಲ ಎಂದು ಹೇಳಿದ್ದರು. ಹೀಗಾಗಿ ಜಯಾ ಅವರಿಗೆ ಜಾಮೀನು ಸಿಗುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿ ಬಂದಿತ್ತು.. [ಅಕ್ರಮ ಆಸ್ತಿ ಗಳಿಕೆ ಕೇಸ್: ಟೈಮ್ ಲೈನ್ ]

ನ್ಯಾ.ಚಂದ್ರಶೇಖರ್ ನೀಡಿದ ಆದೇಶದ ಮುಖ್ಯಾಂಶ:
* ಇದು ಗಂಭೀರ ಪ್ರಕರಣವಾಗಿದ್ದರಿಂದ ಜಾಮೀನು ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ
* ಭ್ರಷ್ಟಾಚಾರ ಪ್ರಕರಣ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
* ಈ ಪ್ರಕರಣದಲ್ಲಿ ಅರ್ಜಿದಾರರ ಶಿಕ್ಷೆ ಪ್ರಮಾಣ ತಗ್ಗಿಸಲಾಗುವುದಿಲ್ಲ.
* ಶಿಕ್ಷೆ ತೀರ್ಪು ಅಮಾನತ್ತಿನಲ್ಲಿಡಲಾಗುವುದಿಲ್ಲ.
* ಸಿಆರ್ ಪಿಸಿ ಸೆಕ್ಷನ್ 389 ಈ ಪ್ರಕರಣದಲ್ಲಿ ಅನ್ವಯಿಸಲಾಗುವುದಿಲ್ಲ.
ಜಯಾ ಕೇಸ್ ತೀರ್ಪಿಗೆ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ನೀಡಿದ ತಕ್ಷಣದ ಪ್ರತಿಕ್ರಿಯೆ ಹೀಗಿತ್ತು:
Subramanian Swamy on J Jayalalithaa's bail plea rejected : Am not surprised,this was I had expected. pic.twitter.com/05pQwoVmet
— ANI (@ANI_news) October 7, 2014 ಜೇಠ್ಮಲಾನಿ ವಾದ:ಸಿಆರ್ ಪಿಸಿ ಸೆಕ್ಷನ್ 389ರ ಅನ್ವಯ ಜಯಲಲಿತಾ ಅವರಿಗೆ ಜಾಮೀನು ಮಂಜೂರು ಮಾಡಬೇಕು. ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ಮಂಜೂರಾಗಿದೆ. ಹೀಗಾಗಿ ಜಯಾ ಅವರಿಗೂ ಜಾಮೀನು ನೀಡಬೇಕು ಎಂದು ಜಯಾ ಪರ ವಕೀಲ ರಾಮ್ ಜೇಠ್ಮಲಾನಿ ಅವರು ವಾದ ಮಂಡಿಸಿದ್ದರು.
ಕಾರಣ 2: ಸರ್ಕಾರಿ ಅಭಿಯೋಜಕ ಜಿ, ಭವಾನಿ ಸಿಂಗ್ ಅವರು ಜಯಲಲಿತಾ ಅವರಿಗೆ ಜಾಮೀನು ನೀಡಲು ತಮ್ಮ ಆಕ್ಷೇಪಣೆ ಏನು ಇಲ್ಲ ಎಂದು ಹೇಳಿದ್ದಾರೆ. ಜಾಮೀನು ನೀಡಲು ನ್ಯಾಯಾಧೀಶ ಚಂದ್ರಶೇಖರ್ ಅವರು ವಿಧಿಸಿದ ಷರತ್ತುಗಳೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಕಾಯುತ್ತಿದ್ದೇವೆ ಎಂದು ಜಯಾ ಪರ ವಕೀಲ ದೊರೈ ಪಾಂಡ್ಯನ್ ಹೇಳಿದ್ದರು.
ಕೋರ್ಟ್ ಹಾಲ್ ನಿಂದ ಹೊರ ಬಂದ ದೊರೈ ಪಾಂಡ್ಯನ್ ಅವರ ಹೇಳಿಕೆ ಕೇಳಿಸಿಕೊಂಡ ಸುತ್ತಾ ಮುತ್ತ ನೆರದಿದ್ದ ಪುರಚ್ಚಿ ತಲೈವಿ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಈ ನಡುವೆ ಪರಪ್ಪನ ಅಗ್ರಹಾರ ಜೈಲಿನ ಬಳಿ ಸಂಭ್ರಮದಿಂದ ಕುಣಿದಾಡುತ್ತಿದ್ದ ಜಯಾ ಅವರ ಅಭಿಮಾನಿ ಸರಳಾ ಎಂಬುವರು ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ನಡೆದಿದ್ದು ಅವರನ್ನು ಸೈಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications