ಬಂಡಾಯ ಅಭ್ಯರ್ಥಿಗಳಿಗೆ ಬಿಸಿ ಮುಟ್ಟಿಸಿದ ಕಾಂಗ್ರೆಸ್

ಬೆಂಗಳೂರು, ಆಗಸ್ಟ್ 20 : ಬಿಬಿಎಂಪಿ ಚುನಾವಣೆಯಲ್ಲಿ ಬಂಡಾಯದ ಬಾವುಟ ಹಾರಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಉಚ್ಛಾಟನೆಯ ಅಸ್ತ್ರವನ್ನು ಬಳಸಲಾಗಿದೆ. ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದ 11 ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬುಧವಾರ ಈ ಕುರಿತು ಆದೇಶ ಹೊರಡಿಸಿದೆ. ಪಕ್ಷ ಘೋಷಣೆ ಮಾಡಿದ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.[ಕಾಂಗ್ರೆಸ್ ಪ್ರಣಾಳಿಕೆ ಓದಿ]

kpcc

ಬಿಬಿಎಂಪಿಯ ಒಟ್ಟು 198 ವಾರ್ಡ್‌ಗಳ ಪೈಕಿ 197 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ಸ್ಥಾನದಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆ.22ರ ಶನಿವಾರ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ.[ಹಲಸೂರು ವಾರ್ಡ್ ನಲ್ಲಿ ಬಂಡಾಯದ ಬಿಸಿ]

ಉಚ್ಛಾಟನೆಯಾದವರು

* ಓಕಳಿಪುರ ವಾರ್ಡ್ - ಅಮಲನಾಥ್
* ಹಲಸೂರು - ಮಮತಾ ಸರವಣ
* ಮಾರಪ್ಪನಪಾಳ್ಯ - ಸಾಗರ್ ಸತೀಶ್
* ರಾಯಪುರ - ಕಮಲಾ ಅಂಜನ್, ದೀಪಾ ಚಂದ್ರಶೇಖರ್, ಅಯಾಸ್ ಬೇಗಂ
* ಮಹಾಲಕ್ಷ್ಮೀಪುರಂ - ಜಯಲಕ್ಷ್ಮೀ
* ವೃಷಭಾವತಿ ನಗರ -ಪದ್ಮ ಪ್ರಕಾಶ್
* ಸಗಾಯಪುರ - ಏಳುಮಲೈ
* ವಿದ್ಯಾಪೀಠ - ಆಶಾ ಕಾರ್ತಿಕ್
* ಜಯನಗರ ಪೂರ್ವ -ಮುನಿಸಂಜೀವಯ್ಯ
* ಹೊಯ್ಸಳ ನಗರ - ಆನಂದ್
* ನಂದಿನಿ ಬಡಾವಣೆ - ಬಿ.ಎನ್.ಕುಮಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+