₹2,000 Note Exchange: ನೋಟು ವಿನಿಮಯಕ್ಕೆ ಕ್ಯೂ ನಿಂತ ಜನ, ಅರ್ಜಿ-ದಾಖಲೆ ಇಲ್ಲದೇ ಬದಲಾವಣೆ ದುರುಪಯೋಗ ಸಾಧ್ಯತೆ?
ಬೆಂಗಳೂರು, ಮೇ 23: ಉದ್ಯಾನ ನಗರಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳು, ಜಿಲ್ಲೆಗಳು, ಪ್ರದೇಶಗಳಲ್ಲಿನ ಬ್ಯಾಂಕ್‌ಗಳ ಮುಂದೆ ಜನರು ₹2000 ನೋಟುಗಳ ಬದಲಾವಣೆಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ವಿಶೇಷವೆಂದರೆ ಯಾವುದೇ ಅರ್ಜಿ, ಗುರುತಿನ ಚೀಟಿ ಪಡೆಯದೇ ಹಣ ವಿನಿಮಯ ಆಗುತ್ತಿದೆ. ಈ ಅವಕಾಶದ ದುರಪಯೋಗ ಆಗುವ ಸಾಧ್ಯತೆಯೂ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆಯಂತೆ ಇಂದು ಮೇ 23ರಿಂದ ನೋಟು ಬದಲಾವಣೆ ಆರಂಭವಾಗಿದೆ. ಮೈಸೂರು ಜಿಲ್ಲೆಯ ಶಿವರಾಮಪೇಟೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ನೋಟು ಬದಲಾವಣೆಗೆ ಮುಂದಾಗಿದ್ದಾರೆ. ಮೊನ್ನೆಯಷ್ಟೇ ಎಸ್‌ಬಿಐ ನೋಟು ಬದಲಾವಣೆಗೆ ರಿಕ್ವೆಸ್ಟ್ ಫಾರ್ಮ್, ಗುರುತಿನ ಚೀಟಿ ಇಲ್ಲದೇ ವಿನಿಮಯಕ್ಕೆ ಅವಕಾಶ ನೀಡಿರುವುದಾಗಿ ತಿಲಿಸಿತ್ತು.

ಇಂದು ಬೆಳಗ್ಗೆಯೇ ಹತ್ತಿರ ಬ್ಯಾಂಕ್‌ಗಳಿಗೆ ಪಿಂಕ್ ನೋಟು ಸಮೇತ ಬಂದ ಸಾರ್ವಜನಿಕರು ₹2000 ಮುಖಬೆಲೆಯ 10 ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಿನಿಮಯಕ್ಕೆ ಬದಲಾಗಿ ತಮ್ಮ ಖಾತೆಗಳಿಗೆ ಜಮೆ ಮಾಡುತ್ತಿದ್ದಾರೆ. ಹಣ ಜಮೆ ಮಾಡುವ ಜೊತೆಗೆ ತಮಗೆ ಇರುವ ಗೊಂದಲಗಳ ಬಗ್ಗೆ ಬ್ಯಾಂಕ್ ಅಧಿಕಾರ ಜೊತೆಗೆ ಚರ್ಚಿಸಿ ಸಲಹೆ ಪಡೆಯುತ್ತಿರುವುದು ಕಂಡು ಬಂದಿದೆ.
ಹಣ ವಿನಿಮಯ ಅವಕಾಶ ದುರಪಯೋಗ ಸಾಧ್ಯತೆ
ದೊಡ್ಡ ನೋಟಿನ ವಿನಯಮಕ್ಕೆಂದೆ ಕೇಂದ್ರ ಸರ್ಕಾರ ರಿಕ್ವೆಸ್ಟ್ ಫಾರ್ಮ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಸದ್ಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಈ ಅರ್ಜಿ ಆಗಲಿ, ಯಾವುದೇ ದಾಖಲಾತಿ ಆಗಲಿ ಇಲ್ಲದೇ ನೋಟು ಬದಲಾವಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಹಣ ವಿನಿಮಯ ಮಾಡಿಕೊಳ್ಳಲು ಹಾಗೂ ಖಾತೆ ಇದ್ದರೂ, ಇಲ್ಲದವರಿಗೂ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ. ಎಸ್‌ಬಿಐ ನಲ್ಲಿ ಹಣ ಬದಲಾಯಿಸಿಕೊಂಡ ವ್ಯಕ್ತಿಗೆ ಮತ್ತೊಂದು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಅಲ್ಲಿಯೂ ಹಣ ವಿನಿಮಯಕ್ಕೆ ಮುಂದಾದರೆ ಇದು ವಿನಿಮಯ ಅವಕಾಶದ ದುರಪಯೋಗವಾಗುತ್ತದೆ.
ಈ ಕಾರಣದಿಂದ ಹೆಚ್ಚು 2000 ರೂಪಾಯಿ ನೊಟುವುಳ್ಳ ವ್ಯಕ್ತಿ ನಿತ್ಯ ವಿವಿಧ ಬ್ಯಾಂಕ್‌ಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡದಂತಾಗುತ್ತದೆ. ಆದ್ದರಿಂದ ಬ್ಯಾಂಕ್‌ಗಳು ಆರ್‌ಬಿಐ ನಿಯಮ ಪಾಲಿಸಬೇಕು. ಈ ಮೂಲಕ ಹಣ ವಿನಿಮಯ ಅವಕಾಶ ದುರುಪಯೋಗ ಆಗದಂತೆ ತಡೆಯಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಜನ ಹೆಚ್ಚಾದರೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ?
ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಬ್ಯಾಂಕ್‌ಗಳಲ್ಲಿ ಅಧಿಕಾರಿಗಳು ಗ್ರಾಹಕರಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ನೋಟು ವಿನಿಮಯದಲ್ಲಿ ಜನರ ಗೊಂದಲ ಬಗೆಹರಿಸುತ್ತಿದ್ದಾರೆ. ಜನರು 2000 ರೂ. ಮೌಲ್ಯದ 10 ನೋಟು ಬದಲಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅವರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾದಲ್ಲಿ ಪ್ರತ್ಯೇಕ ಕೌಂಟರ್‌ಗೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.
ಆರ್‌ಬಿಐ ಇಂದು ಮೇ 23ರಿಂದ ಸೆಪ್ಟಂಬರ್ 30ರವರೆಗೆ ತಮ್ಮಲ್ಲಿರುವ ದೊಡ್ಡ ನೋಟುಗಳನ್ನು ನಿತ್ಯ 10 ನೋಟುಗಳಂತೆ ಬದಲಿಸಿಕೊಳ್ಳಲುವ ಅವಕಾಶ ನೀಡಲಾಗಿದೆ. ಇದಕ್ಕಾಗಿ ಹಣ ಬದಲಾಯಿಸುವ ಗ್ರಾಹಕರು ಅರ್ಜಿ ಭರ್ತಿ ಮಾಡಬೇಕಿತ್ತು. ಆದರೆ ಸದ್ಯ ಯಾವುದೇ ಅರ್ಜಿ, ಗುರುತಿನ ಚೀಟಿ ಪಡೆಯದೇ ನೋಟು ಬದಲಾಯಿಸಿಕೊಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಹಕರೊಬ್ಬರು ಹೇಳಿದರು.












Click it and Unblock the Notifications