ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಬಂತು ಹೊಸ ಟ್ಯಾಕ್ಸಿ ಅಗ್ರಿಗೇಟರ್ ಹೊಯ್ಸಳ ಕ್ಯಾಬ್ಸ್

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ಪ್ರವಾಸಿಗರಿಗಾಗಿ ಉತ್ತಮ ಪ್ಯಾಕೇಜ್ ಜೊತೆಗೆ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಬಿ.ಕೆ ಉಮಾ ಶಂಕರ್ ಎಂಬುವರು ಹೊಚ್ಚ ಹೊಸ ಟ್ಯಾಕ್ಸಿ ಅಗ್ರಿಗೇಟರ್ ಸರ್ವೀಸ್ ಹೊಯ್ಸಳ ಕ್ಯಾಬ್ಸ್ ಪರಿಚಯಿಸಿದ್ದಾರೆ.

ಹೊಯ್ಸಳ ಕ್ಯಾಬ್ಸ್ ಸರ್ವಿಸ್ ಕರ್ನಾಟಕದ ಪ್ರಯಾಣ ನಿರ್ವಾಹಕರಾಗಿರುವ ಬಿ.ಕೆ ಉಮಾ ಶಂಕರ್ ಕನಸಿನ ಕೂಸಾಗಿದೆ. ಬಿ.ಕೆ ಉಮಾ ಶಂಕರ್ ಶ್ರೀ ಗಣೇಶ್ ಟೂರ್ಸ್ ಮತ್ತು ಟ್ರಾವೆಲ್ಸ್ ನ ಮಾಲೀಕರು. ಉತ್ತಮ ಪ್ರಯಾಣ ಮತ್ತು ಪ್ರವಾಸ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದಾರೆ.

Karnatakas first local flavour cab aggregator Hoysala Cab Services launched

ಬೆಂಗಳೂರಿನ ಪ್ರವಾಸಿಗರಿಗಾಗಿ ಉತ್ತಮ ಪ್ಯಾಕೇಜ್ ಜೊತೆಗೆ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಹೊಯ್ಸಳ ಕ್ಯಾಬ್ಸ್ ಪ್ರಾರಂಭಿಸಲಾಗಿದೆ.

ಓಲಾ ಕ್ಯಾಬ್ ಸಂಚಾರ ನಿಷೇಧ ಹಿಂಪಡೆದ ಕರ್ನಾಟಕ ಸರ್ಕಾರಓಲಾ ಕ್ಯಾಬ್ ಸಂಚಾರ ನಿಷೇಧ ಹಿಂಪಡೆದ ಕರ್ನಾಟಕ ಸರ್ಕಾರ

"ನಗರದಲ್ಲಿ ಟ್ಯಾಕ್ಸಿ ಅವಶ್ಯಕತೆಗಳನ್ನು ಆಯೋಜಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡು ವ್ಯವಹಾರವನ್ನು ಪ್ರಾರಂಭಿಸಲಾಗಿದ್ದು, ಪ್ರಯಾಣಿಕರಿಗೆ ಅನುಕೂಲ ಒದಗಿಸುವಲ್ಲಿ ಕೈಗೆಟುಕುವ ಬೆಲೆ ಮತ್ತು ವಿಶ್ವಾಸಾರ್ಹ ಪ್ರಯಾಣಕ್ಕೆ ಹೊಯ್ಸಳ ಕ್ಯಾಬ್ಸ್ ಬಳಸಬಹುದಾಗಿದೆ. ಇದು ಕನ್ನಡಿಗರ ಮೊದಲ ಪ್ರಾದೇಶಿಕ ಟ್ಯಾಕ್ಸಿ ಅಗ್ರಿಗೇಟರ್ ಆಗಿದೆ" ಎಂದು ಹೇಳಿದರು.

ಹೊಯ್ಸಳ ವಿಶಿಷ್ಟ ಮತ್ತು ನವೀನ ಸೇವೆಗಳು, ಉತ್ತಮ ಗುಣಮಟ್ಟ ಮತ್ತು ಮೌಲ್ಯವರ್ಧಿತ ಸೇವೆಯನ್ನು ಒದಗಿಸುವುದರ ಜೊತೆಗೆ ಉದ್ಯಮದ ಕ್ಷೇತ್ರದಲ್ಲಿ ಹೆಸರನ್ನು ಪಡೆಯುವ ಗುರಿಯನ್ನು ಹೊಂದಿಕೊಂಡಿದ್ದಾರೆ.

Karnatakas first local flavour cab aggregator Hoysala Cab Services launched

ಹೊಯ್ಸಳ ಕಾಬ್ಸ್ ವಾಹನಗಳನ್ನು ಪ್ರಯಾಣಿಕರಿಗೆ ಆರಾಮವಾಗಿಸಲು ವಿನ್ಯಾಸಗೊಳಿಸಿದ್ದು, ಇಂಧನ ಬಳಕೆಯಲ್ಲಿ ದಕ್ಷತೆ ಮತ್ತು ಎಲ್ಲಾ ವಾಹನಗಳಲ್ಲಿ 4 + 1 ಆಸನಗಳನ್ನು ಹೊಂದಿದ್ದು, ಜಿಪಿಎಸ್ ವ್ಯವಸ್ಥೆ, ಟ್ಯಾಕ್ಸಿ ಮೀಟರ್, ರೇಡಿಯೋ, ಎಸಿ, ವೈಫೈ ವ್ಯವಸ್ಥೆಯನ್ನು ಹೊಂದಿದೆ ಗ್ರಾಹಕರಿಗೆ ಪ್ರಥಮ ದರ್ಜೆ ಸೇವೆಯನ್ನು ನೀಡುವ ಮೂಲಕ ಟ್ಯಾಕ್ಸಿ ಸಾರಿಗೆಯ ಪ್ರಮುಖ ಕಂಪನಿಯಾಗಿ ಸ್ಥಾನವನ್ನು ಕಾಪಾಡಿಕೊಂಡು ಅದನ್ನು ಬಲ ಪಡಿಸುವ ಉದ್ದೇಶವನ್ನು ಹೊಂದಿದೆ.

2026ರ ಹೊತ್ತಿಗೆ ಬೆಂಗಳೂರಲ್ಲಿ ವಿದ್ಯುತ್ ಚಾಲಿತ ಓಲಾ, ಊಬರ್ ಕಾರುಗಳು2026ರ ಹೊತ್ತಿಗೆ ಬೆಂಗಳೂರಲ್ಲಿ ವಿದ್ಯುತ್ ಚಾಲಿತ ಓಲಾ, ಊಬರ್ ಕಾರುಗಳು

"ಎಲ್ಲಾ ಮಾದರಿಯ ಕಾರುಗಳ ವ್ಯಾಪಕ ಜಾಲದೊಂದಿಗೆ, ತರಬೇತಿ ಪಡೆದ ನಿಷ್ಠಾವಂತ ಚಾಲಕರನ್ನು ಆಯ್ಕೆ ಮಾಡಲಾಗಿದೆ. ಉಚಿತ ವೈಫೈ, ವಾಟರ್ ಬಾಟಲ್ ಒದಗಿಸುವ ವ್ಯವಸ್ಥೆಯನ್ನು ನೀಡಲಾಗಿದೆ. ಯಾವುದೇ ತೊಂದರೆಯಿಲ್ಲದೆ ಪ್ರಯಾಣ ಸೌಲಭ್ಯ ನೀಡುವುದೇ ನಮ್ಮ ಉದ್ದೇಶ. ಆರಾಮದಾಯಕ ಮತ್ತು ಆನಂದದಾಯಕ ಹಾಗೂ ಸುರಕ್ಷಿತ ಪ್ರಯಾಣವೇ ನಮ್ಮ ಹೊಯ್ಸಳದ ಗುರಿಯಾಗಿದೆ" ಎಂದು ಉಮಾಶಂಕರ್ ಹೇಳಿದರು.

English summary
Karnataka's first local flavour cab aggregator Hoysala Cab Services launched in Bengaluru. Its a dream project of Sri Ganesh Tours and Travel's owner B.K Umesh Shankar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X