Amit Shah in Bengaluru: ಬೆಂಗಳೂರಿನ ಮೇಲೆ ಅಮಿತ್ ಶಾ ಕಣ್ಣು, ಇಂದು ನಗರಕ್ಕೆ ಭೇಟಿ

2018ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ 28 ಸ್ಥಾನಗಳಲ್ಲಿ ಆಗಿನ ಆಡಳಿತಾರೂಢ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 11, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿದೆ.

ಬೆಂಗಳೂರು, ಮಾರ್ಚ್ 03: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ರಾಜ್ಯ ರಾಜಧಾನಿಯ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಾನಸಭೆ ಚುನಾವಣೆಗೂ ಮುನ್ನ ಬೆಂಗಳೂರು ನಗರದತ್ತ ವಿಶೇಷ ಗಮನ ಹರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕರು ವಾರಕ್ಕೆ ಒಬ್ಬರಾದೂ ರಾಜ್ಯ್ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತ್ ಶಾ ತಮ್ಮ ಕೊನೆಯ ಭೇಟಿಯ ಸಂದರ್ಭದಲ್ಲಿ ನಗರದ ಟೌನ್ ಹಾಲ್‌ನಲ್ಲಿ ಸಮಾಜದ ಎಲ್ಲಾ ವರ್ಗದ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಬಾರಿ ಶುಕ್ರವಾರ (ಮಾರ್ಚ್ 3) ನಿರ್ಭಯಾ ನಿಧಿಯಿಂದ ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯದ ಯೋಜನೆಗೆ ದೇಶದಾದ್ಯಂತ ಆಯ್ಕೆಯಾದ ಎಂಟು ನಗರಗಳಲ್ಲಿ ಬೆಂಗಳೂರು ಕೂಡ ಒಂದು.

Karnataka Assembly Elections 2023: Amit Shah continues to focus on Bengaluru ahead of polls

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಇನ್ನೂ ಚುನಾವಣೆ ನಡೆಯಬೇಕಿದ್ದು, ಅದೇನಾದರೂ ಇಷ್ಟರಲ್ಲಿ ನಡೆದಿದ್ದರೇ ಮತದಾರರ ಮನಸ್ಸನ್ನು ಅಳೆಯಲು ಬಿಜೆಪಿಗೆ ಸಹಕಾರಿಯಾಗುತ್ತಿತ್ತು. ಸಿಲಿಕಾನ್ ಸಿಟಿಯ ಜನರು ರಸ್ತೆಗುಂಡಿ ಸಮಸ್ಯೆಗಳು ಸೇರಿದಂತೆ ಹಲವಾರು ಸಮಸ್ಯೆಗಳಿಂದ ತತ್ತರಿಸುತ್ತಿರುವ ಸಾರ್ವಜನಿಕರನ್ನು ಓಲೈಸಲು ಪಕ್ಷವು ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಆದ್ದರಿಂದ, ಅಮಿತ್ ಶಾ ಮತ್ತು ಪಿಎಂ ನರೇಂದ್ರ ಮೋದಿ ಅವರಂತಹ ರಾಷ್ಟ್ರೀಯ ನಾಯಕರ ಭೇಟಿ ಪಕ್ಷಕ್ಕೆ ಅಗತ್ಯವಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ 28 ಸ್ಥಾನಗಳಲ್ಲಿ ಆಗಿನ ಆಡಳಿತಾರೂಢ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 11, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ, 2019ರಲ್ಲಿ ಮೂವರು ಕಾಂಗ್ರೆಸ್‌ ಶಾಸಕರು (ಎಸ್‌ಟಿ ಸೋಮಶೇಖರ್‌, ಬೈರತಿ ಬಸವರಾಜ್ ಮತ್ತು ಮುನಿರತ್ನ) ಮತ್ತು ಜೆಡಿಎಸ್ ಶಾಸಕ (ಕೆ ಗೋಪಾಲಯ್ಯ) ಬಿಜೆಪಿಗೆ ಪಕ್ಷಾಂತರವಾಗಿದ್ದಾರೆ. ಹೀಗಾಗಿ ಮತ್ತೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಸದ್ಯ ಬಿಜೆಪಿ ಪಕ್ಷದ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.

ಅಮಿತ್ ಶಾ ಅವರು ಪ್ರಚಾರಕ್ಕೆ ಬೇಕಾಗುವ ಯಾವ ಅವಕಾಶವನ್ನೂ ಬಿಡುತ್ತಿಲ್ಲ. ಬೆಂಗಳೂರು ನಗರದ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಮತ್ತೆ ತರಿಸುವ ಉದ್ದೇಶದಿಂದ ಪಕ್ಷದ ವಿಜಯ ಸಂಕಲ್ಪ ಯಾತ್ರೆಯ ಭಾಗವಾದ ನಾಲ್ಕನೇ 'ರಥ'ವನ್ನು ದೇವನಹಳ್ಳಿಯ ಚೆನ್ನಕೇಶವ ದೇವಸ್ಥಾನದಿಂದ ಪ್ರಾರಂಭಿಸಿಸಲಿದ್ದಾರೆ. ಇದೇ ವೇಳೆ ಸಾರ್ವಜನಿಕ ಮೆರವಣಿಯಲ್ಲಿಯೂ ಭಾಗಿಯಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Karnataka Assembly Elections 2023: Amit Shah continues to focus on Bengaluru ahead of polls

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಅಮಿತ್ ಶಾ ನಗರಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದು ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. "ಪ್ರತಿ ಚುನಾವಣೆಯಲ್ಲೂ, 20% ಮತದಾರರು ಜಾತಿ, ಮತ, ಭಾಷೆ ಮತ್ತು ಧರ್ಮವನ್ನು ಪರಿಗಣಿಸದೆ ತಮ್ಮ ಹಕ್ಕು ಚಲಾಯಿಸುವ ಮೂಲಕ ಬೆಂಗಳೂರು ವಿಶ್ವಮಾನ್ಯತೆಯನ್ನು ಸಾಬೀತುಪಡಿಸಿದೆ. ಈ ಬಾರಿಯೂ ಹಾಗೆಯೇ ಆಗಲಿದೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ' ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು, ಅಮಿತ್ ಶಾ ಭೇಟಿ ಹಿನ್ನೆಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ನಗರದ ಕೆಲವು ಪ್ರದೇಶಗಳಲ್ಲಿ ಸಂಚಾರ ನಿರ್ಬಂಧ ಹೇರಿದ್ದಾರೆ. ಕೆಲವು ರಸ್ತೆಗಳಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ಸಂಚಾರ ವ್ಯತ್ಯಯ ಉಂಟಾಗಲಿದೆ ಎಂದುಸಂಚಾರ ಪೊಲೀಸರು ತಿಳಿಸಿದ್ದಾರೆ.

ಏರ್‌ಪೋರ್ಟ್ ರೋಡ್, ಬಳ್ಳಾರಿ ರಸ್ತೆ, ಹೆಬ್ಬಾಳ ಜಂಕ್ಷನ್‌, ಮೇಖ್ರಿ ವೃತ್ತ, ಕಾವೇರಿ ಥಿಯೇಟರ್ ಜಂಕ್ಷನ್‌, ರಮಣ ಮಹರ್ಷಿ ರಸ್ತೆ, ರಾಜಭವನ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಕೆಆರ್ ವೃತ್ತ, ಪೊಲೀಸ್ ಕಾರ್ನರ್, ಹಡ್ಸನ್ ವೃತ್ತ, ಎನ್‌ಆರ್‌ಜೆ. , ಟೌನ್ ಹಾಲ್ ಜಂಕ್ಷನ್‌, ಗೋಪಾಲ ಗೌಡ ಜಂಕ್ಷನ್‌, ಪೊಲೀಸ್ ತಿಮ್ಮಯ್ಯ, ಟ್ರಿನಿಟಿ ಜಂಕ್ಷನ್‌, ಹಳೆಯ ವಿಮಾನ ನಿಲ್ದಾಣ ರಸ್ತೆ, ಎಎಸ್‌ಸಿ ಸೆಂಟರ್, ಇಸ್ರೋ ಜಂಕ್ಷನ್‌ ಮತ್ತು ಎಸ್‌ಡಿ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+