ಮೋಡ ಬಿತ್ತನೆಗೆ ಚಾಲನೆ; ಮೊದಲ ಫಲಾನುಭವಿ 'ರಾಮನಗರ' ಜಿಲ್ಲೆ

ಕರ್ನಾಟಕ ಸರ್ಕಾರದಿಂದ ಮೋಡ ಬಿತ್ತನೆ ಕಾರ್ಯ ಆರಂಭ. ಜಕ್ಕೂರು ವಿಮಾನ ನಿಲ್ದಾಣದಿಂದ ಕಾರ್ಯಕ್ಕೆ ಚಾಲನೆ. ಅಮೆರಿಕದಿಂದ ಬಂದಿದ್ದ ತಜ್ಞರುಳ್ಳ ವಿಮಾನದಿಂದ ಮೋಡ ಬಿತ್ತನೆ. ರಾಮನಗರ ಜಿಲ್ಲೆ ಮೊದಲ ಫಲಾನುಭವಿ.

ಬೆಂಗಳೂರು, ಆಗಸ್ಟ್ 21: ಬೆಂಗಳೂರಿನಲ್ಲಿ ಮೋಡ ಬಿತ್ತನೆ ಕಾರ್ಯ ಸೋಮವಾರ (ಆಗಸ್ಟ್ 21) ಮಧ್ಯಾಹ್ನ ಆರಂಭವಾಯಿತು. ಜಕ್ಕೂರು ವಿಮಾನ ಏರೋಡ್ರಂ ನಲ್ಲಿ ಅಮೆರಿಕದಿಂದ ಬಂದಿರುವ ವಿಶೇಷ ತಜ್ಞರುಳ್ಳ ವಿಮಾನದ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಮೋಡ ಬಿತ್ತನೆಗೂ ಮೊದಲು ಸಚಿವರಾದ ಎಚ್.ಕೆ. ಪಾಟೀಲ್, ಸೀತಾರಾಂ, ಕೃಷ್ಣ ಭೈರೇಗೌಡ ವಿಮಾನದೊಳಗೆ ಪರಿವೀಕ್ಷಣೆ ನಡೆಸಿದರು. ಮೋಡಗಳ ಮೇಲೆ ಸಿಲ್ವರ್ ಅಯೋಡಿನ್, ಪೊಟ್ಯಾಸಿಯಂ ಐಯೋಡೈಡ್ ಹಾಗೂ ಡ್ರೈ ಐಸ್ ಗಳನ್ನು ಈ ಕಾರ್ಯಾಚರಣೆಗೆ ಸಾಮಾನ್ಯವಾಗಿ ಬಳಸಲಾಗುತ್ತದೆ.

ಆರಂಭಿಕ ಹೆಜ್ಜೆಯಾಗಿ, ರಾಮನಗರದ ಜಿಲ್ಲೆಗಳಲ್ಲಿ ಈ ಮೋಡ ಬಿತ್ತನೆ ಮಾಡಲಾಗುತ್ತಿದೆ. ಬಿತ್ತನೆಯಾದ ಅರ್ಧ ಗಂಟೆಯಲ್ಲೇ ಮಳೆಯೂ ಬೀಳಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಗೆ ಕಳೆದ ವಾರ ಅಂತಿಮ ಸ್ಪರ್ಶ ಸಿಕ್ಕಿತ್ತು. ಅಮೆರಿಕದಿಂದ ಬಂದ ವಿಶೇಷವಾದ ಮೋಡ ಬಿತ್ತುವ ವಿಮಾನವೊಂದು ಜಕ್ಕೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.

ಜಿಕೆವಿಕೆಯಲ್ಲಿ ನಿರಂತರ ಅಧ್ಯಯನ

ಜಿಕೆವಿಕೆಯಲ್ಲಿ ನಿರಂತರ ಅಧ್ಯಯನ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ (ಆರ್ ಡಿಪಿಆರ್) ವತಿಯಿಂದ ಈ ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ. ಮೋಡ ಬಿತ್ತನೆಗೆ ಸೂಕ್ತ ಸಮಯವನ್ನು ಲೆಕ್ಕ ಹಾಕಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಿರಂತರ ಅಧ್ಯಯನ ನಡೆಸಲಾಗಿತ್ತು.

ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಿಕೆ

ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಿಕೆ

ಈ ಮೊದಲು ಆಗಸ್ಟ್ 18ರಂದು ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿತ್ತಾದರೂ, ಆನಂತರ ಕೆಲವಾರು ತಾಂತ್ರಿಕ ಕಾರಣಗಳಿಂದಾಗಿ ಈ ಯೋಜನೆಯನ್ನು ಆಗಸ್ಟ್ 21ಕ್ಕೆ ಮುಂದೂಡಲಾಗಿತ್ತು. ಅದರಿಂದಾಗಿ, ಈಗ ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಸಚಿವರು ಹೇಳಿದ್ದೇನು?

ಸಚಿವರು ಹೇಳಿದ್ದೇನು?

ಈ ಬಗ್ಗೆ ವಿವರಣೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ. ಪಾಟೀಲ್, ''ಹವಾಮಾನ ರೇಡಾರ್ ಗಳು ನೀಡಿದ ಮಾಹಿತಿಯ ಮೇರೆಗೆ ಆಗಸ್ಟ್ 21ರ ದಿನವನ್ನು ನಾವು ಮೋಡ ಬಿತ್ತನೆಗೆ ಆಯ್ಕೆ ಮಾಡಿಕೊಂಡೆವು. ಈ ಯೋಜನೆ ಫಲಕಾರಿಯಾಗುವುದೆಂಬ ವಿಶ್ವಾಸವಿದೆ'' ಎಂದರು.

ಎಸ್ಸೆಂ ಕೃಷ್ಣ ಆಳ್ವಿಕೆಯ ನೆನಪು

ಎಸ್ಸೆಂ ಕೃಷ್ಣ ಆಳ್ವಿಕೆಯ ನೆನಪು

ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ''ಈ ಹಿಂದೆ 2003ರಲ್ಲಿ, ಅಂದಿನ ಎಸ್.ಎಂ. ಕೃಷ್ಣ ಸರ್ಕಾರ, 83 ದಿನಗಳ ಕಾಲ ಸತತವಾಗಿ ಮೋಡ ಬಿತ್ತನೆ ಮಾಡಿತ್ತು. ಇದರಿಂದ ಉತ್ತಮ ಮಳೆಯೂ ಆಗಿತ್ತು'' ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+