Peenya: ಕೊರೊನಾ ಬಳಿಕವೂ ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ತಪ್ಪದ ಸಂಕಷ್ಟ, ಪಿಐಎನಲ್ಲಿ ಶೇ.20ರಷ್ಟು ಕೈಗಾರಿಕೆಗಳು ಸ್ಥಗಿತ
ಬೆಂಗಳೂರು, ಮಾರ್ಚ್ 24: ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಭೀತಿ ಏನೋ ಕಡಿಮೆಯಾಗಿದೆ. ಆದರೆ ಕೋವಿಡ್ ನೀಡಿದ ಹೊಡೆತ ಮಾತ್ರ ಇನ್ನೂ ಮಾಸದ ಹಾಗೆಯೇ ಉಳಿದಿದೆ. ಇದಕ್ಕೆ ಬೆಲೆ ಏರಿಕೆ, ಕಾರ್ಮಿಕರ ಕೊರತೆಯಂತಹ ಪರಿಸ್ಥಿತಿಗಳು ಕಾರಣವಾಗಿವೆ.
ಎರಡು ವರ್ಷದ ಹಿಂದೆ ಕೊರೊನಾ ಪಿಡುಗಿನಿಂದಾಗಿ ತಿಂಗಳುಗಳ ಕಾಲ ಆದ ಲಾಕ್‌ಡೌನ್ ಪ್ರಭಾವ ರಾಜ್ಯದ ಸಣ್ಣ ಅತೀ ಸಣ್ಣ ಕೈಗಾರಿಕೆಗಳ ಮೇಲೆ ಉಂಟಾಗಿದೆ. ಇಂದಿಗೂ ಕಾರ್ಖಾನೆಗಳ ಮಾಲೀಕರ ಪರಿಸ್ಥಿತಿ ಚೇತರಿಕೊಂಡಿಲ್ಲ. ಕೆಲವರಂತೂ ಆರ್ಥಿಕ ನಷ್ಟ ಅನುಭವಿಸಿ ಉದ್ಯಮದಿಂದಲೇ ಹಿಂದೆ ಸರಿದಿದ್ದಾರೆ.

ಆರ್ಥಿಕ ನಷ್ಟ, ಕೊರೊನಾ ಅಲೆಗೆ ಸಿಕ್ಕ ಕೈಗಾರಿಕೆಗಳ ಪೈಕಿ ಬೆಂಗಳೂರು ಉತ್ತರದ ಪೀಣ್ಯ ಕೈಗಾರಿಕೆ ಪ್ರದೇಶ (PIA) ಹೊರತಾಗಿಲ್ಲ. ಆಟೋ ಕಾಂಪೊನೆಂಟ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದ 55 ವರ್ಷದ ಉದ್ಯಮಿ ರಾಜೇಶ್ ಕುಮಾರ್ ಕೊರೊನಾ ಕಾರಣಕ್ಕೆ ವ್ಯಾಪಾರದಲ್ಲಿ ತೀವ್ರ ನಷ್ಟ ಅನುಭವಿಸಬೇಕಾಯಿತು. ಕೊನೆಗೆ ಲಾಭ ಹಾದಿ ಹಿಡಿಯದ ಕಾರಣ ಅದನ್ನು ಆಗಸ್ಟ್ 2022 ರಲ್ಲಿ ಮುಚ್ಚಬೇಕಾಯಿತು.
ಕೇವಲ ದಶಕದ ಹಿಂದಷ್ಟೇ ಕಂಪನಿ ಸ್ಥಾಪಿಸಿದ್ದ ಕುಮಾರ್, ಸಾಂಕ್ರಾಮಿಕ ವೇಳೆ ಕಚ್ಚಾ ವಸ್ತುಗಳಿಗೆ ಹೆಚ್ಚುತ್ತಿರುವ ಅಧಿಕ ವೆಚ್ಚದ ಸಮಸ್ಯೆಯಲ್ಲೂ ಘಟಕವನ್ನು ಯಶಸ್ವಿಯಾಗಿ ನಡೆಸಿದ್ದರು. ಆದರೆ ಕೊರೊನಾ ಭೀತಿ ಇಲ್ಲಿನ 85 ಉದ್ಯೋಗಿಗಳಿಗೆ ಉದ್ಯೋಗ ಕಸಿಯಿತು. ಹೀಗಾಗಿ ಘಟಕ ಸ್ಥಗಿತಗೊಂಡಿತು.
ಕಳೆದ ಎರಡು ವರ್ಷಗಳಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಪೀಣ್ಯದ ಅನೇಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ನನ್ನ ಕಂಪನಿಯು ಬೆಲೆ ಏರಿಕೆಯ ಷರತ್ತು ಇಲ್ಲದೆ ದೊಡ್ಡ ಕಂಪನಿಗಳ ಜೊತೆ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಬೆಲೆ ಏರಿಕೆಯು ನನ್ನ ಉತ್ಪಾದನಾ ಘಟಕದ ಮೇಲೆ ಪರಿಣಾಮ ಬೀರಿದ್ದಲ್ಲದೇ ಕೊರೊನಾ ಬಳಿಕ ಘಟಕ ಉಳಿಸಿಕೊಂಡು ಹೋಗುವುದೇ ದುಸ್ತರವಾಯಿತು. ವ್ಯಾಪಾರ ಮುಚ್ಚುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ ಎಂದು ಅಳಲು ತೋಡಿಕೊಂಡರು ಕುಮಾರ್.
ಶೇ.20ರಷ್ಟು ಕಂಪನಿಗಳು ಸ್ಥಗಿತ
ಪಿಐಎ ಸಾವಿರಾರು ಸಣ್ಣ ಮತ್ತು ಸೂಕ್ಷ್ಮ ಉದ್ಯಮ ಒಳಗೊಂಡಿದೆ. ಇಲ್ಲಿ ಲಕ್ಷಗಟ್ಟಲೆ ಕಾರ್ಮಿಕರು ದುಡಿದು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ. ಸಾಂಕ್ರಾಮಿಕ ರೋಗದ ನಂತರ ಕೈಗಾರಿಕಾ ಪ್ರದೇಶದಲ್ಲಿರುವ ಸುಮಾರು 20% ಕಂಪನಿಗಳು ಮುಚ್ಚಲ್ಪಟ್ಟಿವೆ ಎಂದು ಪಿಐಎ ಅಧ್ಯಕ್ಷರು ತಿಳಿಸಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ, ಈ ಕೈಗಾರಿಕಾ ಪ್ರದೇಶದಲ್ಲಿ ಕಚ್ಚಾ ವಸ್ತುಗಳ ದರಗಳು ಮತ್ತು ಕೈಗಾರಿಕೆಗಳು ಬ್ಯಾಂಕ್ ಸಾಲ ಮರು ಪಾವತಿಸಲು ಸಾಧ್ಯವಾಗದ ಕಾರಣದಿಂದ 20% ಎಂಎಸ್‌ಎಂಇ ಮುಚ್ಚಲ್ಪಟ್ಟಿವೆ. ಲಾಕ್‌ಡೌನ್‌ನಿಂದ ಕೈಗಾರಿಕೆಗಳು ಸ್ಥಗಿತಗೊಂಡದ್ದರಿಂದ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡರು. ತಮ್ಮ ಊರುಗಳಿಗೆ ಮರಳಿದರು ಎಂದು ಮಂಜುನಾಥ್ ವಿವರಿಸಿದರು.
ಪಿಐಎ ತೆರಿಗೆ ಪಾವತಿ: ಮೂಲಸೌಕರ್ಯದ್ದೆ ಸಮಸ್ಯೆ
ಪೀಣ್ಯ ಕೈಗಾರಿಕಾ ಪ್ರದೇಶವು ಮೂಲ ಸೌಕರ್ಯಗಳ ವಿಚಾರದಲ್ಲಿ ನೀರ್ಣಾಯಕ ಪಾತ್ರ ವಹಿಸುತ್ತದೆ. ಇಡೀ ದೇಶದಲ್ಲಿ ಉತ್ಪಾದನೆಯಾಗುವ ಸುಮಾರು ಶೇಕಡಾ 50ರಷ್ಟು ಯಂತ್ರೋಪಕರಣ ಇಲ್ಲಿ ಸಿದ್ದವಾಗುತ್ತವೆ. ಕರ್ನಾಟಕ ಶೇ.60 ಯಂತ್ರೋಪಕರಣಕ್ಕೆ ಪೀಣ್ಯ ಆಸರೆಯಾಗಿದೆ.
ಇಷ್ಟೇ ಕೊಡುಗೆ ನೀಡುತ್ತಿರುವ ಪೀರ್ಣದಲ್ಲಿ ರಸ್ತೆ, ಘನತ್ಯಾಜ್ಯ ನಿರ್ವಹಣೆ ಸಮಸ್ಯೆ, ಕಳಪೆ ಭೂಗತ ಒಳಚರಂಡಿ, ಕಲುಷಿತ, ವಿದ್ಯುತ್ ನಿರಿನ ಸಮಸ್ಯೆ ಎದುರಿಸುತ್ತಿದೆ. ಇಲ್ಲಿ ಸುರ್ಬಲ ಸ್ಥಿತಿ ಇದೆ. ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ ಎಂಬ ಆರೋಪವು ಇದೆ.
ಚರಂಡಿಗಳು ಮುಚ್ಚಿ ಹೋಗಿವೆ. ಕೊಳಚೆ ನೀರು ಅಲ್ಲಲ್ಲಿ ಉಕ್ಕಿ ಬರುತ್ತದೆ. ಏಕೈಕ ಜಲಮೂಲ ಶಿವಪುರ ಕೆರೆ ನಾಶವಾಗಿದ್ದು, ಅಧಿಕಾರಿಗಳು ಕೆರೆಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಉದ್ಯೋಗಿ ಪ್ರತಾಪ್ ರಾಜ್ ಅವರು, ಪಿಐಎ ಅಭಿವೃದ್ಧಿಗೆ ರಾಜಕಾರಣಿಗಳಿಗೆ ಆಸಕ್ತಿ ಇಲ್ಲ. ಹೀಗಾಗಿ ಇಲ್ಲಿ ಮೂಲಸೌಕರ್ಯ ಸುಧಾರಣೆ ಕಂಡಿಲ್ಲ. ಪೀಣ್ಯ ಕೈಗಾರಿಕೆಗಳು ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುತ್ತವೆ. ಆದರೆ ಅವುಗಳಿಗೆ ಒದಗಿಸಿದ ಮೂಲಸೌಕರ್ಯ ಕಳಪೆ ಆಗಿದೆ.
PIA ಟೌನ್‌ಶಿಪ್ ಸ್ಥಿತಿಗಾಗಿ ಕಾಯುತ್ತಿದೆ
ಪಿಐಎ 'ಟೌನ್‌ಶಿಪ್' ಸ್ಥಾನಮಾನ ಸಿಗಬೇಕೆಂದು ಕಾಯುತ್ತಿದೆ. 300 ವರ್ಷದ ನಂತರ ಬಿ.ಎಸ್. ಯಡಿಯೂರಪ್ಪ ನವರು ₹100 ಕೋಟಿ ರೂ. ಟೌನ್‌ಶಿಪ್ ಸ್ಥಾಪನೆಗೆ ಪ್ರಸ್ತಾಪಿಸಿದೆ. ಆದರೆ ಅನುಮೋದನೆ ಸಿಕ್ಕಿಲ್ಲ. ನಾವು ನಿರಂತರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದು, ಕಡತ ಅವರ ಕಚೇರಿಯಲ್ಲಿದೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ (KSIDC) ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ ಎಂದು ಮಂಜುನಾಥ್ ತಿಳಿಸಿದರು.
(ಸುದ್ದಿ ಮಾಹಿತಿ ಕೃಪೆ- ದಿ ಹಿಂದು)












Click it and Unblock the Notifications