ಕರ್ನಾಟಕ ಚುನಾವಣೆ: ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಸಮಿತಿಯು ವಿಶೇಷ ಪ್ರಯತ್ನ

ರಾಜ್ಯದ ಮತದಾನದ ಶೇಕಡಾವಾರು ಶೇಕಡಾ 70 ಕ್ಕಿಂತ ಹೆಚ್ಚಿದ್ದರೆ, ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಬೆಂಗಳೂರಿನಂತಹ ನಗರಗಳಲ್ಲಿ, ಇದು ಶೇಕಡಾ 50 ರಷ್ಟು ಕಡಿಮೆಯಾಗಿದೆ.

ಬೆಂಗಳೂರು, ಮಾರ್ಚ್. 22 : ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಾಗುತ್ತಿರುವಂತೆಯೇ, ಚುನಾವಣಾ ಸಮಿತಿ ಕೂಡ ತನ್ನ ಸಿದ್ಧತೆ ನಡೆಸುತ್ತಿದೆ. ರಾಜ್ಯದಲ್ಲಿ ಕಡಿಮೆ ಮತದಾನವಾಗಿರುವ ಬೂತ್‌ಗಳಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿಶೇಷ ಗಮನ ಹರಿಸಿದ್ದಾರೆ.

ರಾಜ್ಯವು 57,300 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಹೊಂದಿದ್ದು, ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರಗಳು ಹಿಂದುಳಿದಿವೆ. ರಾಜ್ಯದ ಸರಾಸರಿ ಮತದಾನಕ್ಕೆ ಹೋಲಿಸಿದರೆ ಕಡಿಮೆ ಮತದಾನವನ್ನು ದಾಖಲಿಸುತ್ತಿದೆ. ಕಳೆದ ಒಂದು ದಶಕದಲ್ಲಿ, ರಾಜ್ಯದ ಮತದಾನದ ಶೇಕಡಾವಾರು ಶೇಕಡಾ 70 ಕ್ಕಿಂತ ಹೆಚ್ಚಿದ್ದರೆ, ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಬೆಂಗಳೂರಿನಂತಹ ನಗರಗಳಲ್ಲಿ, ಇದು ಶೇಕಡಾ 50 ರಷ್ಟು ಕಡಿಮೆಯಾಗಿದೆ.

Karnataka Assembly Elections 2023: Polls Panel Want to increase voting percentage in urban areas

ರಾಜ್ಯದಾದ್ಯಂತ 9,000 ಮತಗಟ್ಟೆಗಳಲ್ಲಿ, ಮತದಾನದ ಶೇಕಡಾವಾರು ಅವರು ಬರುವ ಕ್ಷೇತ್ರಗಳ ಸರಾಸರಿಗಿಂತ ಕಡಿಮೆಯಾಗಿದೆ. ಅಂತಹ 73 ವಿಧಾನಸಭಾ ಕ್ಷೇತ್ರಗಳಿವೆ ಎಂದು ಕರ್ನಾಟಕ ಸಿಇಒ ಮನೋಜ್ ಕುಮಾರ್ ತಿಳಿಸಿದ್ದಾರೆ. "ನಾವು ಅಂತಹ ಮತಗಟ್ಟೆಗಳನ್ನು ಗುರುತಿಸಿದ್ದೇವೆ. ನಮ್ಮ ಸಿಬ್ಬಂದಿ ಆ ನಿರ್ದಿಷ್ಟ ಮತಗಟ್ಟೆಗಳಿಗೆ ಭೇಟಿ ನೀಡುತ್ತಾರೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.

ನಿರ್ದಿಷ್ಟ ಮತಗಟ್ಟೆಗಳಿಗೆ ಭೇಟಿ ನೀಡುವ ಸಿಬ್ಬಂದಿ ಮತದಾರರೊಂದಿಗೆ ಸಂವಾದ ನಡೆಸುತ್ತಾರೆ. ಕಡಿಮೆ ಮತದಾನಕ್ಕೆ ಕಾರಣ ಹುಡುಕುತ್ತಾರೆ. ಅವರ ಕಷ್ಟಗಳನ್ನು ಆಲಿಸುತ್ತಾರೆ. ಮತದಾನದ ಶೇಕಡಾವಾರು ಹೆಚ್ಚಳಕ್ಕೆ ಹೊರಗಿನಿಂದ ಏನಾದರೂ ಸಹಾಯ ಬೇಕಿದ್ದರೇ, ನಾವು ಅದನ್ನು ಮಾಡುತ್ತೇವೆ. ಕೆಲವೊಮ್ಮೆ, ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಉತ್ತಮ ರಸ್ತೆಗಳು ಮತ್ತು ಇತರ ಉತ್ತಮ ಸೌಕರ್ಯಗಳಂತಹ ಕಾರಣಗಳು ಸಹ ಮತದಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಮನೋಜ್ ಕುಮಾರ್ ತಿಳಿಸಿದ್ದಾರೆ.

Karnataka Assembly Elections 2023: Polls Panel Want to increase voting percentage in urban areas

ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಚಿಕ್ಕ ಮತ್ತು ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಜನರಿಗೆ ವೋಟರ್ ಸ್ಲಿಪ್ ತಲುಪಿಸುವುದು ಸವಾಲಾಗಿದೆ. "ಮತದಾರರು ಚುನಾವಣೆಯ ದಿನ ಮತಗಟ್ಟೆಗಳಿಗೆ ಬರದೇ ಇರಲು ಇದೂ ಒಂದು ಕಾರಣವಾಗಿರಬಹುದು" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಾರಿ, ನಾವು ಅಪಾರ್ಟ್‌ಮೆಂಟ್‌ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಅಥವಾ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಸಹಾಯದಿಂದ ಅವರನ್ನು ತಲುಪಲು ಚಿಂತಿಸುತ್ತಿದ್ದೇವೆ. 100 ರಷ್ಟು ವೋಟರ್ ಸ್ಲಿಪ್‌ಗಳನ್ನು ಮತದಾರರಿಗೆ ತಲುಪಿಸಲು ನಾವು ಪ್ರಯತ್ನಿಸುತ್ತೇವೆ. ಈ ಚುನಾವಣೆಯಲ್ಲಿ ಹೆಚ್ಚಿನ ಮತದಾರರನ್ನು ಸೆಳೆಯುವ ವಿಶ್ವಾಸವಿದೆ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.

ಇತ್ತ, ಉಡುಪಿ ಜಿಲ್ಲಾಡಳಿತವು ಮತದಾರರ ಜಾಗೃತಿ ಮತ್ತು ಮತದಾರರ ಸಾಕ್ಷರತೆಯನ್ನು ಉತ್ತೇಜಿಸುವ ನಾಲ್ಕು ಪುಟಗಳ ಇ-ಪೇಪರ್ (ಟ್ಯಾಬ್ಲಾಯ್ಡ್) ಅನ್ನು ಪ್ರತಿದಿನ ಹೊರತರುತ್ತಿದೆ . ತನ್ನ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (SVEEP) ಅಂಗವಾಗಿ ಮತದಾರರ ಶಿಕ್ಷಣಕ್ಕಾಗಿ ಭಾರತ ಚುನಾವಣಾ ಆಯೋಗದ ಪ್ರಮುಖ ಕಾರ್ಯಕ್ರಮ ಇದಾಗಿದೆ.

'ಚುನಾವಣಾ ಪತ್ರಿಕೆ' ಎಂಬ ಶೀರ್ಷಿಕೆಯ ಕನ್ನಡ ಇ-ಪೇಪರ್ ಅನ್ನು ಪ್ರತಿದಿನ ಸಂಜೆ 6 ಗಂಟೆಗೆ ಹೊರತರಲಾಗುತ್ತಿದ್ದು, ಪ್ರಸ್ತುತ 75,000 ಜನರನ್ನು ತಲುಪುತ್ತಿದೆ. ಒಂದು ವಾರದಲ್ಲಿ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ 2.5 ಲಕ್ಷ ಜನರನ್ನು ತಲುಪುತ್ತೇವೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.

"ಚುನಾವಣೆ, ಪ್ರಕ್ರಿಯೆ ಮತ್ತು ವರ್ಷಗಳಿಂದ ಚುನಾವಣಾ ವ್ಯವಸ್ಥೆಯು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲು ಎಸ್‌ವಿಇಇಪಿನ ಭಾಗವಾಗಿ ಇದು ವಿನೂತನ ಪ್ರಯತ್ನವಾಗಿದೆ. ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಆವೃತ್ತಿಯನ್ನು ಹೊರತರಲಾಗುವುದು. ಗರಿಷ್ಠ ಸಂಖ್ಯೆಯ ಜನರನ್ನು ತಲುಪುವ ವ್ಯವಸ್ಥೆಯು ಇದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+