ವಿಕಾಸ ಸೌಧದಲ್ಲಿ ಇಂದು ಯೋಗರಾಜ ಭಟ್ಟರ ಚುನಾವಣಾ ಗೀತೆ ಬಿಡುಗಡೆ

Recommended Video

      Karnataka Elections 2018 : ಇಂದು ವಿಕಾಸ ಸೌಧದಲ್ಲಿ ಯೋಗರಾಜ್ ಭಟ್ ರ ಚುನಾವಣಾ ಗೀತೆ ರಿಲೀಸ್

      ಬೆಂಗಳೂರು, ಏಪ್ರಿಲ್ 13: ಕರ್ನಾಟಕ ಚುನಾವಣಾ ಆಯೋಗದ ಹೊಸಪರಿಕಲ್ಪನೆಯಾದ ಚುನಾವಣಾ ಗೀತೆ ಇಂದು(ಏ.13) ಬಿಡುಗಡೆಯಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಗೀತೆ ರಚನೆಯಾಗುತ್ತಿರುವುದು ಇದೇ ಮೊದಲು. ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಈ ಹೊಸ ಪರಿಕಲ್ಪನೆಗಾಗಿ ಚುನಾವಣಾ ಆಯೋಗ ನಾಂದಿಹಾಡಿದೆ.

      ಮೇ 12 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ, ಚಿತ್ರಸಾಹಿತಿ ಯೋಗರಾಜ್ ಭಟ್ ಮತ್ತು ಪಂಚತಂತ್ರ ಚಿತ್ರತಂಡವನ್ನು ಚುನಾವಣಾ ಗೀತೆ ರಚಿಸಲು ಚುನಾವಣಾ ಆಯೋಗ ಆಯ್ಕೆ ಮಾಡಿತ್ತು.

      ಯೋಗರಾಜ್ ಭಟ್ ರಚಿಸಿರುವ ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಸಂಜೆ 6.30 ಕ್ಕೆ ಈ ಹಾಡು ಬಿಡುಗಡೆಯಾಗಲಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಯೋಗರಾಜ್ ಭಟ್, ಹರಿ ಕೃಷ್ಣ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

      Karnataka elections: First Election anthem of Karnataka to be launched on 13th April

      ಸಂವಿಧಾನ ನೀಡಿದ ಅತ್ಯಮೂಲ್ಯ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ರಾಜಕೀಯ ಪ್ರಜ್ಞೆ ಮೆರೆಯಬೇಕೆಂಬ ಆಶಯ ಈ ಗೀತೆಯಲ್ಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+