KSRTC: ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶಾಕ್; ಶೀಘ್ರದಲ್ಲೆ ಬಸ್ ದರ ಏರಿಕೆ
ಬೆಂಗಳೂರು, ಜೂನ್. 08 : ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದ ಕೆಲವೇ ದಿನಗಳಲ್ಲಿಯೇ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ರಸ್ತೆ ಸಾರಿಗೆ ನಿಗಮದ (ಆರ್‌ಟಿಸಿ) ಬಸ್‌ಗಳ ಪ್ರಯಾಣದರ ಹೆಚ್ಚಳ ಮಾಡುವ ಪ್ರಸ್ತಾಪವಾಗಿದೆ.
ಹೆಚ್ಚುತ್ತಿರುವ ಡೀಸೆಲ್ ಬೆಲೆ, ಬಸ್ ಬಿಡಿಭಾಗಗಳು ಮತ್ತು ಇತರ ಘಟಕಗಳ ಬೆಲೆ ಏರಿಕೆಯಾಗಿರುವ ಜೊತೆಗೆ ನೌಕರರ ವೇತನವೂ ಏರಿಕೆಯಾಗಿದೆ. ಹೀಗಾಗಿಯೇ ರಸ್ತೆ ಸಾರಿಗೆ ನಿಗಮದ (ಆರ್‌ಟಿಸಿ) ಬಸ್‌ಗಳ ನಿರ್ವಹಣಾ ವೆಚ್ಚವು ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಮದ ಮೇಲೆ ಜಾರಿಗೆ ತಂದ ಶಕ್ತಿ ಯೋಜನೆಯ ಬಳಿಕ ರಾಜ್ಯ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ದೊರೆತಿಲ್ಲ. ಈ ಎಲ್ಲಾ ಕಾರಣಗಳಿಂದ ಇದೀಗ ಆರ್‌ಟಿಸಿಗಳು ಟಿಕೆಟ್ ದರ ಏರಿಕೆ ಮಾಡಲು ಮುಂದಾಗಿವೆ.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಇನ್ನು, 2020 ರಲ್ಲಿ ಕೊನೆಯ ಬಾರಿಗೆ ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು. ಇದರ ಡೀಸೆಲ್ ಬೆಲೆ ದಿನ ದಿನಕ್ಕೇ ಏರಿಕೆಯಾಗುತ್ತಿದೆ. 2020 ರಲ್ಲಿ ಒಂದು ಲೀಟರ್ ಡೀಸೆಲ್ 61 ರೂಪಾಯಿತ್ತು. ಈಗ ಸುಮಾರು 90 ರೂಪಾಯಿಗೆ ಏರಿಕೆಯಾಗಿದೆ.
ರಾಜ್ಯದ ಬಸ್‌ಗಳಲ್ಲಿ ಟಿಕೆಟ್ ದರವನ್ನು ಸುಮಾರು 25 ರಿಂದ 30ರಷ್ಟು ಹೆಚ್ಚಿಸಲು ಪ್ರಸ್ತಾವನೆ ಕಳುಹಿಸುವುದಾಗಿ ಬಸ್ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಉಲ್ಲೇಖಿಸಿದೆ. ಟಿಕೆಟ್ ದರವನ್ನು ಹೆಚ್ಚಿಸುವಂತೆ ನಾವು ರಾಜ್ಯ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಗಳಿಕೆಯ ಶೇಕಡಾ 45 ಕ್ಕಿಂತ ಹೆಚ್ಚು ಡೀಸೆಲ್‌ಗೆ ಹೋಗುತ್ತದೆ. ಅದರ ಬೆಲೆ ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚಾಗಿದೆ. ಮೊದಲು ದಿನಕ್ಕೆ 3 ಕೋಟಿ ಖರ್ಚು ಮಾಡಿದ್ದೆವು. ಆದರೆ ಈಗ 5 ಕೋಟಿಗೂ ಹೆಚ್ಚು ಖರ್ಚು ಮಾಡಬೇಕಾಗಿದೆ. ಹೀಗಾದರೇ, ನಮ್ಮ ಆರ್ಥಿಕ ಸಂಪನ್ಮೂಲಗಳನ್ನು ನಾವು ಹೇಗೆ ನಿರ್ವಹಿಸುವುದು ಎಂದು ಪ್ರಶ್ನಿಸಿದ್ದಾರೆ.

ಸಗಟು ಬೆಲೆ ಸೂಚ್ಯಂಕಕ್ಕೆ (ಡಬ್ಲ್ಯುಪಿಐ) ಅನುಗುಣವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾರ್ಷಿಕವಾಗಿ ಹೆದ್ದಾರಿ ಟೋಲ್‌ಗಳನ್ನು ಹೇಗೆ ಹೆಚ್ಚಿಸುತ್ತದೆಯೋ ಹಾಗೆಯೇ ಬಸ್ ನಿಗಮಗಳು ಸಹ ಒಂದು ಸೂತ್ರವನ್ನು ಹೊಂದಿವೆ.
"ಶೇ.20ರಷ್ಟು ಏರಿಕೆಯಾಗಿರುವ ವೇತನ, ಶೇ.46ರಷ್ಟು ಏರಿಕೆಯಾಗಿರುವ ಡೀಸೆಲ್ ಬೆಲೆ ಮತ್ತು ಬಿಡಿಭಾಗಗಳು ಮತ್ತು ಇತರ ಬೆಲೆಗಳನ್ನು ಪರಿಗಣಿಸಿದರೆ, ಟಿಕೆಟ್ ದರವನ್ನು ಸುಮಾರು ಶೇ.40ರಷ್ಟು ಹೆಚ್ಚಿಸಬೇಕಾಗುತ್ತದೆ. ಆದರೆ ಇದು ಸಾರ್ವಜನಿಕ ಬಸ್ ನಿಗಮವಾಗಿದ್ದು, ನಮ್ಮ ಆದ್ಯತೆ ಲಾಭ ಗಳಿಸುವುದಲ್ಲ, ಅದು ಜನರ ಸೇವೆ. ಟಿಕೆಟ್ ದರವನ್ನು ತೀವ್ರವಾಗಿ ಹೆಚ್ಚಿಸಲು ನಾವು ಬಯಸುವುದಿಲ್ಲ, ಅದು ಜನರನ್ನು ಕಷ್ಟಕ್ಕೆ ನೂಕುತ್ತದೆ" ಎಂದು ಹೇಳಿದ್ದಾರೆ.
ಈ ವರ್ಷ ಸರ್ಕಾರವು ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆಯನ್ನು ಅನುಮೋದಿಸುತ್ತದೆ. ಪ್ರತಿ ವರ್ಷ ಬಜೆಟ್‌ನಲ್ಲಿ ಹೊಸ ಬಸ್‌ಗಳನ್ನು ಖರೀದಿಸಲು, ನೌಕರರಿಗೆ ವೇತನವನ್ನು ತೆರವುಗೊಳಿಸಲು, ಕಟ್ಟಡಗಳಿಗೆ ಮತ್ತು ಇತರರಿಗೆ ವಿಶೇಷ ಅನುದಾನವನ್ನು ನಾವು ಪಡೆಯುತ್ತೇವೆ. ಆದರೆ ಶಕ್ತಿ ಯೋಜನೆಯ ನಂತರ, ಸರ್ಕಾರವು ಯಾವುದೇ ಅನುದಾನವನ್ನು ನೀಡುತ್ತಿಲ್ಲ. ನಮ್ಮ ಆದಾಯದಿಂದ ನಮ್ಮ ನಿಗಮಗಳನ್ನು ನಡೆಸಬೇಕಾಗಿದೆ. ಹೆಚ್ಚಳದ ಪ್ರಸ್ತಾವನೆಯು ಶೇಕಡಾ 25-30 ಆಗಿದ್ದರೆ, ಸರ್ಕಾರವು 15-20 ಶೇಕಡಾ ಹೆಚ್ಚಳವನ್ನು ಒಪ್ಪಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications