ಚಿತ್ರಕಲಾ ಪರಿಷತ್ ವಿದ್ಯಾರ್ಥಿನಿಯರಿಂದ ಹೀಗೊಂದು ಪ್ರತಿಭಟನೆ
ಬೆಂಗಳೂರು, ಜುಲೈ, 17 : ವಸ್ತ್ರ ಸಂಹಿತೆ ಜಾರಿ ಕುರಿತು ಹಿಂದಿನಿಂದಲೂ ಹಲವಾರು ವಿರೋಧಾಭಾಸಗಳು ತಲೆದೋರಿತ್ತು. ಈ ವಿವಾದ ತಣ್ಣಗಾಗಿದೆ ಎಂದು ಭ್ರಮಿಸುವಷ್ಟರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಲಲಿತ ಕಾಲೇಜಿನ ವಿದ್ಯಾರ್ಥಿನಿಯರು ವಸ್ತ್ರ ಸಂಹಿತೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಾಲೇಜಿನ ಪ್ರಕಟನಾ ಫಲಕದಲ್ಲಿ 'ವಿದ್ಯಾರ್ಥಿನಿಯರು ಕಾಲೇಜಿಗೆ ಬರುವಾಗ ಅಸಭ್ಯ ಹಾಗೂ ಪ್ರಚೋದನಾಕಾರಿ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಜುಲೈ 13 ರಂದು ಪ್ರಕಟಿಸಿದ್ದರು. ಇದನ್ನು ಗಮನಿಸಿ ಮನೆಯಿಂದ ಸಾಕಷ್ಟು ಬ್ರಾಗಳನ್ನು ತಂದ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ನೇತು ಹಾಕಿ ವಿಭಿನ್ನ ರೀತಿಯ ಪ್ರತಿಭಟನೆ ಕೈಗೊಂಡಿದ್ದಾರೆ.[ಪುಂಡರಿಗೆ ಬಿಸಿ ಮುಟ್ಟಿಸಿದ ಬಿಸಿಲ ನಾಡ ಹುಡುಗೀರು]

ಈ ಕುರಿತು ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲ ಆರ್.ಎಚ್. ಕುಲಕರ್ಣಿ 'ಇದೊಂದು ಕಲಿಕಾ ಕೇಂದ್ರ, ಜೊತೆಗೆ ಸಂಸ್ಕೃತಿಯನ್ನೂ ಪ್ರತಿಬಿಂಬಿಸುವಂತದ್ದು. ಹಾಗಾಗಿ ವಿದ್ಯಾರ್ಥಿನಿಯರು ಗೌರವಯುತವಾದ ಉಡುಪು ಧರಿಸಬೇಕು ಎಂದರು.
ವಿದ್ಯಾರ್ಥಿನಿಯರು ಸಭ್ಯ ರೀತಿಯ ಉಡುಪುಗಳನ್ನು ಧರಿಸಬೇಕು ಎಂದಾದರೆ ಪ್ರಚೋದನಕಾರಿ ಶಿಲ್ಪಕಲಾಕೃತಿಗಳಿರುವ ಬೇಲೂರು, ಹಳೇಬೀಡು, ಹಂಪಿ ಸೇರಿದಂತೆ ಹಲವು ಸ್ಥಳಗಳಿಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವುದನ್ನು ನಿಷೇಧಿಸಬೇಕಾಗುತ್ತದೆ ಎಂದು ವಿದ್ಯಾರ್ಥಿನಿಯರ ಪ್ರತಿಟನೆಗೆ ಬೆಂಬಲ ವ್ಯಕ್ತಪಡಿಸಿರುವ ಕಾಲೇಜು ಸಿಬ್ಬಂದಿ ಹೇಳಿದ್ದಾರೆ.












Click it and Unblock the Notifications