KAS Exam: ಯುಪಿಎಸ್‌ಸಿ ಮಾದರಿಯಂತೆ ಕೆಪಿಎಸ್‌ಸಿ ಪರೀಕ್ಷೆ ನಡೆಸಿ: ಬಸನಗೌಡ ಯತ್ನಾಳ್

ಬೆಂಗಳೂರು, ಜನವರಿ 02: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇತ್ತೀಚೆಗೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ನೇಮಕಾತಿ ಸಂಬಂಧ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲೂ ಸಹ ಲೋಪದೋಷಗಳು ಕಂಡು ಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಭ್ಯರ್ಥಿಗಳು ಕನಸುಗಳ ಜೊತೆಗೆ ಆಟವಾಡಬೇಡಿ ಎಂದು ಸರ್ಕಾರ ಹಾಗೂ ಆಯೋಗದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಡಿಸೆಂಬರ್ 29 ರಂದು ಮರು ಪರೀಕ್ಷೆ ನಡೆಯಿತು. ಮೊದಲಿನಂತ ಈ ವೇಳೆಯು ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪುಗಳಾಗಿವೆ. ಆಯೋಗದ ಈ ನಡೆಗೆ ಗುಡುಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಪದೇ ಪರೀಕ್ಷಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Karnataka Govt Conduct KPSC Exam on Pattern of UPSC Exam Basanagouda Patil Yatnal urges

ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲವೇ?. ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ತಪ್ಪುಗಳನ್ನು ಮಾಡುತ್ತಿರುವುದು ಆಯೋಗದ ಅಸಮರ್ಥತೆ, ನಿರುತ್ಸಾಹ, ಬೇಜವಾಬ್ದಾರಿ, ಜಡ್ಡುಗಟ್ಟಿರುವ ಮನಃಸ್ಥಿತಿಗೆ ಹಿಡಿದಿರುವ ಕೈಗನ್ನಡಿ ಎಂದು ಅವರು ದೂರಿದರು.

UPSC ಮಾದರಿಯಲ್ಲಿ KPSC ಪರೀಕ್ಷೆ ನಡೆಯಲಿ

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು. ಕೇವಲ ಹೇಳಿಕೆಗಳಿಗೆ ಸೀಮಿತ ಆಗಬಾರದು. ಪರೀಕ್ಷಾರ್ಥಿಗಳ ಹತ್ತಾರು ತಿಂಗಳ ಪರಿಶ್ರಮ ಪಟ್ಟಿರುತ್ತಾರೆ. ಅವರು ಶ್ರಮ ನೀರುಪಾಲು ಆಗದಂತೆ ತಡೆಯಬೇಕು. ಅದಕ್ಕಾಗಿ ಆಯೋಗವು UPSC ಮಾದರಿಯಲ್ಲಿ ಲೋಕಸೇವಾ ಆಯೋಗ ಪರೀಕ್ಷೆಯನ್ನು ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳನ್ನು ಮಾಡಿ ಅದಕ್ಕೆ ಕೃಪಾಂಕವನ್ನು ಕೊಡುವುದರಿಂದ ಸರ್ಕಾರದ ಅಥವಾ ಪರೀಕ್ಷಾ ನಿಯಂತ್ರಕರ ತಪ್ಪನು ಮರೆಮಾಚಲು ಸಾಧ್ಯವಿಲ್ಲ. ಆಯೋಗದಲ್ಲಿ ಇಚ್ಛಾಶಕ್ತಿ ಹಾಗೂ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶ್ನೆ ಪತ್ರಿಕೆಗಳಲ್ಲಿ ವಾಕ್ಯ ರಚನೆಯಲ್ಲಿ ಲೋಪ ದೋಷಗಳು, ಪ್ರಶ್ನೆಗಳ ಉತ್ತರದ ಆಯ್ಕೆಗಳೇ ಕಣ್ಮರೆಯಾಗಿವೆ. ಕನ್ನಡದಲ್ಲಿ ಒಂದು, ಆಂಗ್ಲದಲ್ಲಿ ಒಂದು ಅರ್ಥ ನೀಡುವ ವಾಕ್ಯಗಳು ರಚನೆಯಾಗದೆ 'ಪರೀಕ್ಷಾರ್ಥಿ ಸ್ನೇಹಿ' ಯಾಗಿ ಪ್ರಶ್ನೆ ಪತ್ರಿಕೆ ಮೂಡಿ ಬರಬೇಕು.

ಆಯೋಗವು ಇಂತಹ ಪರೀಕ್ಷೆಗಳನ್ನು ಒಂದು ಬಾರಿ ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯಿಸಿರುತ್ತದೆ. ಆಯೋಗ ತನ್ನ ಜವಾಬ್ದಾರಿ ಅರಿತು ಮತ್ತಷ್ಟು ಪ್ರಬುದ್ಧತೆಯಿಂದ, ಪಕ್ವವಾಗಿ, ವೃತ್ತಿಪರತೆಯಿಂದ ಕೆಲಸ ಮಾಡಬೇಕು. ಈ ರೀತಿಯ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+