ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡತಿ ಉತ್ಸವ-2022: ಅವಳ ಹೆಜ್ಜೆಯಲ್ಲಿ ರ‍್ಯಾಂಪ್ ವಾಕ್

|
Google Oneindia Kannada News

ಬೆಂಗಳೂರು, ನ.13: ''ಹೆಣ್ಣು ಒಂದು ಹೆಜ್ಜೆ ಮುಂದೆ ಇಟ್ಟರೆ ಸಮಾಜ ಒಂದು ಹಂತ ಮೇಲಕ್ಕೇರುತ್ತದೆ. ಎಲ್ಲಾ ಮಹಿಳೆಯರಲ್ಲೂ ಒಂದಿಲ್ಲೊಂದು ಕನಸು ಅಥವಾ ಕಲೆ ಅಡಗಿರುತ್ತದೆ. ಅವುಗಳಿಗೆ ಸರಿಯಾದ ಪೋಷಣೆ ನೀಡುವುದು ಕುಟುಂಬದ ಹೊಣೆ" ಎಂದು ʼಅವಳ ಹೆಜ್ಜೆʼ ಸಂಸ್ಥಾಪಕಿ ಶಾಂತಲಾ ದಾಮ್ಲೆ ಹೇಳಿದ್ದಾರೆ.

ಕನ್ನಡತಿ ಉತ್ಸವ-2022 ರ ಅಂಗವಾಗಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದ ʼಮಿಸ್‌ ಮಹಾಲಕ್ಷ್ಮೀʼ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಪಾರಿತೋಷಕ ವಿತರಿಸಿ ಶಾಂತಲಾ ದಾಮ್ಲೆ ಮಾತನಾಡುತ್ತಿದ್ದರು.

ಚರ್ಚ್‌ಸ್ಟ್ರೀಟ್‌ನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಕುರಿತಂತೆ ಕಲಾಕೃತಿ ಪ್ರದರ್ಶನಚರ್ಚ್‌ಸ್ಟ್ರೀಟ್‌ನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಕುರಿತಂತೆ ಕಲಾಕೃತಿ ಪ್ರದರ್ಶನ

"ಮಹಿಳೆಗೆ ಅವಕಾಶ ದೊರಕಿಸಿಕೊಡುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ. ಹೆಣ್ಣು ಮಕ್ಕಳು ಆಟದ ಮೈದಾನದಿಂದ ಬೋರ್ಡ್‌ ರೂಮಿನವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ಹಬ್ಬಿ ಬೆಳೆಯಬೇಕೆಂಬುದು ನನ್ನ ಹಂಬಲ" ಎಂದು ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

Kannadathi Utsava -2022: Ramp Walk In Avala Hejje Program

ಫ್ಯಾಷನ್‌ ಶೋನಲ್ಲಿ 7 ವರ್ಷದಿಂದ ಮೊದಲುಗೊಂಡು 75 ವರ್ಷ ವಯೋಮಾನದವರೆಗಿನ ಮಹಿಳೆಯರು ಭಾಗವಹಿಸಿದ್ದರು. ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ಕ್ರಿಯಾಶೀಲವಾಗಿ ವಿವಿಧ ಉಡುಗೆ ತೊಡುಗೆಗಳ ಮೂಲಕ ರ‍್ಯಾಂಪ್ ಮೇಲೆ ಪ್ರದರ್ಶಿಸಿದರು.

ವೈದ್ಯೆ, ವಕೀಲೆ, ಫಾರ್ಮಾಸಿಸ್ಟ್, ಕೇಶ ವಿನ್ಯಾಸಕಿ, ಬಾಹ್ಯಾಕಾಶ ವಿಜ್ಞಾನಿ, ವನ್ಯಜೀವಿ ಛಾಯಾಗ್ರಾಹಕಿ, ಸಮಾಜ ಸೇವೆ, ಕಸೂತಿ, ಶಿಕ್ಷಣ, ಫ್ಯಾಷನ್ ಡಿಸೈನಿಂಗ್, ಮಾಡಲಿಂಗ್, ಜಿಮ್‌, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್‌, ಯಕ್ಷಗಾನ, ಚಿತ್ರಕಲೆ, ನಾಟಕ, ಟ್ರೆಕ್ಕಿಂಗ್‌, ಆಭರಣ ವಿನ್ಯಾಸ ಮುಂತಾದ ಕ್ಷೇತ್ರಗಳನ್ನು ಈ ಮಹಿಳೆಯರು ಪ್ರತಿನಿಧಿಸಿದರು.

ಇದರೊಂದಿಗೆ, ʼಹಳೆ ಬೇರು ಹೊಸ ಚಿಗುರುʼ ಶೀರ್ಷಿಕೆಯಡಿ ಹೆಣ್ಣು ಸಂತತಿಯ ಮೂರು ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮಹಿಳೆಯರು ಒಟ್ಟಾಗಿ ರ‍್ಯಾಂಪ್ ವಾಕ್ ಮಾಡಿ ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದ್ದಾರೆ.

English summary
Kannadathi Utsava -2022: Women's ramp walk in Miss Mahalakshmi arranged by Avala Hejje organizers. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X