• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಇದೆ ಎಚ್ಚರಿಕೆ: ಮಹಾರಾಷ್ಟ್ರಕ್ಕಿಂತ ಕರ್ನಾಟಕವೇ ಡೇಂಜರ್!

|
Google Oneindia Kannada News

ಬೆಂಗಳೂರು, ಮೇ 13: ಕರ್ನಾಟಕವು ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಮಹಾರಾಷ್ಟ್ರದೊಂದಿಗೆ ಪೈಪೋಟಿಗೆ ಇಳಿದಂತೆ ಕಾಣುತ್ತಿದೆ. ಪ್ರತಿನಿತ್ಯ ಎರಡು ರಾಜ್ಯಗಳಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿ ಆಗುತ್ತಿರುವುದು ಆತಂಕ ಸೃಷ್ಟಿಸಿದೆ.

ಭಾರತದಲ್ಲಿ ಪತ್ತೆಯಾಗುವ ಒಟ್ಟು ಕೊವಿಡ್-19 ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಶೇ.11.75ರಷ್ಟು ಪ್ರಕರಣಗಳು ವರದಿಯಾದರೆ ಕರ್ನಾಟಕದಲ್ಲಿ 11.34ರಷ್ಟು ಹೊಸ ಸೋಂಕಿತ ಪ್ರಕರಣಗಳು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿವೆ.

ಮಹಾನಗರಗಳಿಂದ ಹಳ್ಳಿಗಳಿಗೆ ಶಿಫ್ಟ್ ಆಗುತ್ತಿರುವ ಕೊರೊನಾವೈರಸ್!ಮಹಾನಗರಗಳಿಂದ ಹಳ್ಳಿಗಳಿಗೆ ಶಿಫ್ಟ್ ಆಗುತ್ತಿರುವ ಕೊರೊನಾವೈರಸ್!

ಕಳೆದ ಸೋಮವಾರ ಮಹಾರಾಷ್ಟ್ರದಲ್ಲಿ ಒಂದೇ ದಿನ 37,236 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾದರೆ, ಕರ್ನಾಟಕದಲ್ಲಿ ಅದೇ ದಿನ 39,305 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು.

ಯಾವ ರಾಜ್ಯದಲ್ಲಿ ಎಷ್ಟು ದಿನದಲ್ಲಿ ಕೊರೊನಾ ಡಬಲ್?

ಯಾವ ರಾಜ್ಯದಲ್ಲಿ ಎಷ್ಟು ದಿನದಲ್ಲಿ ಕೊರೊನಾ ಡಬಲ್?

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದ್ವಿಗುಣಗೊಳ್ಳುವ ದಿನಗಳ ಸಂಖ್ಯೆಯು ಇಳಿಮುಖವಾಗಿದೆ. ಏಪ್ರಿಲ್ 15ರ ಅಂಕಿ-ಅಂಶಗಳನ್ನು ಗಮನಿಸಿದಾಗ 84 ದಿನಗಳಲ್ಲಿ ಕೊವಿಡ್-19 ಪ್ರಕರಣಗಳ ದ್ವಿಗುಣಗೊಳ್ಳುತ್ತಿದ್ದವು. ಈ ಪ್ರಮಾಣವು ಮೇ 12ರ ವೇಳೆಗೆ 30 ದಿನಗಳಲ್ಲೇ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಡಬಲ್ ಆಗುತ್ತಿದೆ. ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳು ಡಬಲ್ ಆಗುವ ದಿನಗಳ ಸಂಖ್ಯೆ 40 ರಿಂದ 68ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿಆಘಾತ ಸೃಷ್ಟಿಸಿದ ಸಾವಿನ ಸಂಖ್ಯೆ

ಕರ್ನಾಟಕದಲ್ಲಿಆಘಾತ ಸೃಷ್ಟಿಸಿದ ಸಾವಿನ ಸಂಖ್ಯೆ

ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಆಘಾತಕಾರಿಯಾಗಿದೆ. ಒಂದು ತಿಂಗಳಿನಲ್ಲಿ ಕೊವಿಡ್-19ನಿಂದ ಮೃತಪಡುತ್ತಿರುವವರ ಸಂಖ್ಯೆ 10 ಪಟ್ಟು ಹೆಚ್ಚಾಗಿದೆ. ಏಪ್ರಿಲ್ 15ರ ವೇಳೆಯಲ್ಲಿ ದಿನಕ್ಕೆ 38 ಮಂದಿ ಸಾವನ್ನಪ್ಪುತ್ತಿದ್ದರು. ಅದೇ ಮೇ 11ರ ವೇಳೆಗೆ ದಿನಕ್ಕೆ 480ಕ್ಕೂ ಹೆಚ್ಚು ಮಂದಿ ಸಾವಿನ ಮನೆ ಸೇರುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಸಾವಿನ ಸಂಖ್ಯೆ ಭಯ ಹುಟ್ಟಿಸುವ ಮಟ್ಟಕ್ಕೆ ಏರಿಕೆಯಾಗಿದೆ. ಏಪ್ರಿಲ್ 15ರ ವೇಳೆಗೆ ರಾಜ್ಯದಲ್ಲಿ ಪ್ರತಿನಿತ್ಯ 278 ಮಂದಿ ಪ್ರಾಣ ಬಿಡುತ್ತಿದ್ದರು, ಅದೇ 11ರ ಹೊತ್ತಿಗೆ ಪ್ರತಿನಿತ್ಯ ಕೊರೊನಾವೈರಸ್ ಸೋಂಕಿನಿಂದಲೇ ಪ್ರಾಣ ಬಿಡುತ್ತಿರುವವರ ಸಂಖ್ಯೆ 793ಕ್ಕೆ ಏರಿಕೆಯಾಗಿದೆ.

ಕರುನಾಡಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಇಳಿಕೆ

ಕರುನಾಡಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಇಳಿಕೆ

ಒಂದು ಕಡೆ ಕರ್ನಾಟಕದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಲಸಿಕೆ ವಿತರಣೆ ಪ್ರಮಾಣ ಇಳಿಮುಖವಾಗಿದೆ. ಏಪ್ರಿಲ್ 24ರಂದು ಪ್ರತಿನಿತ್ಯ 1.85 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಮೇ 10ರ ವೇಳೆಗೆ ಈ ಸಂಖ್ಯೆಯು 97,487ಕ್ಕೆ ಇಳಿಕೆಯಾಗಿದೆ. ಇದರ ಜೊತೆಗೆ ಮತ್ತೊಂದು ಆತಂಕಕಾರಿ ವಿಷಯವೆಂದರೆ ಲಸಿಕೆ ವಿತರಣೆಯಷ್ಟೇ ಇಳಿಕೆಯಾಗಿಲ್ಲ. ಬದಲಿಗೆ ಕೊವಿಡ್-19 ಸೋಂಕು ತಪಾಸಣೆ ವೇಗವೂ ಇಳಿಮುಖವಾಗಿದೆ. ಏಪ್ರಿಲ್ 30ರಂದು 1.9 ಲಕ್ಷ ಜನರಿಗೆ ಕೊರೊನಾ ತಪಾಸಣೆ ನಡೆಸಲಾಗುತ್ತಿದ್ದು, ಮೇ 11ರ ವೇಳೆಗೆ ಕೇವಲ 1.2 ಲಕ್ಷ ಜನರಿಗಷ್ಟೇ ಕೊವಿಡ್-19 ತಪಾಸಣೆ ಮಾಡಲಾಗುತ್ತಿದೆ.

ಮೂರು ಪಟ್ಟು ಹೆಚ್ಚಾದ ಕೊರೊನಾವೈರಸ್ ಪ್ರಕರಣ

ಮೂರು ಪಟ್ಟು ಹೆಚ್ಚಾದ ಕೊರೊನಾವೈರಸ್ ಪ್ರಕರಣ

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದೇ ತಿಂಗಳಿನಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಏಪ್ರಿಲ್ 15ರ ವೇಳೆಗೆ ಶೇ. 11.4ರಷ್ಟಿದ್ದ ಸೋಂಕಿತ ಪ್ರಕರಣಗಳ ಸಂಖ್ಯೆಯು ಮೇ 11ರ ವೇಳೆಗೆ ಶೇ.34ರಷ್ಟಾಗಿದೆ. ಈ ಅಂಕಿ-ಸಂಖ್ಯೆಯ ಪ್ರಕಾರ, ಕೊರೊನಾವೈರಸ್ ತಪಾಸಣೆಗೆ ಒಳಪಟ್ಟ 10 ಜನರಲ್ಲಿ ಮೂರು ಜನರಿಗೆ ಸೋಂಕು ದೃಢಪಡುತ್ತಿದೆ. ಮಹಾರಾಷ್ಟ್ರದಲ್ಲಿ ಶೇ.26.3ರಷ್ಟಿದ್ದ ಪ್ರಮಾಣ 18.8ಕ್ಕೆ ಇಳಿಕೆಯಾಗಿದೆ.

   ಗುಣಮುಖರಾದವರಲ್ಲಿ ಭಯಾನಕ Black Fungus ಕಾಣಿಸಿಕೊಳ್ಳುತ್ತಿದೆ | Oneindia Kannada
   English summary
   Karnataka Chasing Maharashtra In Coronavirus Cases; Read Numbers Here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X