ಜಾಲಹಳ್ಳಿಯಲ್ಲಿ ವೋಟರ್ ಐಡಿ ಪತ್ತೆ, ವರದಿ ಕೇಳಿದ ಆಯೋಗ

ಬೆಂಗಳೂರು, ಮೇ 09 : ಜಾಲಹಳ್ಳಿಯಲ್ಲಿ ಸುಮಾರು 9 ಸಾವಿರ ಮತದಾರರ ಗುರುತಿನ ಚೀಟಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ವರದಿ ಕೇಳಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಮುಂದೂಡಲಾಗುತ್ತದೆಯೇ? ಕಾದು ನೋಡಬೇಕು.

ಕೇಂದ್ರ ಚುನಾವಣಾ ಆಯೋಗ ಮೂವರು ವೀಕ್ಷಕರಿಗೆ ಪ್ರಕರಣದ ಬಗ್ಗೆ ವರದಿ ನೀಡಿ ಎಂದು ಸೂಚನೆ ನೀಡಿದೆ. ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಆಯೋಗಕ್ಕೆ ವೀಕ್ಷಕರು ವರದಿ ನೀಡಲಿದ್ದಾರೆ. ಬಳಿಕ ಆಯೋಗ ಚುನಾವಣೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಿದೆ.

voter id

ವೋಟರ್ ಐಡಿ ಯಾವ ಪಕ್ಷದ ಅಭ್ಯರ್ಥಿಗೆ ಸೇರಿದ್ದು? ಎಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆ ನಂತರ ಯಾವ ಅಭ್ಯರ್ಥಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಿ ಎಫ್‌ಐಆರ್ ದಾಖಲು ಮಾಡಲಾಗುತ್ತದೆ.

ಕರ್ನಾಟಕ ಬಿಜೆಪಿ ನಾಯಕರು ಆರ್.ಅರ್.ನಗರ ಕ್ಷೇತ್ರದ ಹಾಲಿ ಶಾಸಕ, 2018ರ ಚುನಾವಣೆ ಅಭ್ಯರ್ಥಿ ಮುನಿರತ್ನ ಅವರಿಗೆ ಸೇರಿದ್ದು ಎಂದು ಆರೋಪ ಮಾಡುತ್ತಿದ್ದಾರೆ. ಕ್ಷೇತ್ರದ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ? : ಆರ್.ಆರ್.ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಎಚ್.ರಾಮಚಂದ್ರ ಅವರ ಪುತ್ರ ಜಗದೀಶ್ ರಾಮಚಂದ್ರ ಅವರು ಮಂಗಳವಾರ ಜಾಲಹಳ್ಳಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು.

ಈ ಸಮಯದಲ್ಲಿ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನ ಫ್ಲಾಟ್‌ ನಂ 115ರಲ್ಲಿ ನೂರಾರು ವೋಟರ್‌ ಐಡಿಗಳು ಅಲ್ಯೂಮಿನಿಯಂ ಬಾಕ್ಸ್‌ನಲ್ಲಿ ಇದ್ದಿದ್ದನ್ನು ನೋಡಿದ್ದರು. ಈ ಅಪಾರ್ಟ್‌ಮೆಂಟ್ ಮಂಜುಳಾ ನಂಜಮುರಿ ಎಂಬುವವರಿಗೆ ಸೇರಿದ್ದರು, ಅದನ್ನು ಅವರ ಪುತ್ರ ರಾಕೇಶ್ ಬಾಡಿಗೆಗೆ ಕೊಟ್ಟಿದ್ದಾರೆ. ಮಂಜುಳಾ ಬಿಬಿಎಂಪಿಯ ಮಾಜಿ ಪಾಲಿಕೆ ಸದಸ್ಯೆ.

ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಮಂಗಳವಾರ ರಾತ್ರಿ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದರು. 'ಫ್ಲಾಟ್‌ನಲ್ಲಿ 9,746 ಮತದಾರರ ಗುರುತಿನ ಚೀಟಿ ಸಿಕ್ಕಿದೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+