ರೈತರಿಗೆ ಭರ್ಜರಿ ಸುದ್ದಿ ಸಾಧ್ಯತೆ, ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಹೆಚ್ಚಿಸಲು ಪ್ರಸ್ತಾವನೆ.. Karnataka Farmers
ಕರ್ನಾಟಕ ರಾಜ್ಯ ಹಾಲು ಉತ್ಪಾದನೆ ವಿಚಾರದಲ್ಲಿ ಇಡೀ ಜಗತ್ತಿಗೆ ಮಾದರಿ ಆಗಿದ್ದು, ಕರ್ನಾಟಕದಲ್ಲೇ ಹುಟ್ಟಿ ಬೆಳೆದ ನಮ್ಮ ರಾಜ್ಯದ ಹೆಮ್ಮೆ ಕೆಎಂಎಫ್ ಜಗತ್ತಿನಾದ್ಯಂತ ತನ್ನ ವ್ಯಾಪಾರ ವಿಸ್ತರಣೆ ಮಾಡಿದೆ. ಈ ಮೂಲಕ ಕನ್ನಡ ನಾಡಿನ ರೈತರಿಗೆ ಲಕ್ಷ ಲಕ್ಷ ಆದಾಯ ಗಳಿಸುವುದು ಕೂಡ ಸಾಧ್ಯವಾಗುತ್ತಿದೆ. ಇದೇ ಕಾರಣಕ್ಕೆ ಸರ್ಕಾರ ಕೂಡ ರೈತರಿಗೆ ಬೆಂಬಲ ನೀಡಲು ಹಲವು ಯೋಜನೆಗಳನ್ನ ತಂದಿದೆ. ಹೀಗಿದ್ದಾಗ ಹಾಲು ಉತ್ಪಾದಕರಿಗೆ ಕೆಲವು ಸಮಸ್ಯೆಗಳು ಇದ್ದು, ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನ ಏರಿಕೆ ಮಾಡಬೇಕು ಎಂಬ ಡಿಮ್ಯಾಂಡ್ ಇತ್ತು. ಹೀಗಿದ್ದಾಗಲೇ ಹಾಲು ಉತ್ಪಾದಕರ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ 5 ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನ ಶೀಘ್ರ ಏರಿಕೆ ಮಾಡಬೇಕು ಎನ್ನುವ ಬೇಡಿಕೆ ಹಲವು ದಿನಗಳಿಂದ ಇದೆ. ಅದರಲ್ಲೂ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಬೆಳಗಾವಿ ವಿಧಾನಸಭೆ ಅಧಿವೇಶನದ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಪ್ರೋತ್ಸಾಹಧನ ಏರಿಸುವುದಾಗಿ ಘೋಷಿಸಿದ್ದರು. ಆದರೆ ಈವರೆಗೂ ಘೋಷಣೆ ಜಾರಿ ಆಗಿಲ್ಲ ಎಂಬ ಚರ್ಚೆಗಳು ನಡೆಯುವಾಗ ಇದೀಗ ಕರ್ನಾಟಕ ಹಾಲು ಮಹಾ ಮಂಡಲ ಎಂದರೆ ಕೆಎಂಎಫ್ ಮಹತ್ವದ ನಿರ್ಧಾರಕ್ಕೆ ಬಂದಿದೆ. ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನ ಈಗ ಪ್ರತಿ ಲೀಟರ್‌ಗೆ 5 ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಕರ್ನಾಟಕ ಸರ್ಕಾರಕ್ಕೆ.

1 ಕೋಟಿ ಲೀಟರ್ ಹಾಲು ಸಂಗ್ರಹ
ಕರ್ನಾಟಕ ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 1 ಕೋಟಿ ಲೀಟರ್ ಹಾಲು ಸಂಗ್ರಹ ಆಗುತ್ತದೆ. ರಾಜ್ಯದ ಮೂಲೆ ಮೂಲೆಯಲ್ಲಿ ಕೂಡ ಲಕ್ಷಾಂತರ ರೈತ ಕುಟುಂಬಗಳು ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಿದ್ದಾಗ ಕೆಎಂಎಫ್ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡುವ ಕುರಿತು ಚರ್ಚೆ ಮಾಡಿ, ಪ್ರೋತ್ಸಾಹಧನ ಏರಿಸಲು ಇದೀಗ ಪ್ರಸ್ತಾವನೆ ಸಲ್ಲಿಸಿದೆ ಸರ್ಕಾರಕ್ಕೆ. ಪ್ರೋತ್ಸಾಹಧನ ಏರಿಕೆ ಮೂಲಕ ಹಾಲು ಸಂಗ್ರಹ ಮತ್ತಷ್ಟು ಏರಿಕೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಕೃಷಿಕರಿಗೆ ಈ ಮೂಲಕ ಬಲ ತುಂಬುವುದು ಹಾಗೂ ಕರ್ನಾಟಕ ರಾಜ್ಯದಲ್ಲಿ ಹಾಲು ಉತ್ಪಾದನೆ ಇನ್ನಷ್ಟು ಏರಿಕೆಯನ್ನ ಮಾಡಿ ಹೈನುಗಾರಿಕೆ ಬಲಪಡಿಸುವುದು ಇದರ ಉದ್ದೇಶ.
ಕರ್ನಾಟಕದ ಕೃಷಿಕರಿಗೆ ಶೀಘ್ರ ಬಂಪರ್?
ಸಿಎಂ ಸಿದ್ದರಾಮಯ್ಯ ಅವರು ಹಿಂದೆ ಹಾಲು ಉತ್ಪಾದಕರ ಪ್ರೋತ್ಸಾಹಧನ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಏರಿಕೆ ಮಾಡಿದ್ದೂ ಅಲ್ಲದೇ ₹400 ಸಹಾಯಧನ ಹೆಚ್ಚಳ ಕೂಡ ಮಾಡಿತ್ತು ಎಂದು ತಿಳಿಸಿದ್ದರು. ಅಲ್ಲದೆ ಮೇವಿನ ದರ, ಪಶು ಆಹಾರ ಸೇರಿದಂತೆ ಇತರೆ ಉತ್ಪನ್ನಗಳ ದರ ಏರಿಕೆ ಕಾರಣ ಪ್ರೋತ್ಸಾಹಧನ ಹೆಚ್ಚಿಸುವ ಬೇಡಿಕೆ ಇದೆ ಎಂದು ತಿಳಿಸಿದ್ದರು. ಅಲ್ಲದೇ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಂತೆ ಪ್ರೋತ್ಸಾಹಧನ 7 ರೂಪಾಯಿಗೆ ಹೆಚ್ಚಳ ಮಾಡ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಹೀಗಿದ್ದಾಗ ಕೆಎಂಎಫ್ ನೇರವಾಗಿ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.












Click it and Unblock the Notifications