ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ಕೊಟ್ಟಿದ್ದೇನು?
ಬೆಂಗಳೂರು, ಮಾ. 14 : ಮೂರನೇ ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕಸ ವಿಲೇವಾರಿ, ಮೆಟ್ರೋ, ಜಲಮಂಡಳಿ ಮುಂತಾದವುಗಳಿಗೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಮೀಸಲಾಗಿಟ್ಟಿದ್ದಾರೆ.
ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ 1,42, 534 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ. ಬಿಬಿಎಂಪಿ, ಬಿಡಿಎ, ಮೆಟ್ರೋ, ಜಲಮಂಡಳಿಗೆ 4,770 ಕೋಟಿ ರೂ.ಹಣವನ್ನು ನೀಡಿದ್ದಾರೆ. ಬಿಡಿಎ ವತಿಯಿಂದ 5,700 ಫ್ಲಾಟ್ ಹಂಚಿಕೆ ಮಾಡುವುದಾಗಿಯೂ ಸಿಎಂ ಘೋಷಣೆ ಮಾಡಿದ್ದಾರೆ. [ಸಿಎಂ ಸಿದ್ದರಾಮಯ್ಯ ಬಜೆಟ್ ಮುಖ್ಯಾಂಶಗಳು]

ಸಿಎಂ ಬೆಂಗಳೂರಿಗೆ ಕೊಟ್ಟ ಕೊಡುಗೆ ಏನು? [ಸಿದ್ದರಾಮಯ್ಯ ಬಜೆಟ್ ಯಾವ ಪತ್ರಿಕೆ ಹೆಡ್‌ಲೈನ್ ಚೆನ್ನಾಗಿದೆ?]
* ಪೀಣ್ಯ-ನಾಗಸಂದ್ರ ಮೆಟ್ರೋ ರೈಲು ಎರಡು ತಿಂಗಳಿನಲ್ಲಿ ಪ್ರಯಾಣಿಕರಿಗೆ ಸಮರ್ಪಣೆ
* ಮಾಗಡಿ ರಸ್ತೆ ನಾಯಂಡನಹಳ್ಳಿ ಮೆಟ್ರೋ ಮಾರ್ಗ 2015ರ ಮಧ್ಯದ ವೇಳೆಗೆ ಪೂರ್ಣ
* ನಮ್ಮ ಮೆಟ್ರೋ ಮೊದಲನೇ ಹಂತದ ಎಲ್ಲಾ ಕಾಮಗಾರಿಯನ್ನು 2015ರಲ್ಲಿ ಪೂರ್ಣಗೊಳಿಸುವ ಗುರಿ
* ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗೆ 2015ರ ಡಿಸೆಂಬರ್ 15ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣ
ಬೆಂಗಳೂರಿನ ರಸ್ತೆಗಳು
* ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ಅಗಲೀಕರಣ
* ಸರ್ಜಾಪುರ ರಸ್ತೆಯನ್ನು ಹೊರ ವರ್ತುಲ ರಸ್ತೆಯಿಂದ ದೊಮ್ಮಸಂದ್ರದವರೆಗೆ ಅಗಲೀಕರಣ
* ಬನ್ನೇರುಘಟ್ಟ ರಸ್ತೆ ಜೇಡಿಮರ ಜಂಕ್ಷನ್‍ನಿಂದ ನೈಸ್ ರಸ್ತೆವರೆಗೆ ಅಗಲೀಕರಣ
* ಟ್ಯಾನರಿ ರಸ್ತೆ ಎಂಎಂ ರಸ್ತೆಯಿಂದ ಹೊರ ವರ್ತುಲ ರಸ್ತೆವರೆಗೆ ಅಗಲೀಕರಣ
* ದಿಣ್ಣೂರು ರಸ್ತೆ ಸಂಜಯನಗರ ಮುಖ್ಯ ರಸ್ತೆಯಿಂದ ಅಂಬೇಡ್ಕರ್ ಮೆಡಿಕಲ್ ಕಾಲೇಜುವರೆಗೆ ಅಗಲೀಕರಣ
* ವರ್ತೂರು ರಸ್ತೆ ಗುಂಜೂರು ಮಾರ್ಗವಾಗಿ ಸರ್ಜಾಪುರ ರಸ್ತೆವರೆಗೆ ಅಗಲೀಕರಣ
* ಸುಬ್ರತೋ ಮುಖರ್ಜಿ ರಸ್ತೆ ಅಗಲೀಕರಣ ಅಭಿವೃದ್ಧಿಗೆ ಯೋಜನೆ ಹಾಗೂ ಕೆಳಸೇತುವೆ ನಿರ್ಮಾಣ
* ಬಿಬಿಎಂಪಿ ವ್ಯಾಪ್ತಿಯ ಆಯ್ದ ಪ್ರಮುಖ ಜಂಕ್ಷನ್‍ಗಳ ಸಮಗ್ರ ಅಭಿವೃದ್ಧಿ
* ಟೆಂಡರ್ ಶ್ಯೂರ್ ಮಾದರಿಯಲ್ಲಿ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)
* ಮಾರ್ಚ್‌ವೊಳಗೆ 5,700 ಫ್ಲಾಟ್ ಹಂಚಿಕೆ
* 2015-16ರಲ್ಲಿ 5 ಸಾವಿರ ಫ್ಲಾಟ್ ನಿರ್ಮಿಸಿ ಹಂಚಿಕೆ ಮಾಡುವ ಗುರಿ
* ಕೆಂಪೇಗೌಡ ಬಡಾವಣೆಯ 5 ಸಾವಿರ ನಿವೇಶನ ಹಂಚಲು ಮಾರ್ಚ್‍ನಲ್ಲಿ ಅರ್ಜಿ ಆಹ್ವಾನ
* 2015-16ರಲ್ಲಿ ಮತ್ತೆ 5 ಸಾವಿರ ನಿವೇಶನ ರಚಿಸಿ, ಹಂಚಿಕೆ
* ಬಿಡಿಎಯಿಂದ 117 ಕೆರೆಗಳ ಪುನರುಜ್ಜೀವನ, ಮೊದಲ ಹಂತದಲ್ಲಿ 12 ಕೆರೆಗಳ ಪುನರುಜ್ಜೀವನ ಪೂರ್ಣ
* 2015-16ರಲ್ಲಿ 19 ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ
* ನಗರದ 25 ಸ್ಥಳಗಳಲ್ಲಿ ಸ್ಕೈ ವಾಕರ್ ನಿರ್ಮಾಣದ ಯೋಜನೆ
* ಹೆಬ್ಬಾಳ ಜಂಕ್ಷನ್‍ನಲ್ಲಿ ಫ್ಲೈಓವರ್, ಕೆಳ ಸೇತುವೆ ವಿಸ್ತರಣೆಗೆ ಒಟ್ಟು 80 ಕೋಟಿ ರೂ. ಯೋಜನೆ
* ದೊಡ್ಡನೆಕ್ಕುಂದಿ ಜಂಕ್ಷನ್‍ನಲ್ಲಿ ಫ್ಲೈಓವರ್ ನಿರ್ಮಾಣಕ್ಕಾಗಿ 44 ಕೋಟಿ ರೂ.ಅನುದಾನ
ಜಲಮಂಡಳಿ, ತಾಜ್ಯಾ ವಿಲೇವಾರಿ
* ಬೆಂಗಳೂರು ನಗರಕ್ಕೆ ಎನ್‌ಬಿಆರ್‌ನಿಂದ ಪ್ರತಿನಿತ್ಯ 500 ದಶಲಕ್ಷ ಲೀಟರ್ ನೀರು ತರಲು ಯೋಜನೆ
* ಪ್ರಥಮ ಹಂತವಾಗಿ ಟಿ.ಕೆ ಹಳ್ಳಿ ಜಲಾಶಯದ ವರೆಗೆ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ
* 50 ಕಿ.ಮೀಟರ್ ಟ್ರಂಕ್ ಒಳಚರಂಡಿ ತ್ಯಾಜ್ಯ ಕೊಳವೆ ಮಾರ್ಗ ಬದಲಾವಣೆ
* ಹೆಬ್ಬಾಳ, ಕೆ.ಆರ್.ಪುರಂ, ದೊಡ್ಡಬೆಲೆ, ಬೆಂಗಳೂರು ವಿವಿ ಪ್ರದೇಶಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ
* 10 ಕೋಟಿ ವೆಚ್ಚದಲ್ಲಿ 50 ಘನತ್ಯಾಜ್ಯ ತೆಗೆಯುವ ಯಂತ್ರಗಳ ಖರೀದಿ












Click it and Unblock the Notifications