• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಪರಿಣಾಮ; ಬಿಬಿಎಂಪಿ ಚುನಾವಣೆ ಮುಂದೂಡಿಕೆ?

|

ಬೆಂಗಳೂರು, ಮೇ 08 : ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಕರ್ನಾಟಕ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಿದೆ. ಈ ಕುರಿತು ಅಧಿಕೃತ ಆದೇಶ ಇನ್ನೂ ಪ್ರಕಟವಾಗಬೇಕಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಲು ಸರ್ಕಾರ ಬಯಸಿದೆ. ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು 6 ತಿಂಗಳ ಕಾಲ ಮುಂದೂಡಲಾಗುತ್ತದೆ.

ಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿ

198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯಲ್ಲಿ ಪ್ರಸ್ತುತ ಬಿಜೆಪಿಯೇ ಅಧಿಕಾರದಲ್ಲಿದೆ. ಬಿಬಿಎಂಪಿಯ ಮೇಯರ್ ಮತ್ತು ಉಪ ಮೇಯರ್ ಅವಧಿ ಸೆಪ್ಟೆಂಬರ್ 10ಕ್ಕೆ ಕೊನೆಗೊಳ್ಳಲಿದೆ. ಇದರೊಳಗೆ ಚುನಾವಣೆ ನಡೆಯಬೇಕು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಇದೇ ತಿಂಗಳು ನಡೆಯಬೇಕಿದ್ದ ಗ್ರಾ.ಪಂ. ಚುನಾವಣೆ ಮುಂದೂಡಿಕೆ

ಆದರೆ, ಕೊರೊನಾ ಸೋಂಕು, ಲಾಕ್ ಡೌನ್ ಪರಿಣಾಮ ಬಿಬಿಎಂಪಿ ಚುನಾವಣೆ ಆಗಸ್ಟ್ 2 ಅಥವ 3ನೇ ವಾರದಲ್ಲಿ ನಡೆಯುವುದು ಅನುಮಾನವಾಗಿದೆ. ಆರು ತಿಂಗಳು ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ಚರ್ಚೆ ಆರಂಭವಾಗಿದೆ.

ಲಾಕ್ ಡೌನ್ ; ವಲಸೆ ಕಾರ್ಮಿಕರ ನೆರವಿಗೆ ನಿಂತ ಬಿಬಿಎಂಪಿ

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ನ್ಯಾಯಾಲಯದ ಸೂಚನೆ ಇದೆ

ನ್ಯಾಯಾಲಯದ ಸೂಚನೆ ಇದೆ

ಈ ಬಾರಿ ಮೇಯರ್ ಮತ್ತು ಉಪ ಮೇಯರ್ ಅವಧಿಯ ಜೊತೆಗೆ ಪಾಲಿಕೆಯ ಅವಧಿಯೂ ಮುಕ್ತಾಯಗೊಳ್ಳಲಿದ್ದು ಹೊಸದಾಗಿ ಚುನಾವಣೆ ನಡೆಯಬೇಕಿದೆ. ಆಗಸ್ಟ್ 2 ಅಥವ 3ನೇ ವಾರದಲ್ಲಿ ಚುನಾವಣೆಯ ನಡೆಯಬೇಕಿದೆ. ನ್ಯಾಯಾಲಯ ಸಹ ಸಕಾಲದಲ್ಲಿ ಚುನಾವಣೆ ನಡೆಸಿ ಎಂದು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.

ವಾರ್ಡ್ ಪುನರ್ ವಿಂಗಡನೆ

ವಾರ್ಡ್ ಪುನರ್ ವಿಂಗಡನೆ

ಈಗ ಬಿಬಿಎಂಪಿ ಚುನಾವಣೆ ನಡೆಸಬೇಕಾದರೆ 2011ರ ಜನಗಣತಿ ಪ್ರಕಾರ ವಾರ್ಡ್ ಪುನರ್ ವಿಂಗಡನೆ ನಡೆಯಬೇಕಿದೆ. ಪುನರ್ ವಿಂಗಡನೆ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕಾರ ಮಾಡಿ, ನಂತರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕು.

ನ್ಯಾಯಾಲಯದ ಮೆಟ್ಟಿಲೇರಬಹುದು

ನ್ಯಾಯಾಲಯದ ಮೆಟ್ಟಿಲೇರಬಹುದು

ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ಇಲಾಖೆಗಳು ಬ್ಯುಸಿಯಾಗಿವೆ. ಆದ್ದರಿಂದ, ಈಗ ವಾರ್ಡ್ ಪುನರ್ ವಿಂಗಡನೆ ನಡೆಯುವುದು ಕಷ್ಟ. ಒಂದು ವೇಳೆ ವಿಂಗಡನೆ ನಡೆದರೂ ಬಿಬಿಎಂಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಬಹುದು. ಆದ್ದರಿಂದ, ಸದ್ಯಕ್ಕೆ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಕಡಿಮೆ ಇದೆ.

ಬಿಜೆಪಿ ಅಧಿಕಾರದಲ್ಲಿದೆ

ಬಿಜೆಪಿ ಅಧಿಕಾರದಲ್ಲಿದೆ

2015ರಿಂದ 2019ರ ತನಕ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಾಲಿಕೆಯ ಅಧಿಕಾರವನ್ನು ಪಡೆದುಕೊಂಡಿದೆ. ಈಗ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಇದೆ. ಆದ್ದರಿಂದ, ಚುನಾವಣೆ ನಡೆದರೆ ಪಾಲಿಕೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆಯಲಿದೆ.

English summary
Karnataka government may postpone Bruhat Bengaluru Mahanagara Palike (BBMP) election due to coronavirus outbreak. Mayor and Deputy mayor term come to an end in the month of September. Election should be held before that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X