ಬಿಜೆಪಿ ಹೇಳಿದಂತೆ ಜೆಡಿಎಸ್ ವಚನಭ್ರಷ್ಟ ಅಷ್ಟಲ್ಲದೇ ಸಿದ್ಧಾಂತ ಭ್ರಷ್ಟವು ಹೌದು: ಕಾಂಗ್ರೆಸ್
ಬೆಂಗಳೂರು, ಸೆಪ್ಟಂಬರ್ 25: ಈ ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಜೆಡಿಎಸ್ ನವರು ವಚನ ಭ್ರಷ್ಟರು ಎಂದಿದ್ದು ನಿಜವಲ್ಲವೇ? ಎಂದು ಪ್ರಶ್ನಿಸಿರುವ ಕರ್ನಾಟಕ ಕಾಂಗ್ರೆಸ್, ಜೆಡಿಎಸ್ ನವರು ಕೇವಲ ವಚನಭ್ರಷ್ಟರು ಮಾತ್ರವಲ್ಲ, ಸಿದ್ಧಾಂತ ಭ್ರಷ್ಟರು ಕೂಡ ಎಂದು ವಾಗ್ದಾಳಿ ನಡೆಸಿದೆ.
ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬಯಸುತ್ತೇನೆ ಎಂದಿದ್ದರು ದೇವೇಗೌಡರು ಎಂಬ ವಿಚಾರವನ್ನು ಪುನಃ ಪ್ರಸ್ತಾಪಿಸಿರುವ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಜೆಡಿಎಸ್ ನಡೆಯನ್ನು ಟೀಕೆ ಮಾಡಿದೆ.

ಎಚ್.ಡಿ ದೇವೇಗೌಡ ಮುಸ್ಲಿಂ ಆಗಿ ಹುಟ್ಟಬಯಸುತ್ತೇನೆ ಎಂದಿದ್ದರು. ಕೆಲವೇ ತಿಂಗಳ ಹಿಂದೆ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಹಿತ ಅದೇ ಮಾತು ಹೇಳಿದ್ದು, ದೇವೇಗೌಡರಿಗೆ ಮುಸ್ಲಿಂ ಆಗಿ ಹುಟ್ಟುವ ಆಸೆ ಇದೆ ಎಂದು ಬಹಿರಂಗಪಡಿಸಿದ್ದರು.
ಇದೀಗ ಅಲ್ಪಸಂಖ್ಯಾತರ ಅಭಿಪ್ರಾಯವನ್ನು ದಿಕ್ಕರಿಸಿ ಕೂಡಿಕೆ ಮಾಡಿಕೊಂಡಿದ್ದಾರೆ. ಇದು ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕುವ ನಡೆ ಅಲ್ಲವೇ? ಎಂದು ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಾಂಗ್ರೆಸ್ ಲೇವಡಿ ಮಾಡಿದೆ.
ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬಯಸುತ್ತೇನೆ ಎಂದಿದ್ದರು ದೇವೇಗೌಡರು,
— Karnataka Congress (@INCKarnataka) September 25, 2023
ಕೆಲವೇ ತಿಂಗಳ ಹಿಂದೆ ಮೊಮ್ಮಗನೂ ದೇವೇಗೌಡರ ಅದೇ ಆಸೆಯನ್ನು ಬಹಿರಂಗಪಡಿಸಿದ್ದರು.
ಆದರೆ ಈಗ ಅಲ್ಪಸಂಖ್ಯಾತರ ಅಭಿಪ್ರಾಯವನ್ನು ದಿಕ್ಕರಿಸಿ ಕೂಡಿಕೆ ಮಾಡಿಕೊಂಡಿದ್ದಾರೆ,
ಇದು ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕುವ ನಡೆ ಅಲ್ಲವೇ?
ಹಿಂದೆ ಯಡಿಯೂರಪ್ಪನವರು… pic.twitter.com/D0pJhZYWgw
ಮೈತ್ರಿಗೆ ನಾಯಕರ ಸಮರ್ಥನೆ
ಲೋಕಸಭಾ ಚುನಾವಣೆ ಹಾಗೂ ಪಕ್ಷದ ಹಿತದೃಷ್ಟಿಯಿಂದ ಜೆಡಿಎಸ್ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಜೊತೆಗೆ ಮೈತ್ರಿಗೆ ಮುಂದಾಗಿದೆ. ಈ ಬಗ್ಗೆ ಎಚ್‌ಡಿ ದೇವೇಗೌಡರು ಮತ್ತು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸಮರ್ಥನೆಯನ್ನು ನೀಡಿದ್ದಾರೆ. ಮೈತ್ರಿ ಕುರಿತು ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ಜೊತೆಗೆ ಕೆಲವು ಭಾರಿ ಚರ್ಚೆಗಳು ನಡೆದಿವೆ.
ಅಲ್ಲದೇ ಬಿಜೆಪಿಯು ಹಿಂದೂಪರವಾಗಿದ್ದು, ಮುಸ್ಲಿಮರನ್ನು ವಿರೋಧಿಸುತ್ತಲೇ ಬಂದಿದೆ. ಕೆಲವೊಮ್ಮೆ ಅಧಿಕಾರಕ್ಕಾಗಿ ಬಿಜೆಪಿ ಸಹ ಅಲ್ಪಸಂಖ್ಯಾತರನ್ನು ಒಲೈಕೆ ಮಾಡಿದ ಉದಾಹರಣೆಗಳು ಇದೆ.
ಇದೆಲ್ಲದರ ಮಧ್ಯೆ ದೇವೇಗೌಡರು ಮುಸ್ಲಿಂ ಆಗಿ ಹುಟ್ಟಲು ಆಸೆ ಇದೆ ಎಂದವರು ಮುಸಲ್ಮಾನ ವಿರೋಧಿ ಬಣದ ಜೊತೆಗೆ ಕೈ ಜೋಡಿಸಿರುವುದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಜೆಡಿಎಸ್, ದೇವೇಗೌಡರು ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದ್ದಾರೆ.












Click it and Unblock the Notifications