ಟಾಟಾ ಸಮೂಹದಿಂದ 150 ಸರ್ಕಾರಿ ಐಟಿಐ ಅಭಿವೃದ್ಧಿ: ಅಶ್ವಥ್ ನಾರಾಯಣ

ಬೆಂಗಳೂರು, ಸೆಪ್ಟೆಂಬರ್ 17: ಯುವಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯಗಳನ್ನು ಕಲಿಸಿದರೆ ಮತ್ತು ಸದೃಢ ಹಾಗೂ ಸ್ವಾವಲಂಬಿ ಭಾರತ ಕಟ್ಟಲು ಸಾಧ್ಯವಾಗುತ್ತದೆ, ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಪೀಣ್ಯದಲ್ಲಿರುವ ಸರ್ಕಾರಿ ಐಟಿಐನಲ್ಲಿ ಆಯೋಜಿಸಿದ್ದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಪ್ರಪ್ರಥಮ ಐಟಿಐ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಾಕಿ ಉಳಿದಿರುವ 120 ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸಲಾಗುವುದು. ಇದರ ಜೊತೆಗೆ ಈ ವರ್ಷ ನೂತನವಾಗಿ 30 ಐಟಿಐಗಳನ್ನು ಸ್ಥಾಪಿಸಲಾಗುವುದು ಎಂದರು.

ಸರ್ಕಾರವು ಐಟಿಐ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲಾಗುವುದು. ಜತೆಗೆ, ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಇದರ ಭಾಗವಾಗಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅವರು 2021-22ರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು.

Karnataka Govt Will Upgrading 120 ITI Organization, 30 was established

ಟಾಟಾ ಸಮೂಹದ ನೆರವಿನೊಂದಿಗೆ 150 ಸರ್ಕಾರಿ ಐಟಿಐ ಅಭಿವೃದ್ಧಿ:

ಟಾಟಾ ಸಮೂಹದ ನೆರವಿನಲ್ಲಿ ಈಗಾಗಲೇ 150 ಸರ್ಕಾರಿ ಐಟಿಐಗಳನ್ನು ಅಭಿವೃದ್ಧಿ ಪಡಿಸಿ, ಹೊಸ ಕೋರ್ಸುಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ 4,500 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.

ಜಪಾನ್, ಚೀನಾ ತರಹದ ದೇಶಗಳು ಉತ್ಪಾದನಾ ವಲಯದಲ್ಲಿ ಸಾಕಷ್ಟು ಸಾಧಿಸಿವೆ. ಭಾರತ ಮತ್ತು ಕರ್ನಾಟಕ ಕೂಡ ಸೇವಾ ವಲಯದ ಜತೆಗೆ ಉತ್ಪಾದನಾ ರಂಗದಲ್ಲಿ ಮುಂಚೂಣಿಗೆ ಬರಬೇಕು. ಇದರಲ್ಲಿ ಐಟಿಐ ಪದವೀಧರರ ಪಾತ್ರವು ನಿರ್ಣಾಯಕವಾಗಿದೆ ಎಂದು ಸಲಹೆ ನೀಡಿದರು. ಸಮಾಜದಲ್ಲಿ ಎಲ್ಲೆಡೆ ಕೇವಲ ಪದವಿ ಶಿಕ್ಷಣದ ಮೋಹವಿದೆ. ಆದರೆ ಇವತ್ತು ಕೌಶಲ್ಯಗಳಿಗೆ ಮಹತ್ವ ಬಂದಿದೆ. ಇದನ್ನು ಯುವಜನರು ಅರ್ಥ ಮಾಡಿಕೊಂಡು ಮುನ್ನುಗ್ಗಬೇಕು. ಇದರಿಂದ ಕನಸಿನ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ ಎಂದು ಕಿವಿಮಾತು ಹೇಳಿದರು.

14 ಸಾವಿರ ಐಟಿಐಗಳಲ್ಲಿ ಘಟಿಕೋತ್ಸವ:

ಪ್ರಧಾನಿ ಮೋದಿಯವರು ವಿಶ್ವಕರ್ಮ ಸಮುದಾಯದ ಕೌಶಲ್ಯವನ್ನು ಗೌರವಿಸಿ, 'ವಿಶ್ವಕರ್ಮ ದಿನ'ದಂದೇ ದೇಶದಲ್ಲಿ ಇರುವ ಎಲ್ಲಾ 14 ಸಾವಿರ ಐಟಿಐಗಳಲ್ಲಿ ಘಟಿಕೋತ್ಸವ ಆಚರಿಸುವ ಸಂಪ್ರದಾಯ ಆರಂಭಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತೆ ಕೆ.ಜ್ಯೋತಿ, ಐಎಸ್ಡಿಎಸ್ ಪ್ರಾಂತೀಯ ನಿರ್ದೇಶಕ ಬಿ ಎನ್ ಶ್ರೀಧರ್ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+