ಬೆಂಗಳೂರು: ವಿಜಯನಗರದ ಮತಗಟ್ಟೆ ಸಮೀಪ ಬಿಜೆಪಿ-ಕಾಂಗ್ರೆಸ್ ಘರ್ಷಣೆ
ಬೆಂಗಳೂರು, ಮೇ 12: ನಗರದ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಜಟಾಪಟಿ ನಡೆದಿದೆ. ಇಲ್ಲಿನ ಹಂಪಿ ನಗರ ಮತಗಟ್ಟೆ ಹೊರಗಡೆ ಈ ಘರ್ಷಣೆ ನಡೆದಿದೆ.
ಬಿಜೆಪಿ ಕಾರ್ಪೊರೇಟರ್ ಆನಂದ್ ಎನ್ನುವವರ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ವಿಜಯನಗರ ಬಿಜೆಪಿ ಅಭ್ಯರ್ಥಿ ರವೀಂದ್ರ, "ನಮ್ಮ ಕಾರ್ಪೊರೇಟರ್ ಆನಂದ್ ಮೇಲೆ ಹಲ್ಲೆ ನಡೆಸಲಾಗಿದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ," ಎಂದು ದೂರಿದ್ದಾರೆ.

ಈ ಕುರಿತು ವಿವರ ನೀಡಿರುವ ಡಿಸಿಪಿ ರವಿ ಚನ್ನಣ್ಣನವರ್, "ಇದು ಸೂಕ್ಷ್ಮ ಮತಗಟ್ಟೆ. ಮತಗಟ್ಟೆಯಿಂದ 100 ಮೀಟರ್ ಅಂತರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ನಾವು ತನಿಖೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ," ಎಂದಿದ್ದಾರೆ.
Bengaluru: Clashes broke out b/w Congress & BJP workers outside a polling booth in Hampi Nagar,allegedly after the former thrashed a BJP corporator. Ravindra, Vijayanagar BJP candidate says, 'our corporator Anand was attacked but police isn't taking any action' #KarnatakaElection pic.twitter.com/SuXFNlI62d
— ANI (@ANI) May 12, 2018












Click it and Unblock the Notifications