ಆನೇಕಲ್, ದೇವನಹಳ್ಳಿಯಲ್ಲಿ FDA ರೇಡ್: ಅಕ್ರಮವಾಗಿ ದಾಸ್ತಾನು ಮಾಡಿದ್ದ ₹4 ಲಕ್ಷದ ಔಷಧ ವಶಕ್ಕೆ

ಬೆಂಗಳೂರು: ರಾಜ್ಯದಲ್ಲಿ ಹೋಟೆಲ್, ರೆಸ್ಟೋರೆಂಟ್, ರೈಲ್ವೆ ಕ್ಯಾಂಟೀನ್ ಮತ್ತು ಕ್ಲಬ್‌ಗಳ ಮೇಲಿನ ದಾಳಿ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಫುಡ್ ಸೇಫ್ಟಿ ದಾಳಿ ಮುಂದುವರಿದಿದೆ. ಇಂದು ಭಾನುವಾರ ವಿವಿಧ ಅನಧಿಕೃತ ಇ-ಕಾಮರ್ಸ್ ಸಂಸ್ಥೆಗಳ ಗೋದಾಮುಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ಮಾಡಿದ್ದಾರೆ.

ನಿಯಮಬಾಹಿರ ಔಷಧ ಸಂಗ್ರಹಣೆ ಮತ್ತು ವಿತರಣೆಯ ವಿರುದ್ಧ ನಡೆಸಿದ ದಾಳಿ ಇದಾಗಿದೆ. ಕರ್ನಾಟಕ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆಯ (ಎಫ್.ಡಿ.ಎ) ಅಮಲುಜಾರಿ ಔಷಧ ವಿಭಾಗವು, ಪರವಾನಗಿ ಇಲ್ಲದ ಇ-ಕಾಮರ್ಸ್ ಸಂಸ್ಥೆಗಳ ಗೋದಾಮುಗಳ ಮೇಲೆ ಯಶಸ್ವಿ ದಾಳಿ ನಡೆಸಿ ಭಾರಿ ಪ್ರಮಾಣದ ಔಷಧಗಳನ್ನು ಜಪ್ತಿ ಮಾಡಿದೆ. ಈ ವೇಳೆ 4 ಲಕ್ಷ ರೂಪಾಯಿಗೆ ಅಧಿಕ ಮೌಲ್ಯದ ಔಷಧಗಳು ವಶಕ್ಕೆ ಪಡೆಯಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಮುಂದಿದೆ.

Karnataka FDA Raids dp

ಎಫ್.ಡಿ.ಎ ದಾಳಿ ನಡೆಸಿದ ಸ್ಥಳಗಳು:

* ⁠ಆನೇಕಲ್ ದಾಳಿ: ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕರಾದ ಮನೋಹರ್ ಮತ್ತು ಔಷಧ ಪರಿವೀಕ್ಷಕರ ತಂಡವು, ಬೆಂಗಳೂರಿನ ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿರುವ (562107) 'ಮೆಸರ್ಸ್ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್' ನ ಪರವಾನಗಿ ರಹಿತ ಆವರಣದ ಮೇಲೆ ದಾಳಿ ನಡೆಸಿ, ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ರೂ. 2,45,352/- ಮೌಲ್ಯದ ಔಷಧಗಳನ್ನು ವಶಪಡಿಸಿಕೊಂಡಿದೆ.

* ⁠ದೇವನಹಳ್ಳಿ ದಾಳಿ: ಇದೇ ವೇಳೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಔಷಧ ಪರಿವೀಕ್ಷಕರಾದ ವಿಭಾ ಮತ್ತು ಅವರ ತಂಡವು, ದೇವನಹಳ್ಳಿಯ ಏರೋಸ್ಪೇಸ್‌ನಲ್ಲಿರುವ 'ಮೆಸರ್ಸ್ ಅಮೆಜಾನ್' ಸಂಸ್ಥೆಯ ಪರವಾನಗಿ ರಹಿತ ಆವರಣದ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ರೂ. 1,57,000/- ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿಷ್ಠಿತ ಹಾಕಿ ಕ್ಲಬ್ ಮೇಲೆ ದಾಳಿ

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ಶನಿವಾರ ಗ್ರೇಟರ್ ಬೆಂಗಳೂರು ವ್ಯಾಪ್ತಿಯ (GBA) ವಿವೇಕನಗರ ಪ್ರತಿಷ್ಠತಿ ಹಾಕಿ ಕ್ಲಬ್‌ನಲ್ಲಿ ವಿಶೇಷ ತಪಾಸಣೆ ಕೈಗೊಳ್ಳಲಾಯಿತು. ಈ ವೇಳೆ ಕ್ಲಬ್‌ ಅಡುಗೆಮನೆಯನ್ನು ಅನೈರ್ಮಲ್ಯಕರ ಪರಿಸ್ಥಿತಿಯಲ್ಲಿ ನಿರ್ವಹಿಸುತ್ತಿರುವುದು ಕಂಡುಬಂದಿದೆ.

ಇನ್ನೂ ಅವಧಿ ಮೀರಿದ ಹಾಗೂ ತಪ್ಪು ಲೇಬಲಿಂಗ್ ಹೊಂದಿರುವ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಅವೆಲ್ಲ ವಶಪಡಿಸಿಕೊಂಡು, ಸಂಬಂಧಪಟ್ಟ ಆಹಾರ ಉದ್ದಿಮೆದಾರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ 2011 ನಿಯಮಗಳನ್ವಯ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+