ಬಿಜೆಪಿಯ ಸ್ಟಾರ್ ಪ್ರಚಾರಕ ಕಿಚ್ಚ ಸುದೀಪ್ ಕುರಿತು ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು
ಬೆಂಗಳೂರು, ಏಪ್ರಿಲ್ 07: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡ ಬೆನ್ನಲ್ಲೆ ಅವರ ಕುರಿತು ಜೆಡಿಎಸ್ ಪಕ್ಷವು ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ದಾಖಲಾಸಿದೆ.
ಕನ್ನಡ ಚಿತ್ರನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ ಅವರ ಪರ ನಿಲ್ಲುವದಾಗಿ ಹೇಳಿದ್ದರು. ಅವರ ಪರ ವಿಧಾನಸಭಾ ಚುನಾವಣೆಯಲ್ಲಿ 2023 ಚುನಾವಣೆಯಲ್ಲಿ ಪ್ರಚಾರ ಮಾಡುವುದಾಗಿ ತಿಳಿಸಿದರು. ಇದರ ಬೆನ್ನಲ್ಲೇ ಅವರ ಕುರಿತು ಜನತಾ ದಳ (ಜಾತ್ಯಾತೀತ) (ಜೆಡಿಎಸ್) ಪಕ್ಷವು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದೆ.

ಕನ್ನಡದ ನಟ ಕಿಚ್ಚ ಸುದೀಪ್ ಅವರು ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸಿನೆಮಾ, ಜಾಹೀರಾತು, ಪೋಸ್ಟರ್ ಮುಂತಾದವುಗಳು ಬಿತ್ತರಿಸುವ ಮೂಲಕ ಮತದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಚುನಾವಣೆ ಆಯೋಗವು ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಚಿತ್ರನಟ ಸುದೀಪ್ ಅವರ ನಟನೆಯ ಯಾವುದೇ ಟಿವಿ ಶೋ ಮತ್ತು ಅವರ ಭಾವಚಿತ್ರವಿರುವ ಜಾಹೀರಾತುಗಳ ದೂರದರ್ಶನ ಪ್ರಸಾರಕ್ಕೆ ತಡೆ ಹಿಡಿಯಬೇಕು. ಹೀಗೆಂದು ಉಲ್ಲೇಖಿಸಿ ಜೆಡಿಎಸ್ ಪಕ್ಷದ ಕಾನೂನು ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ರಾಜ್ಯ ವಕ್ತಾರರು ಆದ ಪ್ರದೀಪ್ ಕುಮಾರ್ ಅವರು ಆಯೋಗಕ್ಕೆ ದೂರಿನ ಮೂಲಕ ತಿಳಿಸಿದ್ದಾರೆ.
ನಟ ಕಿಚ್ಚ ಸುದೀಪ ಇತ್ತೀಚೆಗೆ ಬಿಜೆಪಿ ಪಕ್ಷ ಸೇರುತ್ತಾರೆ ಎಂಬೆಲ್ಲ ವದಂತಿಗಳು ಹಬ್ಬಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆಗೆ ಸುದ್ದಿಗೋಷ್ಠಿ ಮಾಡುವ ಮುಖೇನ ನಟ ಸುದೀಪ್ ಊಹಾಪೋಹಗಳಿಗೆಲ್ಲ ತೆರೆ ಎಳೆದಿದ್ದರು.

ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಕಷ್ಟದ ಸಮಯದಲ್ಲಿ ಕೈ ಹಿಡಿದವರನ್ನು ನಾನು ಬೆಂಬಲಿಸಬೇಕಿದೆ. ಅದೇ ರೀತಿ ಮುಖ್ಯಮಂತ್ರಿಗಳನ್ನು ಮಾಮಾ ಎಂದು ಕರೆದ ನಟ ಸುದೀಪ ನಾನು ಪಕ್ಷದ ಪರ ಅಲ್ಲ, ನಾನು ಸಿಎಂ ಬೊಮ್ಮಾಯಿ ಅವರ ಪರ ಎಂದು ತಿಳಿಸಿದ್ದರು.
ಇದಾದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಅವರು ನನ್ನ ಪರ ಎಂದಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರದ ಪರ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದ್ದರು. ಇದರಿಂದ ಪಕ್ಷಕ್ಕೆಬಲ ಬಂದಾಗಿದೆ ಎಂದರು.
ಜಾತಿ ಲೆಕ್ಕಾಚಾರದಲ್ಲಿ ಸುದೀಪ್‌ಗೆ ಬಿಜೆಪಿ ಗಾಳ
ಕರ್ನಾಟಕದಲ್ಲಿ ಇನ್ನೇನು 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಜಾತಿವಾರು ಮತಗಳನ್ನು ಸಹ ತೆಕ್ಕೆ ತೆಗೆದುಕೊಳ್ಳಲು ಬಿಜೆಪಿ ಚಿಂತಿಸುತ್ತಿದೆ. ಅದರ ಭಾಗವಾಗೇ ವಾಲ್ಮೀಕಿ ಸಮುದಾಯವನ್ನು ಮುಖ್ಯಮಂತ್ರಿಗಳು ಟಾರ್ಗೆಟ್ ಮಾಡಿದ್ದಾರೆ.
ರಾಜ್ಯದಲ್ಲಿ ಸರಿಸುಮಾರು 50ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ವಾಲ್ಮೀಕಿಯ ಸಮುದಾಯವನ್ನು ತನ್ನ ಸೆಳೆಯುವ ಪ್ರಯತ್ನ ನಡೆದಿದೆ. ಚಾಮರಾಜನಗರ ಮತ್ತು ಬೀದರ್ ಭಾಗದಲ್ಲಿ ಈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕಾರಣಕ್ಕೆ ಕಿಚ್ಚ ಸುದೀಪ್ ಅವರನ್ನು ಪಕ್ಷದ ಪ್ರಚಾರಕ್ಕೆ ಬಿಜೆಪಿ ಕರೆ ತಂದಿದೆ. ಈ ವಿಚಾರದಲ್ಲಿ ಬಿಜೆಪಿ ಅಂದುಕೊಂಡಂತಾಗಿದೆ.
ಇದೆಲ್ಲ ಬೆಳವಣಿಗೆ ಮಧ್ಯೆ ನಟ ಸುದೀಪ್ ಒಂದಷ್ಟು ಜಾಹೀರಾತುಗಳು ಹಾಗೂ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದೆ. ಅವರು ಜಾಹೀರಾತು, ಫೋಟೊಗಳು, ಸಿನಮಾ ಪೋಸ್ಟರ್‌ಗಳು ಬಿತ್ತರಿಸಿದರೆ ಅದು ನೀತಿ ಸಂಹಿತೆಯ ಉಲ್ಲಂಘಟನೆ ಆಗುತ್ತದೆ. ಮತಗಳಿಕೆಗೂ ಸಹಾಯವಾಗಬಹುದೆಂಬ ಕಾರಣಕ್ಕೆ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.












Click it and Unblock the Notifications