Get Updates
Get notified of breaking news, exclusive insights, and must-see stories!

Bengaluru Golf Club: ಮತ್ತೆ 30 ವರ್ಷ ಲೀಸ್ ಕೊಡಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು, ಏಪ್ರಿಲ್ 20: ಬೆಂಗಳೂರಿನ ಹೃದಯ ಭಾಗದಲ್ಲಿರುವ ಮುಖ್ಯಮಂತ್ರಿಗಳ ಗೃಹ ನಿವಾಸ ಕೃಷ್ಣಾ ಎದುರಿನ ಪ್ರತಿಷ್ಠಿತ ಮೈದಾನದಿಂದ ಗಾಲ್ಫ್ ಕ್ಲಬ್ ಅನ್ನು ಹೊರಹಾಕಲು ನಿರ್ಧರಿಸಿದ್ದ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿದೆ.

ಐದು ದಶಕದ ಲೀಸ್ ಮುಗಿದ ಹಿನ್ನಲೆಯಲ್ಲಿ ಜಾಗದಿಂದ ಗಾಲ್ಫ್ ಕ್ಲಬ್ ಅನ್ನು ಹೊರಹಾಕುವ ಬದಲಾಗಿ ಲೀಸ್‌ ಅನ್ನು ಮತ್ತೆ ಮುಂದಿನ 30 ವರ್ಷ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕಳೆದ ತಿಂಗಳ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.

Bengaluru: Karnataka Govt Has Decided To Golf Club Land Lease Extend Next 30 Years

ಸರ್ಕಾರದ ಈ ಲೀಸ್ ವಿಸ್ತರಣೆಯ 'ಯು-ಟರ್ನ್‌' ನಿರ್ಧಾರದಿಂದ ಕೆಲವು ರಾಜಕಾರಣಿಗಳು ಸೇರಿದಂತೆ ಅಧಿಕಾರಶಾಹಿಗಳು ಅದರ ಲಾಭ ಪಡೆಯಲು ಹವಣಿಸುತ್ತಿವೆ. ಇವರೆಲ್ಲಿ ಇದರ ಸದಸ್ಯರ ಪಡೆಯಲು ಚಿಂತನೆ ನಡೆಸಿದ್ದಾರೆ.

ಕಳೆದ ತಿಂಗಳು ಮಾರ್ಚ್ 6ರಂದು ಹೊರ ಬಿದ್ದ ಆದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಆರಂಭವಾಗುವುದಕ್ಕು ಮೊದಲಿನ ಕೆಲವೇ ವಾರಗಳಲ್ಲಿ ಸರ್ಕಾರ ಈ ಪ್ರತಿಷ್ಠಿತ ಭೂಮಿಯ ಲೀಸ್ ಅನ್ನು 30 ವರ್ಷಗಳ ಕಾಲ ವಿಸ್ತರಣೆ ಮಾಡುವುದಾಗಿ ಸರ್ಕಾರ ಘೋಷಿಸಿತು.

ಯು ಟರ್ನ್‌ ನಿರ್ಧಾರ ತೆಗೆದುಕೊಂಡ ಸರ್ಕಾರ

1971 ರಲ್ಲಿ ಗಾಲ್ಪ್ ಕ್ಲಬ್ ಗೆ ಅಲ್ಲಿನ ಮೈದಾನವನ್ನು 50 ವರ್ಷಗಳ ಅವಧಿಗೆ ಲೀಸ್ ನೀಡಲಾಗಿತ್ತು. ಆದರೆ ಆ ಲೀಸ್ ಅವಧಿ 2021 ರಲ್ಲಿಯೇ ಮುಕ್ತಾಯಗೊಂಡಿತ್ತು. ನಂತರ ಮುಂದೇನು ಎಂಬ ಪ್ರಶ್ನೆ ಕಾಡಿತ್ತು. ಆ ಬಗ್ಗೆ ಯಾವ ನಿರ್ಧಾರವನ್ನು ಕೈಗೊಳ್ಳದ ಬಿಜೆಪಿ ಸರ್ಕಾರ ಅವಧಿ ವಿಸ್ತರಣೆಗೂ ಮುನ್ನ ಮೈದಾನದಿಂದ ಗಾಲ್ಫ್‌ ಕ್ಲಬ್‌ ಅನ್ನು ಹೊರ ಹಾಕುವ ಬಗ್ಗೆ ಮಾತನಾಡಿತ್ತು. ಇದೀಗ ಸರ್ಕಾರ ಯು-ಟರ್ನ್ ತೆಗೆದುಕೊಂಡಿದೆ.

Bengaluru: Karnataka Govt Has Decided To Golf Club Land Lease Extend Next 30 Years

ಸರ್ಕಾಕವು ಗಾಲ್ಪ್‌ ಕ್ಲಬ್‌ನ ಸದಸ್ಯತ್ವನ್ನು ಕೆಲವು ವ್ಯಕ್ತಿಗಳಿಗೆ ಶಾಸ್ವತವಾಗಿ ನೀಡಿದೆ. ಈ ಮೂಲಕ ಇನ್ನೂ ಎರಡು ಮೂರು ದಶಕಗಳ ಕಾಲ ಗಾಲ್ಪ್ ಕ್ಲಬ್‌ ಅನ್ನು ಉಳಿಸಿಕೊಳ್ಳುವ ಯತ್ನ ಇದಾಗಿದೆ. ಇಲ್ಲಿ ಪ್ರಭಾವಿ ವ್ಯಕ್ತಿಗಳು ಸದಸ್ಯರಾಗಿದ್ದಾರೆ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ. ಈ ಕುರಿತು ಮಾಹಿತಿಗೆ ಡೆಕ್ಕನ್ ಹೆರಾಲ್ಡ್ ಕ್ಲಬ್ ಕ್ಯಾಪ್ಟನ್ ಎ ಸಿ ಸುರೇಶ್ ಚಂದ್ರ ಮತ್ತು ಕಾರ್ಯದರ್ಶಿ ಡಿ ಎನ್ ವಸಂತ್ ಕುಮಾರ್ ಅವರನ್ನು ಸಂಪರ್ಕಿಸಿದರೂ ಅವರು ಲಭ್ಯವಾಗಿಲ್ಲ.

2051ರವರೆಗೆ ಲೀಸ್ ವಿಸ್ತರಣೆ

ಲಭ್ಯ ದಾಖಲಾತಿಗಳ ಪ್ರಕಾರ ಸುಮಾರು 60 ಎಕರೆ ಮೈದಾನವನ್ನು ರಾಜ್ಯ ಸರ್ಕಾರವು 2051 ರವರೆಗೆ ವಿಸ್ತರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೈದಾನವು ಕುಮಾರ ಕೃಪಾ ರಸ್ತೆ ಮತ್ತು ಸ್ಯಾಂಕಿ ರಸ್ತೆಗೆ ಹೊಂದಿಕೊಂಡಿದೆ. ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿದೆ. ಸರ್ಕಾರವು ವಾರ್ಷಿಕ ಬಾಡಿಗೆ ಕ್ಲಬ್‌ನ ಒಟ್ಟು ಆದಾಯದ ಕೇವಲ ಶೇಕಡಾ 2ರಷ್ಟು ಮಾತ್ರ ನಿಗದಿ ಮಾಡಿದೆ. ಇದು 2013-14 ರಿಂದ ಪೂರ್ವಾನ್ವಯ ಶೇಕಡಾ 10 ರಷ್ಟು ಸೆಸ್ ಸಂಗ್ರಹಿಸುತ್ತಿದೆ.

ಈ ಗಾಲ್ಫ್ ಕ್ಲಬ್‌ನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೂ ಸಹ ಕ್ಲಬ್ ಸದಸ್ಯತ್ವದ ನಿಯಮಗಳಲ್ಲಿ ಒಂದಷ್ಟು ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದೆ. ಸರ್ಕಾರವು ಮೈದಾನದಿಂದ ಗಾಲ್ಫ್‌ ಕ್ಲಬ್‌ ಅನ್ನು ಹೊರ ಹಾಕುವ ಬಗ್ಗೆ, ಕ್ಲಬ್‌ನ ಮದ್ಯದ ಪರವಾನಗಿ ರದ್ದು ಕುರಿತು ಲೀಸ್ ಮುಗಿದ ಮೂರು ತಿಂಗಳ ನಂತರ ಆದೇಶಿಸಿತ್ತು ಎನ್ನಲಾಗಿದೆ.

ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ 2022 ರಲ್ಲಿ ಈ ಕ್ಲಬ್ ಅನ್ನು ಸ್ಥಳಾಂತರಿಸುವಂತೆ ಶಿಫಾರಸು ಮಾಡಿತ್ತು. ಪ್ರತಿಷ್ಠಿತ ಕ್ಲಬ್‌ನ ಸದಸ್ಯತ್ವವು ಹೆಚ್ಚಾಗಿ ಗಾಲ್ಫ್ ಆಟಗಾರರಿಗೆ ಸೀಮಿತವಾಗಿದೆ. ಹೀಗಿದ್ದರು ಶಾಸಕರು ಮತ್ತು ಐಎಎಸ್ ಅಧಿಕಾರಿಗಳು ಕ್ಲಬ್‌ಗೆ ಹಿಂಬಾಗಿಲ ಪ್ರವೇಶ ಪಡೆಯುತ್ತಿದ್ದಾರೆ ಎಂದು ಒಳಗಿನ ಸಿಬ್ಬಂದಿ ಆರೋಪಿಸಿದ್ದಾರೆ.

ಕೆಲವು ಸದಸ್ಯರು ಇಲ್ಲಿನ ಅಜೆಂಡಾವನ್ನು ಆಕ್ಷೇಪಿಸಿದ್ದಾರೆ. ಸರ್ಕಾರ ಯೂಟರ್ನ್ ನಿರ್ಧಾರವು ಕ್ಲಬ್ ಒಳಗೆ ಭ್ರಷ್ಟಾಚಾರ ನಡೆಯಲು ಕಾರಣವೂ ಆಗಬಹುದು ಎಂದು ಅಂದಾಜಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+