ಪದ್ಮನಾಭನಗರ: ಮತದಾನ ನಿರಾಕರಣೆ, ಕಣ್ಣೀರಿಟ್ಟ ಗರ್ಭಿಣಿ
ಬೆಂಗಳೂರು, ಮೇ 12: ಮತದಾನಕ್ಕೆ ನಿರಾಕರಿಸಿದ್ದಕ್ಕೆ ತುಂಬು ಗರ್ಭಿಣಿ ಮತದಾನ ಕೇಂದ್ರದಲ್ಲಿ ಕಣ್ಣೀರು ಹಾಕಿದ ಘಟನೆ ಪದ್ಮನಾಭನಗರ ಕ್ಷೇತ್ರದಲ್ಲಿ ನಡೆದಿದೆ.
ಪದ್ಮನಾಭನಗರ ಕ್ಷೇತ್ರದಲ್ಲಿ ಬೆಳಗ್ಗೆ 7ರಿಂದ ಮತದಾನ ಸರಾಗವಾಗಿ ನಡೆದಿದೆ. ಪದ್ಮನಾಭನಗರ ಕ್ಷೇತ್ರದ ಬಿ.ಎನ್.ಎಂ.ಕಾಲೇಜು ಮತಕೇಂದ್ರದಲ್ಲಿ ಈ ಘಟನೆ ನಡೆದಿದೆ. ಒರಿಜಿನಲ್ ವೋಟರ್ ಐಡಿ ತರದೇ ಇರುವುದಕ್ಕೆ ಗರ್ಭಿಣಿಗೆ ಮತದಾನ ಮಾಡಲು ಚುನಾವಣೆ ಸಿಬ್ಬಂದಿ ನಿರಾಕರಿಸಿದ್ದಾರೆ.
ತುಂಬು ಗರ್ಭಿಣಿ ಚೈತ್ರಾ ಮತದಾನಕ್ಕೆ ಬಂದ ಮಹಿಳೆ, ಮತದಾನ ನಿರಾಕರಿಸಿದ್ದಕ್ಕೆ ಮತದಾನ ಕೇಂದ್ರದಲ್ಲಿ ಕಣ್ಣೀರು ಹಾಕಿದ ಚೈತ್ರಾ ಕಣ್ಣೀರು ಹಾಕಿದ್ದಾರೆ. ಝೆರಾಕ್ಸ್ ಓಟರ್ ಐಡಿ ನಡೆಯಲ್ಲ., ಮತದಾನಕ್ಕೆ ಅವಕಾಶ ನೀಡುವುದಿಲ್ಲ,ಎಂದು ಚುನಾವಣಾ ಸಿಬ್ಬಂದಿ ಹೇಳಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ಸ್ಥಳೀಯ ಕಾರ್ಪೋರೇಟರ್ ಲಕ್ಷ್ಮೀ ಉಮೇಶ್ ಸಹಾಯದಿಂದ ಚೈತ್ರಾ ಮತದಾನ ಮಾಡಿದ್ದಾರೆ. ಮತದಾನ ಪಟ್ಟಿಯಲ್ಲಿ ಚೈತ್ರಾ ಹೆಸರು ಇದ್ದ ಕಾರಣ ಝೆರಾಕ್ಸ್ ಓಟರ್ ಐಡಿಯನ್ನೇ ತೋರಿಸಿ ಮತದಾನ ಮಾಡಿದರು. ಮತದಾನ ಬಳಿಕ ನಗುಮುಖದಿಂದ ಚೈತ್ರಾ ಹೊರಬಂದಿದ್ದಾರೆ.












Click it and Unblock the Notifications