ದ್ವಿತೀಯ ಪಿಯುಸಿ ಫಲಿತಾಂಶದ Highlights

ಬೆಂಗಳೂರು, ಮೇ 8 : 2013-14ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಗುರುವಾರ ಬೆಳಗ್ಗೆ ಫಲಿತಾಂಶ ಪ್ರಕಟಗೊಂಡಿದ್ದು, ಇಂದು ಇಂಟರ್ನೆಟ್ ನಲ್ಲಿ ಮಾತ್ರ ಲಭ್ಯವಿದೆ. ಕಾಲೇಜುಗಳಲ್ಲಿ ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿಗಳು ಫಲಿತಾಂಶ ನೋಡಬಹುದಾಗಿದೆ.

2014ರ ಮಾರ್ಚ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 984 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಒಟ್ಟು 6,13,705 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇ 66.81ರಷ್ಟು ಫಲಿತಾಂಶವನ್ನು ಅವರು ಪಡೆದಿದ್ದಾರೆ. [ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ]

Kimmane Rathnakar

2014ರಲ್ಲಿ 3,15,028 ಬಾಲಕರು ಮತ್ತು 1,99,667 ಬಾಲಕೀಯರು ಪರೀಕ್ಷೆ ಬರೆದಿದ್ದರು. ನಗರ ಪ್ರದೇಶಗಳಿಂತ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದು ಶೇ 61.51 ರಷ್ಟು ಫಲಿತಾಂಶ ಗ್ರಾಮೀಣ ಪ್ರದೇಶದಲ್ಲಿ ಬಂದಿದೆ. ನಗರದ ಫಲಿತಾಂಶ ಶೇ 60.15ರಷ್ಟಿದೆ. [ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ]

ವಿಭಾಗವಾರು ಫಲಿತಾಂಶ : ಈ ಬಾರಿಯ ಫಲಿತಾಂಶದಲ್ಲಿ ಶೇ 51.25 ರಷ್ಟು ಫಲಿತಾಂಶ ಕಲಾವಿಭಾಗದಲ್ಲಿ, ಶೇ 70.08ರಷ್ಟು ಫಲಿತಾಂಶ ವಾಣಿಜ್ಯ ವಿಭಾಗದಲ್ಲಿ ಮತ್ತು ಶೇ 62.19ರಷ್ಟು ಫಲಿತಾಂಶ ವಿಜ್ಞಾನವಿಭಾಗದಲ್ಲಿ ಬಂದಿದೆ.

ಜಾತಿವಾರು ಲೆಕ್ಕಾಚಾರ : 2014ರ ಫಲಿತಾಂಶದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೇ 49.47ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ 52.41ರಷ್ಟು, ಪ್ರವರ್ಗ -1ರವಿದ್ಯಾರ್ಥಿಗಳು 59.08ರಷ್ಟು ಮತ್ತು ಇತರೆ ವಿದ್ಯಾರ್ಥಿಗಳು ಶೇ 63.94ರಷ್ಟು ಫಲಿತಾಂಶ ಪಡೆದಿದ್ದಾರೆ.

ಮಾಧ್ಯಮವಾರು ಫಲಿತಾಂಶ : ಕನ್ನಡ ಮಾಧ್ಯಮದ 1,61,892 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು ಶೇ 55.14ರಷ್ಟು ಫಲಿತಾಂಶ ಲಭ್ಯವಾಗಿದೆ. ಇಂಗ್ಲಿಷ್ ಮಾಧ್ಯಮದ 2,09,224 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 65.36 ರಷ್ಟು ಫಲಿತಾಂಶ ಬಂದಿದೆ.

372 ಅಂಧರು ಉತ್ತೀರ್ಣ : ಈ ಬಾರಿ 584 ಅಂಧರು ಪರೀಕ್ಷೆ ಬರೆದಿದ್ದರು ಇವರಲ್ಲಿ 372 ಮಂದಿ ಉತ್ತೀರ್ಣರಾಗಿದ್ದಾರೆ. 1632 ಮಂದಿ ಇತರೆ ಅಂಗವಿಕಲರು ಪರೀಕ್ಷೆ ಬರೆದಿದ್ದರು ಇವರಲ್ಲಿ 950 ಜನರು ಪಾಸಾಗಿದ್ದಾರೆ.

ಎಷ್ಟು Distinction : 2014ರ ಫಲಿತಾಂಶದಲ್ಲಿ 36,344 ವಿದ್ಯಾರ್ಥಿಗಳು Distinction ಪಡೆದಿದ್ದರೆ, 1,83,788 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. 69,914 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, 39,768 ವಿದ್ಯಾರ್ಥಿಗಳು ತೃತೀಯ ದರ್ಜೆ ಪಡೆದು ಪಾಸಾಗಿದ್ದಾರೆ.

ಸಪ್ಲಿಮೆಂಟರಿ ಪರೀಕ್ಷೆ ಯಾವಾಗ : 2014ರ ಜುಲೈನಲ್ಲಿ ಪೂರಕ ಪರೀಕ್ಷೆ ನಡೆಯಲಿದೆ. ಆಯಾ ಕಾಲೇಜುಗಳಲ್ಲಿ ಪರೀಕ್ಷಾ ಶುಲ್ಕ ಪಾವತಿಸಿ ಅರ್ಜಿಸಲ್ಲಿಸಲು ಮೇ 22ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವಿಷಯಕ್ಕೆ 101 ಮತ್ತು ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ರೂ.302 ಶುಲ್ಕವನ್ನು ನಿಗದಿಗೊಳಿಸಲಾಗಿದೆ.

ಫೋಟೋ ಪ್ರತಿ ಮತ್ತು ಮರು ಮೌಲ್ಯಮಾಪನ : ಬೆಂಗಳೂರು ನಗರದ Bangalore-ONE ಕೇಂದ್ರಗಳಲ್ಲಿ ಹಾಗೂ ಬೆಳಗಾಂ, ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಬಳ್ಳಾರಿ, ಗುಲ್ಬರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ Karnataka-ONE ಕೇಂದ್ರಗಳಲ್ಲಿ ನಿಗದಿತ ಶುಲ್ಕ ಪಾವತಿ ಮಾಡಿ ಫೋಟೋ ಪ್ರತಿ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಉತ್ತರ ಪತ್ರಿಕೆ ಫೋಟೋ ಪ್ರತಿ, ಮರು ಮೌಲ್ಯಮಾಪನ ಮತ್ತು ಮರು ಮರು ಎಣಿಕೆಗಾಗಿ www.bangaloreone.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶುಲ್ಕು ಸಂದಾಯ ಮಾಡುವ ಕುರಿತು ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವೆ ಇಲ್ಲದ ನಗರಗಳಲ್ಲಿ ಆಯಾ ಕಾಲೇಜುಗಳಿಂದ ಅರ್ಜಿಗಳನ್ನು ಪಡೆದುಕೊಂಡು ಭರ್ತಿ ಮಾಡಿ, ಉಪ ನಿರ್ದೇಶಕರು (ಪರೀಕ್ಷೆ), ಪದವಿ ಪೂರ್ವ ಶಿಕ್ಷಣ ಇಲಾಖೆ, 18 ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು -12 ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವ ಕೂರಿಯರ್ ಮೂಲಕ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15. ಪೋಟೋ ಪ್ರತಿ ಪಡೆಯಲು ಒಂದ ಉತ್ತರ ಪ್ರತಿಕೆಗೆ 504 ರೂ. ಶುಲ್ಕ ನಿಗದಿ ಮಾಡಲಾಗಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದ್ದು, ಒಂದು ಉತ್ತರ ಪತ್ರಿಕೆಗೆ 1,260 ಶುಲ್ಕ ನಿಗದಿಗೊಳಿಸಲಾಗಿದೆ. ಮರುಎಣಿಕೆಗೆ ಅರ್ಜಿ ಸಲ್ಲಿಸಲು ಮೇ20ಕೊನೆಯ ದಿನವಾಗಿದ್ದು, ಒಂದು ಉತ್ತರ ಪತ್ರಿಕೆಗೆ 336 ರೂ. ಶುಲ್ಕ ನಿಗದಿಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+