Bengaluru 2nd International Airport: ಈ ಭಾಗದಲ್ಲಿ ಏರ್‌ಪೋರ್ಟ್ ನಿರ್ಮಿಸಲು ಸರ್ಕಾರ ಒಲವು, ಎಲ್ಲಿ?
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Second Airport) ನಿರ್ಮಾಣಕ್ಕೆ ಸ್ಥಳ ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. ಹಾಲಿ ಕೆಂಪೇಗೌಡ ವಿಮಾನ ನಿಲ್ದಾಣ (KIA) ದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಎರಡನೇ ವಿಮಾನ ನಿಲ್ದಾಣ ಬೆಂಗಳೂರಿಗೆ ಅಗತ್ಯವಿದೆ ಎಂದು ಸರ್ಕಾರ ಮನಗಂಡು ಈ ಹಿಂದೆ ಏರ್‌ಪೋರ್ಟ್ ಯೋಜನೆ ಆರಂಭೀಸಲು ಮೂರು ಜಾಗ ಗುರುತಿಸಿತ್ತು. ಆದರೆ ಯಾವುದು ಫೈನಲ್ ಆಗಿಲ್ಲ.
ಇದೀಗ ರಾಜ್ಯ ಸರ್ಕಾರ ಕನಕಪುರ ಮತ್ತು ಬನ್ನೇರುಘಟ್ಟ ರಸ್ತೆಗಳ ಕಡೆಗೆ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಮನಸ್ಸು ಮಾಡಿದೆ ಎಂದು ಹೇಳಲಾಗುತ್ತಿದೆ. ಮೊದಲು ಕನಕಪುರ ಹಾರೋಹಳ್ಳಿ ಕಡೆಗೆ ಎರಡು ಸ್ಥಳ, ಕುಣಿಗಲ್-ನೆಲಮಂಗಲ ಹೆದ್ದಾರಿ ಸಮೀಪ ಒಂದು ಜಾಗ ಗುರುತಿಸಲಾಗಿತ್ತು. ಕೇಂದ್ರದ ಎಎಐ ತಂಡ ನಗರಕ್ಕೆ ಬಂದು ಎಲ್ಲ ಸ್ಥಳಗಳನ್ನು ಪರಿಶೀಲನೆ ಮಾಡಿಕೊಂಡು ಹೋಗಿತ್ತು. ಅದರ ವರದಿ ಬರಬೇಕಿದೆ.

ಇದೇ ವೇಳೆ ತುಮಕೂರು ಭಾಗದಲ್ಲಿ ಬೆಂಗಳೂರು ಎರಡನೇ ಏರ್‌ಪೋರ್ಟ್ ನಿರ್ಮಿಸಿದರೆ ಅನೇಕ ಜಿಲ್ಲೆಗಳಿಗೆ ಒಳಿತಾಗುತ್ತದೆ. ಮಧ್ಯ ಕರ್ನಾಟಕ ಅಭಿವೃದ್ಧಿ ಆಗಲಿದೆ ಎಂದು ಖದ್ದು, ಸಚಿವರು ಶಾಸಕರೇ ಸರ್ಕಾರವನ್ನು ಒತ್ತಾಯಿಸಿದ್ದರು. ಇದೀಗ ರಾಜ್ಯ ಸರ್ಕಾರವು ಕನಕಪುರ, ಬನ್ನೇರುಘಟ್ಟ ರಸ್ತೆಗಳ ಕಡೆಗೆ ಏರ್‌ಪೋರ್ಟ್ ನಿರ್ಮಿಸಲು ಒಲವು ಹೊಂದಿರುವುದು ಗೊತ್ತಾಗಿದೆ.
ದೇವನಹಳ್ಳಿಯಲ್ಲಿರುವ ಹಾಲಿ ಏರ್‌ಪೋರ್ಟ್‌ನಲ್ಲಿ ವಾರ್ಷಿಕ 85 ಮಿಲಿಯನ್ ಜನರು ಪ್ರಯಾಣ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಮುಂದಿನ ಹತ್ತು ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಒಂದು ವೇಳೆ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಿಸದಿದ್ದರೆ ಜನರು ಭವಿಷ್ಯದಲ್ಲಿ ತಮಿಳುನಾಡಿನ ಹೊಸೂರು ಅನ್ನು ಬದಲಿ ವಿಮಾನ ಸಾರಿಗೆಗೆ ಅವಲಂಭಿಸುವ ನಿರೀಕ್ಷೆ ಇದೆ.
ಸವಾಲುಗಳನ್ನು ದಾಟಿ ಯೋಜನೆ ಆರಂಭಿಸಬೇಕು
ಸದ್ಯ ಎದುರಾಗಿರುವ ಭೌಗೋಳಿಕ, ಹಣಕಾಸು ಹಾಗೂ ಇನ್ನಿತರ ಸವಾಲುಗಳನ್ನು ದಾಟಿ ಒಮ್ಮತದಿಂದ ಬೆಂಗಳೂರಿಗೆ 50-100 ಕಿಲೋ ಮೀಟರ್ ಒಳಗಿನ ಪ್ರದೇಶಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯತೆ ಇದೆ. ಈಗಾಗಲೇ ಮೂರು ಸ್ಥಳಗಳನ್ನು ಎಎಐ ಟೀಂ ಪರಿಶೀಲಿಸಿಕೊಂಡು ಹೋಗಿದೆ. ಅದರ ವರದಿ ಬರಬೇಕಿದೆ. ಮತ್ತೊಂದೆಡೆ ತಮಿಳುನಾಡಿನ ಹೊಸೂರು ಬಳಿಕ ಆ ಸರ್ಕಾರ ಏರ್‌ಪೋರ್ಟ್ ನಿರ್ಮಿಸಲು ಬೆಂಗಳೂರಿಗೆ ಪೈಪೋಟಿ ಒಡ್ಡುತ್ತಲೇ ಇದೆ. ಕರ್ನಾಟಕ ಸರ್ಕಾರ ಹೊಸ ಏರ್‌ಪೊರ್ಟ್ ಯೋಜನೆಗೆ ಮತ್ತಷ್ಟು ವೇಗ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಮನವೊಲಿಸಿ, ಸೂಕ್ತ ಆಯ್ಕೆ ಮಾಡಿ ಯೋಜನೆ ಆರಂಭಿಸುವಂತೆ ಬೆಂಗಳೂರಿಗರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications