ಗುತ್ತಿಗೆದಾರರ ಬಿಲ್ ಪಾವತಿಗೆ ಸಾಲ ಪಡೆಯಲು ಬಿಬಿಎಂಪಿಗೆ ಅನುಮತಿ
ಬೆಂಗಳೂರು ನಗರ ವ್ಯಾಪ್ತಿಯ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಹೊಸ ಯೋಜನೆ ತರಲಾಗುತ್ತಿದೆ. ಇದರಡಿ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗಲಿದೆ. ಯಾವ ವ್ಯವಸ್ಥೆಯಡಿ ಪಾವತಿಯಾಗಲಿದೆ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 07: ಬೆಂಗಳೂರು ನಗರ ವ್ಯಾಪ್ತಿಯ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ 400 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ಪಡೆಯಲು ಬಿಬಿಎಂಪಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಒಂದು ವಿನೂತನ ಯೋಜನೆ ತರುತ್ತಿದೆ. ಅದರಿಂದಲೇ ಎರಡು ವರ್ಷಗಳವರೆಗೆ ಬಾಕಿ ಬಿಲ್ ಪಾವತಿಗೆ ಕಾಯುತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿಯಾಗಲಿದೆ. ಗುತ್ತಿಗೆದಾರರು ಬ್ಯಾಂಕ್ ಬಡ್ಡಿದರ ಪಾವತಿಸಲು ಈ ಹೊ ವ್ಯವಸ್ಥೆ ಸಹಕಾರಿಯಗಲಿದೆ. ಒಟ್ಟಾರೆ ಗುತ್ತಿಗೆದಾರರಿಗೆ 2020-2021, 2021-2022 ಹಾಗೂ 2022-2023 ವರ್ಷಗಳಲ್ಲಿನ ಕಾಮಗಾರಿ ಹಣ 2,782 ಕೋಟಿ ರೂ. ಬರಬೇಕಿದೆ.
ಗುತ್ತಿಗೆದಾರರ ಬಾಕಿ ಬಿಲ್‌ಗಳ ತೆರವು ಮಾಡಲು ಹೊಸ ಯೋಜನೆಯಲ್ಲಿ ನಗದು ಕೊರತೆ ಇತ್ತು. ಹೀಗಾಗಿಯೇ ರಾಜ್ಯ ಸರ್ಕರ ಹಣ ಪಡೆಯಲು ಬಿಬಿಎಂಪಿ ಸಮ್ಮತಿಸಿದೆ. ಅದಕ್ಕಾಗಿ ವಿನೂತನ ಯೋಜನೆ ಹೊರತರಲು ಬ್ಯಾಂಕ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಬಿಬಿಎಂಪಿಗೆ ಸೂಚಿಸಿದೆ.

ಯೋಜನೆಯಡಿ ಆಯ್ಕೆಯಾದ ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರ ಪಟ್ಟಿಯನ್ನು ಸಾರ್ವಜನಿಕ ಡೊಮೈನ್‌ನಲ್ಲಿ ಲಭ್ಯವಾಗುವಂತೆ ಅಳವಡಿಸಬೇಕು. ಆ ಮೂಲಕ ಪಾರದರ್ಶಕ ಕಾರ್ಯವಿಧಾನವನ್ನು ರಚಿಸಲು ಸರ್ಕಾರ ತಿಳಿಸಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ (UDD) ಆದೇಶ ಹೊರಡಿಸಿದೆ. ಜೇಷ್ಠತಾ ಪಟ್ಟಿ ಆಧರಿಸಿ ಬಾಕಿ ಬಿಲ್ ಪಾವತಿಯಾಗಲಿದೆ.
ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು 'ಆಪ್ಶನಲ್ ವೆಂಡರ್ ಬಿಲ್ ಡಿಸ್ಕೌಂಟಿಂಗ್ ವ್ಯವಸ್ಥೆ' (ಒವಿಡಿಎಸ್) ತರಲಾಗುತ್ತಿದೆ. ಇದರಿಂದಲೇ ಕಾಮಗಾರಿಗಳ ಬಾಕಿ ಬಿಲ್ ಗುತ್ತಿಗೆದಾರರಿಗೆ ಪಾವತಿ ಆಗಲಿದೆ. ಈ ವ್ಯವಸ್ಥೆಯಲ್ಲೂ ಬಿಲ್‌ಗಳ ಜೇಷ್ಠತೆಯಡಿ ಬಿಬಿಎಂಪಿ ಹಣ ನೀಡಲಿದೆ. ಈ ವ್ಯವಸ್ಥೆಯಲ್ಲಿ ಸುಳ್ಳು ಬಿಲ್ ಸಲ್ಲಿಸಿ ಹಣ ಪಡೆಯಲು ಅವಕಾಶ ಇಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಗುತ್ತಿಗೆದಾರರ ಕೆಲಸವನ್ನು ಕಾರ್ಯಗತಗೊಳಿಸಲು ಮೂರನೇ ವ್ಯಕ್ತಿಗಳಿಂದ ಎರವಲು ಪಡೆದ ಅಥವಾ ಆರ್ಥಿಕ ಸಹಾಯವನ್ನು ಪಡೆದವರಿಗೆ ಈ ಯೋಜನೆ/ವ್ಯವಸ್ಥೆಯಿಂದ ವಿಶೇಷ ಪ್ರಯೋಜನ ಸಿಗಲಿದೆ. ಮೂಲಗಳ ಪ್ರಕಾರ, ಕಾಮಗಾರಿಗಳಿಗೇ ಹೆಚ್ಚು ಹಣ ಖರ್ಚು ಮಾಡುತ್ತಿರುವ ಬಿಬಿಎಂಪಿ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿಯೇ ಎರಡು ವರ್ಷಗಳ ಬಿಲ್ ಪಾವತಿ ಆಗಿಲ್ಲ ಎನ್ನಲಾಗಿದೆ.












Click it and Unblock the Notifications