ಹಿಂದುತ್ವ ಸಿದ್ಧಾಂತದ ಬಿಜೆಪಿ ನಾಯಕರಿಂದ ಹಿಂದೂ ದೇವರುಗಳಿಗೆ ಅಪಮಾನ: ಕಾಂಗ್ರೆಸ್ ಆರೋಪ
ಬೆಂಗಳೂರು, ಮಾರ್ಚ್ 31: ಸದಾ ತಾವು ಹಿಂದುಗಳು ಎಂದು ಹಿಂದುತ್ವದ ಪರವಾಗಿ ಮಾತನಾಡುವ ಆಡಳಿತಾರೂಢ ಬಿಜೆಪಿ ನಡೆ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ. ಹಿಂದೂ ವಿರೋಧಿ ಚಟವಟಿಕೆ ಕುರಿತು ಏಕೆ ಮೌನ ವಹಿಸಿದೆ?, ಏಕೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನೆ ಮಾಡಿದೆ.
◆ಮುರುಗೇಶ್ ನಿರಾಣಿ ದೇವತೆಗಳನ್ನು ಅವಮಾನಿಸಿದರು
— Karnataka Congress (@INCKarnataka) March 31, 2023
◆ @CTRavi_BJP ಮಾಂಸ ತಿಂದು ದೇವಸ್ಥಾನಕ್ಕೆ ಹೋದರು
◆ @RAshokaBJP @drashwathcn ಭೂತ ಕೋಲವನ್ನು ಅವಮಾನಿಸಿದರು
◆ @JnanendraAraga ಗುಳಿಗ ದೈವದ ಅವಹೇಳನ ಮಾಡಿದರು
◆ ಶರಣು ಸಲಗರ ರಾಮನ ಮೇಲೆ ಕಾಲಿಟ್ಟರು
ಇದೇನಾ @BJP4Karnataka ಯ
ಧರ್ಮರಕ್ಷಣೆಯ ಕೈಂಕರ್ಯಗಳು?
ಶ್ರೀರಾಮನವಮಿ ಪ್ರಯುಕ್ತ ಶ್ರೀರಾಮನ ಬೃಹತ್ ಪ್ರತಿಮೆಗೆ ಹಾರ ಹಾಕುವ ವೇಳೆ ಬಿಜೆಪಿ ಮುಖಂಡ ಶರಣು ಸಲಗರ ಅವರು ಯಡವಟ್ಟು ಮಾಡಿದ್ದಾರೆ. ಶ್ರೀರಾಮನ ಪ್ರತಿಮೆ ಮೇಲೆ ಕಾಲಿಟ್ಟು ಹಾರ ಹಾಕಿದ್ದ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಈ ಫೋಟೋ ಸಮೇತ ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿಂದುತ್ವ ಸಿದ್ಧಾಂತದ ಪರ ಎನ್ನುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಶರಣು ಸಲಗರ ಅವರ ಘಟನೆಯಿಂದಾಗಿ ಬಿಜೆಪಿ ನಾಯಕರಿಂದಾದ ಅವಘಡಗಳು ಸರಣಿಯನ್ನು ಕಾಂಗ್ರೆಸ್ ಬಿಚ್ಚಿದೆ. ಕರ್ನಾಟಕ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯ ಹಿಂದುತ್ವ ಸಿದ್ಧಾಂತವನ್ನು ಪ್ರಶ್ನಿಸಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಹಿಂದೂ ಸಂಪ್ರದಾಯವನ್ನು ಅವಮಾನಿಸಲು ಹೆಸರುವಾಸಿಯಾಗಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಬಿಜೆಪಿ ನಾಯಕರನ್ನು ಟ್ಯಾಗ್ ಮಾಡಿ ಹಂಚಿಕೊಂಡ ಟ್ವೀಟ್ ಪೋಸ್ಟ್‌ನಲ್ಲಿ ಕಾಂಗ್ರೆಸ್, ''ಬಿಜೆಪಿಯ ನಾರಯಕ ಹಾಲಿ ಕೈಗಾರಿಎಕ ಸಚಿವ ಮುರುಗೇಶ್ ನಿರಾಣಿ ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ದೇವಸ್ಥಾನಕ್ಕೆ ಕಾಲಿಡುವ ಮುನ್ನ ಮಾಂಸಾಹಾರ ಸೇವಿಸಿದ್ದರು.
ಹಾಲಿ ಸಚಿವರ ವಿರುದ್ಧವೂ ಕಾಂಗ್ರೆಸ್ ವಾಗ್ದಾಳಿ
ಇನ್ನೂ ಐಟಿ ಬಿಟಿ ಸಚಿವ ಸಚಿವರಾದ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರು ಭೂತ ಕೋಲ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಗುಳಿಗ ದೇವರನ್ನು ಅವಮಾನಿಸಿದ್ದಾರೆ. ಇನ್ನೂ ಇದೇ ಶ್ರೀರಾಮನವಿ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶರಣು ಸಲಗರನೂ ಶ್ರೀರಾಮನ ಮೇಲೆ ಕಾಲಿಟ್ಟು ಹಾರ ಹಾಕಿದ್ದಾರೆ. ಇವರೆಲ್ಲ ಹಿಂದೂ ಧರ್ಮದ ರಕ್ಷಕರೆ ಎಂದು ಕಾಂಗ್ರೆಸ್ ಕುಟುಕಿದೆ.

ಕಳೆದ ತಿಂಗಳು ಫೆಬ್ರವರಿಯಲ್ಲಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮಾಂಸ ಸೇವಿಸಿದ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಜೆಪಿಯ ಸಿಟಿ ರವಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದರು. ನಂತರ ಟ್ವೀಟ್ ಮಾಡಿದ ಸಿದ್ದರಾಮಯ್ಯನವರು, ಮಾಂಸ ತಿನ್ನುವುದು ಅಥವಾ ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಅಥವಾ ಹೋಗದಿರುವುದು ವೈಯಕ್ತಿಕ ಆಯ್ಕೆಯಾಗಿದೆ. ಇದು ರಾಜಕೀಯ ಚರ್ಚೆಯ ವಿಷಯವಾಗಬಾರದು. ರಾಜಕೀಯ ಮುಖಂಡರು ಜನರ ಹಿತ ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಬೇಕು. ನಿಂದೆಯಲ್ಲಿ ತೊಡಗಿರುವ ಸಿಟಿ ರವಿಯವರೆಗೆ ಅವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದು ಹೇಳಿದ್ದರು.
ಮಾಂಸ ತಿಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಆರೋಪದ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಮೊದಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಿದ್ಧರಾಮಯ್ಯನವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇದೇ ವಿಚಾರವಾಗಿ ಸಿದ್ದರಾಮಯ್ಯನವರನ್ನು ಹಿಂದೂ ವಿರೋಧಿ ಎಂದು ಜರಿದಿದ್ದರು.
ಇದೆಲ್ಲವನ್ನು ಟ್ವೀಟ್‌ನಲ್ಲಿ ಕುಟುಕಿದ್ದ ಸಿದ್ದರಾಮಯ್ಯನವರು ಸಿಟಿ ರವಿ ಅವರ ನಡವಳಿಕೆ, ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿರುವ ಅವರ ಕ್ರಮಗಳು ಈಗ 'ತಮ್ಮ ವಾಂತಿ ತಿನ್ನುವಂತೆ ಮಾಡಿವೆ ಎಂದು ಅವರು ವಾಗ್ದಾಳಿ ನಡೆಸಿದ್ದರು.












Click it and Unblock the Notifications