ಸಮೀಕ್ಷೆಯಲ್ಲಿ ಕರ್ನಾಟಕ ಕಾಂಗ್ರೆಸ್‌ಗೆ ಭಾರೀ ಆಘಾತ: ಬಿಜೆಪಿಯ ಸೀಟುಗಳು ದ್ವಿಗುಣ!

ಕರ್ನಾಟಕ ವಿಧಾನಸಭಾ ಚುನಾವಣೆ 2023 ಮುಗಿದು ಕೇವಲ ಎರಡು ವರ್ಷಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪಷ್ಟವಾದ ಬಹುಮತವನ್ನು ನೀಡಿದ್ದ ರಾಜ್ಯವು ಈಗ ಚುನಾವಣೆ ನಡೆದರೆ ಅದನ್ನು ತಿರಸ್ಕರಿಸುತ್ತದೆ. ಪೀಪಲ್ಸ್ ಪಲ್ಸ್ - ಕೋಡೆಮೋ ಸಮೀಕ್ಷೆಯ ವರದಿ ಹೀಗೆ ಹೇಳಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ, ಸಮುದಾಯಗಳು ಮತ್ತು ಪ್ರದೇಶಗಳಾದ್ಯಂತ ಬೆಳೆಯುತ್ತಿರುವ ಅಸಮಾಧಾನವನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಪರವಾಗಿ ಹೇಗೆ ಬೆಂಬಲ ಏರಿಕೆಯಾಗುತ್ತಿದೆ ಎಂಬುದನ್ನು ಸಮೀಕ್ಷೆ ಹೇಳಿದೆ.

Karnataka Congress Faces Crushing Blow BJP Set To Double Seats In Latest Survey

ಸೀಟು ಹಂಚಿಕೆ ಲೆಕ್ಕಾಚಾರ: ಕಾಂಗ್ರೆಸ್ ಆಡಳಿತದಿಂದ ಬಿಜೆಪಿ ಪುನರುತ್ಥಾನ

2023ರ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಿದೆ. ಸಮೀಕ್ಷೆಯ ವರದಿಯಂತೆ ಇಂದು ಚುನಾವಣೆ ನಡೆದರೆ ಬಿಜೆಪಿ ತನ್ನ ಸೀಟುಗಳನ್ನು ದ್ವಿಗುಣಗೊಳಿಸಿಕೊಳ್ಳಲಿದೆ. ಇಂತಹ ಬದಲಾವಣೆ ಏಕೆ ಆಗುತ್ತದೆ? ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಆಡಳಿತದಲ್ಲಿ ಭರವಸೆಗಳನ್ನು ಈಡೇರಿಸಿಲ್ಲ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ಆಡಳಿತ ಸಂಪೂರ್ಣವಾಗಿ ವೈಫಲ್ಯವಾಗಿದೆ. ಕಾಂಗ್ರೆಸ್‌ ಮೇಲೆ ಜನರು ಇಟ್ಟಿದ್ದ ಭರವಸೆ ಮುಗಿದಿದೆ ಮತ್ತು ಕನ್ನಡಿಗರ ಸಹನೆ ಸಹ ಕಡಿಮೆಯಾಗಿದೆ.

Karnataka Congress Faces Crushing Blow BJP Set To Double Seats In Latest Survey

ಮತಗಳಿಕೆ: ಕಾಂಗ್ರೆಸ್ ವಿರುದ್ಧ ಅಸಮಾಧಾನ ಬಿಜೆಪಿ ಮುಂಚೂಣಿಗೆ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತಗಳಿಕೆ ಲೆಕ್ಕಾಚಾರವನ್ನು ಬಿಜೆಪಿ ಸಂಪೂರ್ಣ ಬುಡಮೇಲು ಮಾಡಲಿದೆ, ಬಿಜೆಪಿ ಪರವಾದ ಭಾರೀ ಅಲೆ ಇದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೇಲೆ ಸಂಪೂರ್ಣವಾಗಿ ನಿಂತರೂ ಸಹ, ಇದು ಕೇವಲ ಗಿಮಿಕ್ ಎಂಬುದು ಸಾಬೀತಾಗಿದೆ. ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ ಅಥವ ಕೆಲವೇ ವರ್ಗಕ್ಕೆ ನೀಡಲಾಗಿದೆ. ಜನರು ಅಭಿವೃದ್ಧಿ, ದೃಢತೆ ಮತ್ತು ಸಮಗ್ರತೆಗಾಗಿ ಬಿಜೆಪಿಯ ಕಡೆ ನೋಡುತ್ತಿದ್ದಾರೆ.

Karnataka Congress Faces Crushing Blow BJP Set To Double Seats In Latest Survey

ಆಡಳಿತ ವೈಫಲ್ಯ ಗ್ಯಾರಂಟಿಯನ್ನು ಸುತ್ತಿಕೊಂಡಿದೆ

ಕಾಂಗ್ರೆಸ್‌ನ 'ಗ್ಯಾರಂಟಿ'ಗಳು ಚುನಾವಣಾ ಪೂರ್ವ ಗಿಮಿಕ್‌ ಅಷ್ಟೇ ಎಂಬುದು ಈಗ ತಿಳಿಯುತ್ತಿದೆ. ಯೋಜನೆಗಳಾದ ಗೃಹಲಕ್ಷ್ಮಿ, ಯುವನಿಧಿ, ಶಕ್ತಿ ಕೇವಲ ಸರಿಯಾಗಿ ಅನುಷ್ಠಾನಗೊಳ್ಳದಿರುವುದು ಮಾತ್ರವಲ್ಲ, ರಾಜ್ಯದ ಆರ್ಥಿಕತೆಗೂ ಧಕ್ಕೆಯನ್ನು ತಂದಿವೆ.

ವಿದ್ಯುತ್, ನೀರು, ಹಾಲು ಮತ್ತು ಆಹಾರದ ಬೆಲೆಗಳ ಏರಿಕೆ ಕೌಟುಂಬಿಕ ಜೀವನದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಜನರು ಅದರಲ್ಲೂ ಮಧ್ಯಮ ವರ್ಗದ ಉದ್ಯೋಗಸ್ಥರು ಮತ್ತು ಯುವಕರು ಕಠಿಣ ದಿನಗಳನ್ನು ನೋಡುತ್ತಿದ್ದಾರೆ. ಕಾಂಗ್ರೆಸ್ ಪರಿಹಾರದ ಭರವಸೆಯನ್ನು ನೀಡಿತ್ತು, ಆದರೆ ಕೊಟ್ಟಿದ್ದು ಸಾಲ ಮತ್ತು ಭ್ರಮನಿರಸನ.

ಕಾಂಗ್ರೆಸ್‌ನಿಂದ ದೂರವಾಗುತ್ತಿರುವ ಮತದಾರರು

ಸಮೀಕ್ಷೆಯ ಪ್ರಕಾರ ಶೇ 52ರಷ್ಟು ಪುರುಷರು ಮತ್ತು ಶೇ 49ರಷ್ಟು ಮಹಿಳಾ ಮತದಾರರು ಕಾಂಗ್ರೆಸ್‌ನಿಂದ ದೂರವಾಗುತ್ತಿದ್ದಾರೆ. ಮೊದಲ ಬಾರಿಯ ಮತದಾರರು ಕಾಂಗ್ರೆಸ್‌ ವಿರುದ್ಧ ತೀವ್ರವಾದ ನಿರಾಸೆ ಅನುಭವಿಸಿದ್ದಾರೆ. ನಿರುದ್ಯೋಗಿ ಯುವಕ/ ಯುವತಿಯರಿ ಬೆಂಬಲ ನೀಡಲು ರೂಪಿಸಿದ್ದ ಯುವನಿಧಿ ಸರಿಯಾಗಿ ಅನುಷ್ಠಾನವಾಗಿಲ್ಲ. ಶೇ 56ರಷ್ಟು 15-25ರ ವಯೋಮಾನದ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. ಉಚಿತ ಕೊಡುಗೆಗಳಲ್ಲ ಕೇವಲ ಅಭಿವೃದ್ಧಿ ಮಾತ್ರ ನಮ್ಮ ಭವಿಷ್ಯ ಭದ್ರ ಪಡಿಸಲಿದೆ ಎಂಬುದು ಅವರ ಮೊದಲ ಅಜೆಂಡವಾಗಿದೆ.

ಕಾಂಗ್ರೆಸ್‌ನ ಆರ್ಥಿಕ ವೈಫಲ್ಯಗಳಿಂದ ಉದ್ಯೋಗಿಗಳು ಬಿಸಿ ಎದುರಿಸುತ್ತಿದ್ದಾರೆ. ಮೂಲ ಸೌಕರ್ಯಗಳಿಗೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಿದ ಕಾರಣ ಹಣದುಬ್ಬರ ಏರಿಕೆಯಾಗಿ ಕೌಟುಂಬಿಕ ಬಜೆಟ್‌ ಏರುಪೇರಾಗಿದೆ. ಸಮೀಕ್ಷೆಯ ಪ್ರಕಾರ ಶೇ 48.6 ರಷ್ಟು 26-35 ಮತ್ತು ಶೇ 50ರಷ್ಟು 35-50ರ ವಯೋಮಾನದವರು ಕಾಂಗ್ರೆಸ್ ವಿರುದ್ಧವಾಗಿದ್ದಾರೆ, ಇದಕ್ಕೆ ಗಿಮಿಕ್ ಮಾಡುವ ಆಡಳಿತ, ವಿಫಲವಾದ ಯೋಜನೆಗಳು ಕಾರಣವಾಗಿವೆ.

ಸಾಂಪ್ರದಾಯಿಕವಾಗಿ ಗ್ರಾಮೀಣ ಕರ್ನಾಟಕ ಕಾಂಗ್ರೆಸ್‌ನ ಕೋಟೆ. ಆದರೆ ಈಗ ಶೇ 52ರಷ್ಟು ಬೆಂಬಲ ಬಿಜೆಪಿಗೆ ಇದೆ. ಇದು ಬಿಜೆಪಿ ನಗರ ಕೇಂದ್ರಿತ ಪಕ್ಷ ಎಂಬ ವಾದವನ್ನು ಸುಳ್ಳಾಗಿಸಿದೆ.

Karnataka Congress Faces Crushing Blow BJP Set To Double Seats In Latest Survey

ಪಿಎಂ ಅಂಶ: ಕರ್ನಾಟಕದಲ್ಲಿ ಮೋದಿ ಮೇನಿಯಾ ನಿರಂತರ

ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮುಜುಗರ ಎಂದರೆ ಪ್ರಧಾನಿ ನರೇಂದ್ರ ಮೋದಿಯನ್ನು ಜನರ ನಾಯಕನಾಗಿ ಆರಿಸುವುದು, ಇದರಲ್ಲಿ ಕಾಂಗ್ರೆಸ್‌ನ ಸ್ವಂತ ಮತದಾರರು ಕೂಡ ಸೇರಿದ್ದಾರೆ. ಬಿಜೆಪಿ ಬೆಂಬಲಿಗರಲ್ಲಿ ಶೇ 73.9 ಮಂದಿ ಮೋದಿಯನ್ನು ತಮ್ಮ ಇಷ್ಟದ ಪ್ರಧಾನಿಯನ್ನಾಗಿ ಬೆಂಬಲಿಸುತ್ತಾರೆ. ಶೇ 17 ರಷ್ಟು ಜನರು ಯೋಗಿ ಆದಿತ್ಯನಾಥ್‌ ಇಷ್ಟಪಡುತ್ತಾರೆ. ಆದರೆ ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರುವುದು ಅಲ್ಪ ಪ್ರಮಾಣದ ಬೆಂಬಲ. ಆಸಕ್ತಿದಾಯಕ ಅಂಶ ಎಂದರೆ ಕಾಂಗ್ರೆಸ್ ಮತದಾರರಲ್ಲಿಯೂ ಸಹ ಶೇ 37.8 ರಷ್ಟು ಮಂದಿ ತಮ್ಮ ಸ್ವಂತ ನಾಯಕರಿಗಿಂತ ಮೋದಿಯನ್ನು ಇಷ್ಟಪಡುತ್ತಾರೆ. ಶೇ 40.6 ರಷ್ಟು ಜನರು ಮಾತ್ರ ಮಾತ್ರ ರಾಹುಲ್ ಗಾಂಧಿಯನ್ನು ಬೆಂಬಲಿಸುತ್ತಾರೆ ಮತ್ತು ಕೇವಲ ಶೇ 5ರಷ್ಟು ಜನರು ಖರ್ಗೆ ಬೆಂಬಲಿಸುತ್ತಾರೆ. ಜೆಡಿಎಸ್ ಮತದಾರರಲ್ಲಿ ಶೇ 73.2ರಷ್ಟು ಮಂದಿ ಮೋದಿಯನ್ನು ಇಷ್ಟಪಡುತ್ತಾರೆ, ರಾಹುಲ್ ಗಾಂಧಿಯನ್ನು ಶೇ 5.8 ಮತ್ತು ಖರ್ಗೆಯನ್ನು ಕೇವಲ ಶೇ 0.6ರಷ್ಟು ಜನರು ಮಾತ್ರ ಬೆಂಬಲಿಸುತ್ತಾರೆ.

ಅಲ್ಲದೇ ಸಮಯದಾಯಗಳಲ್ಲಿ ಅದರಲ್ಲೂ ಕಾಂಗ್ರೆಸ್‌ನ ಕುರುಬ (ಸಿದ್ದರಾಮಯ್ಯ) ಮತ್ತು ಒಕ್ಕಲಿಗ (ಡಿ. ಕೆ. ಶಿವಕುಮಾರ್) ಸಹ ಮೋದಿಯ ಕಡೆ ವಾಲಿದ್ದಾರೆ.

ಮೋದಿ ವಿಶ್ವಕರ್ಮ (ಶೇ 78.2), ನಾಯಕ/ ನಾಯ್ಕ್‌ (ಶೇ 74), ವಾಲ್ಮೀಕಿ (ಶೇ 72.1), ಮರಾಠಿ (ಶೇ 71.2) ಮತ್ತು ಲಿಂಗಾಯತ (ಶೇ 69.8) ಹೀಗೆ ಶೇ 50 ರಿಂದ 70ರಷ್ಟು ಬೆಂಬಲವನ್ನು ಪಡೆದಿದ್ದಾರೆ. ಕಾಂಗ್ರೆಸ್‌ಗೆ ಹತ್ತಿವಾಗಿರುವ ಕುರುಬ (ಶೇ 58), ಮಾದಿಗ (ಶೇ 63.5) ಮೋದಿ ಬೆಂಬಲಿಸಿದ್ದಾರೆ. ರಾಹುಲ್ ಗಾಂಧಿ ಬೆಂಬಲವನ್ನು ನೋಡಿದರೆ ಅದು ಬಹಳ ದೂರದಲ್ಲಿದೆ. ಯಾವುದೇ ಸಮುದಾಯದಿಂದ ಶೇ 19ರಷ್ಟು ಬೆಂಬಲವನ್ನು ಪಡೆದಿಲ್ಲ. ಪರಿಶಿಷ್ಟ ಜಾತಿಗಳಿಗೆ ಸೇರಿದ ಆದಿ ಕರ್ನಾಟಕ (ಶೇ 14.6), ಮಾದಾರ (ಶೇ 9.6) ಬೆಂಬಲವನ್ನು ಮಾತ್ರ ಮಲ್ಲಿಕಾರ್ಜುನ ಖರ್ಗೆ ಪಡೆದಿದ್ದಾರೆ. ಯೋಗಿ ಆದಿತ್ಯನಾಥ್ ಕೆಲವು ಸಮಯದಾಯಗಳಿಂದ ಎರಡನೇ ನಾಯಕನಾಗಿ ಬೆಂಬಲ ಪಡೆದಿದ್ದಾರೆ. ಇದು ಕೇವಲ ಮೋದಿ ಜಪ್ರಿಯತೆಯನ್ನು ಹೇಳುತ್ತಿಲ್ಲ, ಅಂಕಿಸಂಖ್ಯೆಗಳು ಕಾಂಗ್ರೆಸ್ ತನ್ನ ಹಿಂಬಾಲಕ ಸಮುದಾಯದಲ್ಲಿ ಹೇಗೆ ನಂಬಿಕೆ ಕಳೆದುಕೊಳ್ಳುತ್ತಿದೆ ಎಂದು ತಿಳಿಸುತ್ತಿದೆ. ಮೋದಿ ಪ್ರಮುಖ ಸಮುದಾಯಗಳಿಂದ ಶೇ 60ರಷ್ಟು ಬೆಂಬಲ ಪಡೆದಿದ್ದಾರೆ.

Karnataka Congress Faces Crushing Blow BJP Set To Double Seats In Latest Survey

ಹಿಂದೂ, ಕ್ರಿಶ್ಚಿಯನ್ ಮತ್ತು ಕಾಂಗ್ರೆಸ್‌ನ ವೋಟ್ ಬ್ಯಾಂಕ್ ರಾಜಕಾರಣದ ಪತನ

ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣ ಅದಕ್ಕೆ ತಿರುಗೇಟನ್ನು ನೀಡುತ್ತಿದೆ. ಪಕ್ಷವು ನಿರ್ದಿಷ್ಟ ವೋಟ್‌ ಬ್ಯಾಂಕ್‌ ಮುಂದಿಟ್ಟುಕೊಂಡು ಲಾಭಗಳನ್ನು ನೀಡುತ್ತಾ ಮುಂದುವರಿದಂತೆ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಬಿಜೆಪಿ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಸ್ವಾವಲಂಬಿ ಹಿಂದೂ ಮಧ್ಯಮ ವರ್ಗ ಮತ್ತು ಕ್ರಿಶ್ಚಿಯನ್ ಸಮುದಾಯದ ಕೆಲವರು ಈಗ ಬಿಜೆಪಿಯನ್ನು ನಿಜವಾದ ಪ್ರಗತಿಯ ಏಕೈಕ ಮಾರ್ಗವೆಂದು ಪರಿಗಣಿಸುತ್ತಿವೆ. ಕಾಂಗ್ರೆಸ್‌ನ ವಿಭಜನೆಯ ರಾಜಕೀಯ ಮತ್ತು ಬರೀ ಘೋಷಣೆಯ ಜನಪ್ರಿಯತೆಯನ್ನು ಜನರು ತಿರಸ್ಕರಿಸುತ್ತಿದ್ದಾರೆ.

ವೃತ್ತಿಪರರು, ರೈತರು ಮತ್ತು ಯುವಕರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ

ಬಿಜೆಪಿ ಸ್ನಾತಕೋತ್ತರ ಪದವೀಧರರ ಶೇ 60.4ರಷ್ಟು ಬೆಂಬಲವನ್ನು ಪಡೆಯುತ್ತಿರುವುದು ಗಮನಾರ್ಹವಾಗಿದೆ. ಇದು ಶಿಕ್ಷಣ ಪಡೆದವರ ಜೊತೆ ಹೇಗೆ ಸಂಪರ್ಕದಲ್ಲಿರಬೇಕು ಎಂಬುದನ್ನು ಒತ್ತಿ ಹೇಳುತ್ತದೆ. ರೈತರು ಕಾಂಗ್ರೆಸ್ ಪಕ್ಷವನ್ನು ಶೇ 16.5 ರಷ್ಟು ಬೆಂಬಲಿಸುತ್ತಾರೆ. ಶಿಕ್ಷಕರು, ಚಾಲಕರು ಮತ್ತು ಸ್ವಯಂ ಉದ್ಯೋಗಿಗಳು ಬಿಜೆಪಿ ಪರವಾಗಿದ್ದಾರೆ. ಇದು ಹೇಗೆ ವಿವಿಧ ವೃತ್ತಿಪರ ಗುಂಪುಗಳ ರಾಜಕೀಯ ಆಕರ್ಷಣೆ ಇದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕಾರ್ಮಿಕರು ಮತ್ತು ಯಾವುದೇ ಅಧಿಕೃತ ಶಿಕ್ಷಣವಿಲ್ಲದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಅಲ್ಪ ಮುನ್ನಡೆಯನ್ನು ನೀಡಿದ್ದಾರೆ. ಶಿಕ್ಷಣ ಪಡೆದ, ಉದ್ಯೋಗ ಹೊಂದಿದ ಮತ್ತು ಆಸಕ್ತ ನಾಗರಿಕರ ಪಕ್ಷದ ಪ್ರಾಬಲ್ಯವು ಪ್ರಗತಿ, ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಪಕ್ಷ ಬಿಜೆಪಿಯಾಗಿದೆ ಎಂದು ಬಲಪಡಿಸುತ್ತದೆ. ಈ ಅಂಕಿಅಂಶ ಸ್ಪಷ್ಟವಾಗಿ ಹೊಸ ಭಾರತ ಯುವ, ಕೌಶಲ್ಯಯುತ, ಮಹತ್ವಾಕಾಂಕ್ಷಿಗಳು ಅವರು ಹೆಚ್ಚಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳುತ್ತಿದೆ.

ರೈತರು ಗಂಭೀರವಾಗಿ ಅಕ್ರೋಶಗೊಂಡಿದ್ದಾರೆ. ಬಿಜೆಪಿ ಜಾರಿಗೊಳಿಸಿದ್ದ ಹಲವು ರೈತ ಪರವಾದ ಯೋಜನೆಗಳನ್ನು ಕಾಂಗ್ರೆಸ್ ರದ್ದುಪಡಿಸಿದೆ, 4,000 ರೂ.ಗಳ ಪಿಎಂ-ಕಿಸಾನ್ ಬೆಂಬಲ ಯೋಜನೆ ಮತ್ತು ರೈತ ವಿದ್ಯಾ ನಿಧಿ ಸೇರಿದಂತೆ ವಿವಿಧ ಯೋಜನೆ ರದ್ದಾಗಿದೆ, ಇದರ ಪರಿಣಾಮ ಗಂಭೀರವಾಗಿದೆ. ರೈತರ ಆತ್ಮಹತ್ಯೆಗಳಲ್ಲಿ ಏರಿಕೆ ಮತ್ತು ಶೇ 54ರಷ್ಟು ರೈತರ ಮತಗಳು ಬಿಜೆಪಿ ಕಡೆ ಸರಿದಿವೆ. ಗ್ರಾಮೀಣ ಕರ್ನಾಟಕವು ಈಗ ಕಾಂಗ್ರೆಸ್‌ನ ಜನಪ್ರಿಯ ಕೊಡುಗೆಗಳ ಮೇಲೆ ನಂಬಿಕೆ ಇಟ್ಟಿಲ್ಲ. ಅವರು ಖಾಲಿ ಭರವಸೆಗಳನ್ನು ಅಲ್ಲದೆ ಅರ್ಥಪೂರ್ಣ ಹೂಡಿಕೆಯನ್ನು ಬಯಸುತ್ತಿದ್ದಾರೆ.

ಜಾತಿ ಗಣತಿ: ವಿಫಲವಾದ ಮಾಸ್ಟರ್‌ಸ್ಟ್ರೋಕ್

ಕರ್ನಾಟಕದಲ್ಲಿ ಜಾತಿ ಗಣತಿ ಆಧಾರಿತ ಮಾಸ್ಟರ್ ಸ್ಟ್ರೋಕ್ ಕೊಡುವ ಕಾಂಗ್ರೆಸ್‌ನ ಪ್ರಯತ್ನವು ಮಾಧ್ಯಮಗಳ ಮೂಲಕ ಗಣತಿಯ ಅಂಕಿ ಅಂಶಗಳು ಸೋರಿಕೆಗೊಂಡ ನಂತರ ವಿಫಲವಾಗಿದೆ. ಈ ವರದಿ ಭಾರೀ ಪ್ರತಿಕ್ರಿಯೆ ಉಂಟುಮಾಡಿದ್ದು, ಶೇ 75 ಕ್ಕೂ ಹೆಚ್ಚು ಕನ್ನಡಿಗರು ಅದರ ಅಂಶಗಳನ್ನು ಪ್ರತಿನಿಧಿಸದ ಮತ್ತು ಪ್ರಶ್ನಾರ್ಹವೆಂದು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಸಾಂಪ್ರದಾಯಿಕವಾಗಿ ಬೆಂಬಲ ನೀಡುತ್ತಿದ್ದ ದಲಿತರು, ಓಬಿಸಿ ಮತ್ತು ಎಸ್‌ಟಿ ಸಮುದಾಯಗಳು ಪಕ್ಷದಿಂದ ದೂರವಾಗುತ್ತಿರುವಂತೆ ಕಾಣಿಸುತ್ತಿವೆ. ಕಾಂಗ್ರೆಸ್‌ನ ಅಹಿಂದಾ ಮೈತ್ರಿಯನ್ನು ಈಗ ಜನರು, ನಿಜವಾದ ಸಾಮಾಜಿಕ ನ್ಯಾಯಕ್ಕಿಂತ ಅಲ್ಪಸಂಖ್ಯಾತರ ತೃಪ್ತಿಗಾಗಿ ಬಳಸಿದ ಅಸ್ತ್ರವೆಂದು ಟೀಕಿಸುತ್ತಿದ್ದಾರೆ.

ಎಸ್‌ಸಿ-ಎಡ ಮಾದಿಗ ಸಮುದಾಯದಲ್ಲಿ ಬಿಜೆಪಿ ಕಡೆಗೆ ಶೇ 35-40ರಷ್ಟು ಮಹತ್ವದ ಬೆಂಬಲ ಸಿಗುತ್ತದೆ. ಇದು ಒಳ ಮೀಸಲಾತಿ ನಿರ್ವಹಣೆಯಲ್ಲಿ ಕಾಂಗ್ರೆಸ್‌ನ ಮೇಲೆ ಹೆಚ್ಚುತ್ತಿರುವ ನಿರಾಸೆಯನ್ನು ಪ್ರತಿಬಿಂಬಿಸುತ್ತದೆ. ಅನೇಕ ಮಾದಿಗರು ಕಾಂಗ್ರೆಸ್ ತನ್ನ ಭರವಸೆಗಳನ್ನು ಪೂರೈಸಲು ವಿಫಲವಾಗಿದೆ ಎಂದು ನಂಬುತ್ತಾರೆ ಮತ್ತು ಪಕ್ಷದ ಕ್ರಮಗಳನ್ನು ರಾಜಕೀಯವಾಗಿ ಅನುಕೂಲಕರವೆಂದು ಪರಿಗಣಿಸುತ್ತಾರೆ. ಇದಕ್ಕೆ ವಿರುದ್ಧವಾಗಿ, ಅವರ ದೀರ್ಘಕಾಲೀನ ಬೇಡಿಕೆಗಳನ್ನು ಒಪ್ಪಿಕೊಂಡಿರುವ ಬಿಜೆಪಿಯನ್ನು ನಿಷ್ಠಾವಂತರಂತೆ ಕಾಣುತ್ತಿದ್ದಾರೆ. ಇದು ಪಕ್ಷದ ಬೆಂಬಲದ ಗಮನಾರ್ಹ ಏಕೀಕರಣಕ್ಕೆ ಕಾರಣವಾಗಿದೆ. ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿಭಾಗದಲ್ಲಿಯೂ ಇದೇ ರೀತಿಯ ಪ್ರವೃತ್ತಿ ಕಾಣಿಸುತ್ತಿದೆ. ಅಲ್ಲಿ ಶೇ 57 ವಾಲ್ಮೀಕಿ ಮತ್ತು ಇನ್ನೂ ಹೆಚ್ಚಿನ ಶೇ 64.3 ನಾಯಕ ಸಮಯದಾಯ ಈಗ ಬಿಜೆಪಿ ಬೆಂಬಲಿಸುತ್ತಿದೆ. ಈ ಬದಲಾವಣೆ ಕಾಂಗ್ರೆಸ್‌ನ ಬೆಂಬಲದ ಆಧಾರದ ಹೇಗೆ ಕುಸಿಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ಈಗ ಲೋಕಸಭಾ ಚುನಾವಣೆಗಳು ನಡೆದರೆ, ರಾಯಚೂರು (ಎಸ್‌ಟಿ), ಬಳ್ಳಾರಿ (ಎಸ್‌ಟಿ), ಚಿಕ್ಕೋಡಿ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಪಕ್ಷವು ದೊಡ್ಡ ಹಿನ್ನಡೆಯನ್ನು ಎದುರಿಸಬಹುದು 2024ರಲ್ಲಿ ಗೆದ್ದಿದ್ದ ಸ್ಥಾನಗಳನ್ನು ಈಗ ನಿರ್ಲಕ್ಷ್ಯ ಮತ್ತು ಕಳೆದುಕೊಂಡಿರುವ ಭರವಸೆಗಳ ಆರೋಪಗಳ ನಡುವೆ ಕ್ಷೇತ್ರ ಕಳೆದುಕೊಳ್ಳುವ ಅಪಾಯವಿದೆ.

Karnataka Congress Faces Crushing Blow BJP Set To Double Seats In Latest Survey

ಕರ್ನಾಟಕದ ಮಹಿಳೆಯರು ಮತ್ತು ಹಿರಿಯ ನಾಗರಿಕರು: ಕಾಂಗ್ರೆಸ್‌ನ ಸುಳ್ಳುಗಳ ಸಂತ್ರಸ್ತರು

ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಭರವಸೆಯನ್ನು ನೀಡಲಾಗಿತ್ತು. ಆದರೆ ಈಗ ಮಹಿಳೆಯರು ಇದರ ಬದಲಿಗೆ ವ್ಯಾಪಕ ಬೆಲೆ ಏರಿಕೆ, ಯೋಜನೆಗಳ ವಿಳಂಬ ಮತ್ತು ಕೇಲವೇ ವರ್ಗಕ್ಕೆ ಲಾಭದ ವಿತರಣೆಯನ್ನು ನೋಡುತ್ತಿದ್ದಾರೆ. ಗೃಹಲಕ್ಷ್ಮಿ ಯಂತಹ ಯೋಜನೆಗಳು ಸಾಮಾನ್ಯರ ಉನ್ನತಿಗಾಗಿ ಬಳಸುವ ಬದಲು ಮತ ಬ್ಯಾಂಕ್ ತೃಪ್ತಿಗಾಗಿ ದುರುಪಯೋಗವಾಗುತ್ತಿರುವಾಗ ಗೃಹಿಣಿಯರು ಮೋಸವನ್ನು ಅರಿತಿದ್ದಾರೆ.

ಬೆಲೆ ಏರಿಕೆಯಿಂದ ಹಿರಿಯರ ಪಿಂಚಣಿ ಪಡೆಯುವವರು ಮೋಸ ಹೋಗಿದ್ದಾರೆ. ಕಾಂಗ್ರೆಸ್ ಆಡಳಿತವು ಅವರ ಅಂತಿಮ ವರ್ಷಗಳನ್ನು ಆರ್ಥಿಕ ದುರಂತವಾಗಿ ಪರಿವರ್ತಿಸಿದೆ.

ತೀರ್ಪು ಸ್ಪಷ್ಟವಾಗಿದೆ: ಕರ್ನಾಟಕ ಬಿಜೆಪಿಯ ದೂರದ ದೃಷ್ಟಿಯನ್ನು ನಂಬುತ್ತದೆ, ಕಾಂಗ್ರೆಸ್‌ ಭ್ರಮೆಗಳನ್ನು ಅಲ್ಲ

ಯುವಕರಿಂದ ಹಿರಿಯ ನಾಗರಿಕರು, ರೈತರಿಂದ ತೆರಿಗೆ ಪಾವತಿದಾರರು, ಗ್ರಾಮೀಣದಿಂದ ನಗರ, ಕರ್ನಾಟಕದ ರಾಜಕೀಯ ಈಗ ಸ್ಪಷ್ಟವಾಗಿದೆ. ಕಾಂಗ್ರೆಸ್ ವಿಫಲವಾಗಿದೆ ಮತ್ತು ಬಿಜೆಪಿ ಭವಿಷ್ಯವಾಗಿದೆ.

ಕಾಂಗ್ರೆಸ್ ಜಾತಿ ಸಮೀಕರಣ, ಜನಪ್ರಿಯ ಭರವಸೆಗಳನ್ನು ನೀಡುತ್ತಾ, ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿರುವಾಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಅಭಿವೃದ್ಧಿ, ಗೌರವ ಮತ್ತು ರಾಷ್ಟ್ರೀಯ ಶಕ್ತಿಯ ಮೇಲೆ ಕೇಂದ್ರೀಕೃತವಾದ ಏಕೈಕ ಗಂಭೀರ ಪಕ್ಷವೆಂದು ಕಾಣಲಾಗುತ್ತಿದೆ.

ಕಾಂಗ್ರೆಸ್ ಕೇವಲ ನೆಲ ಕಳೆದುಕೊಂಡಿಲ್ಲ, ನಂಬಿಕೆಯನ್ನು ಕಳೆದುಕೊಂಡಿದೆ. ಕರ್ನಾಟಕದ ಸಂದೇಶವು ಕೇವಲ ಮಧ್ಯಾವಧಿ ಪ್ರತಿಕ್ರಿಯೆಯಲ್ಲ. ಇದು 2028ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವಾವಲೋಕನ ಮತ್ತು ಬಿಜೆಪಿ ಆಡಳಿತ ಮಾದರಿಯ ಶಾಶ್ವತ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+