• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೂರ್ಣಚಂದ್ರ ತೇಜಸ್ವಿ 81ನೇ ಹುಟ್ಟುಹಬ್ಬ, ವಿವಿಧೆಡೆ ವಿಶಿಷ್ಟ ಕಾರ್ಯಕ್ರಮ

By Mahesh
|

ಬೆಂಗಳೂರು, ಸೆಪ್ಟೆಂಬರ್ 07: ಕನ್ನಡದ ವಿಶಿಷ್ಟ ಸಾಹಿತಿ ದಿವಂಗತ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಹಾಗೂ ಚಿಂತನೆಗಳನ್ನು ಎಲ್ಲರ ಮುಂದಿಡುವ ನಿಟ್ಟಿನಲ್ಲಿ ನಾಡಿನ ವಿವಿಧೆಡೆ ಅವರ ಹುಟ್ಟುಹಬ್ಬ ದಿನಾಚರಣೆ ಆಯೋಜನೆಗೊಂಡಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಅಂಗವಾಗಿ 'ತೇಜಸ್ವಿ-80' ಎಂಬ ವಿಶೇಷ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ಅಭಿರುಚಿ ಪ್ರಕಾಶನದಿಂದ ಸೆ.8 ನಾಳೆ ಮತ್ತು 9ರಂದು ನಗರದಲ್ಲಿ ಏರ್ಪಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಓದಿ

ದಿನಾಂಕ 08-09-2018 ರ ಶನಿವಾರ ಕನ್ನಡದ ಪ್ರಖ್ಯಾತ ಲೇಖಕರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 80 ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ವಿಶ್ವಪಥ ಕಲಾಸಂಗಮ ಹವ್ಯಾಸಿ ರಂಗತಂಡವು ತೇಜಸ್ವಿಯವರ ಪ್ರಸಿದ್ಧ ಕೃತಿ " ಪರಿಸರದ ಕತೆ " ಕೃತಿಯನ್ನಾಧರಿಸಿದ " ಎಂಗ್ಟನ ಪುಂಗಿ" ನಾಟಕವನ್ನು ಬಸವೇಶ್ವರನಗರದಲ್ಲಿರುವ ಕೆ.ಇ.ಎ.ಪ್ರಭಾತ್ ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ಪ್ರದರ್ಶಿಸಲಿದೆ.

ನಾಟಕದ ಬಗ್ಗೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕತೆ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಕಾಡುವಂತಹವು. ಮಾರ,ಪ್ಯಾರ, ಗಾರೆ ಸೀನಪ್ಪ, ಬಾಲ್ ಬಾಯ್ ಕಾಳಪ್ಪ, ಗಾಡ್ಲಿ , ಹೀಗೆ ಪ್ರತಿಯೊಂದು ಪಾತ್ರಗಳು ತೇಜಸ್ವಿಯವರ ಪುಸ್ತಕಗಳನ್ನು ಓದುವವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿವೆ.

ಪೂರ್ಣಚಂದ್ರ ತೇಜಸ್ವಿ ಹುಟ್ಟುಹಬ್ಬ: ಮೈಸೂರಿನಲ್ಲಿ ಸಂಭ್ರಮ

ಇಂತಹುದೇ ಇನ್ನೊಂದು ಕಾಡುವ ಪಾತ್ರವೆಂದರೆ ಹಾವುಗೊಲ್ಲ ಎಂಗ್ಟನದು.ಎಂಗ್ಟನ ಭವಿಷ್ಯವನ್ನು ಇತಿಹಾಸ ಎಂದೋ ನಿರ್ಧರಿಸಿಬಿಟ್ಟಿತ್ತು ಸೋಲಲೇಬೇಕಾದ ಯುದ್ಧವೊಂದರಲ್ಲಿ ಗುದ್ದಾಡುತ್ತಾ ಬೀದಿ ಬದಿಯಲ್ಲಿ ನಿಂತ ಎಂಗ್ಟ ತನ್ನ ಹೊಟ್ಟೆಪಾಡಿಗಾಗಿ ಏನೆಲ್ಲಾ ಆಟ ಕಟ್ಟುತ್ತಾನೆ ಎಂಬುದನ್ನು ನಾಟಕದಲ್ಲಿ ರಂಜನೀಯವಾಗಿ ತೋರಿಸಲಾಗಿದೆ. ಈಗಾಗಲೇ ಹಲವಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ನಾಟಕ ಇದಾಗಿದೆ.

ಎಂಗ್ಟನ ಪುಂಗಿ ನಾಟಕದ ರಂಗರೂಪ

ಎಂಗ್ಟನ ಪುಂಗಿ ನಾಟಕದ ರಂಗರೂಪ

ಎಂಗ್ಟನ ಪುಂಗಿ ನಾಟಕದ ರಂಗರೂಪ ಮತ್ತು ನಿರ್ದೇಶನ ಅಶೋಕ್.ಬಿ ಅವರದ್ದು.
ನಾಟಕ: ಎಂಗ್ಟನ ಪುಂಗಿ
ರಚನೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಿರ್ದೇಶನ: ಅಶೋಕ್.ಬಿ
ದಿನಾಂಕ: 08-09-2018 ಶನಿವಾರ
ಸಮಯ: ಸಂಜೆ 5 ಗಂಟೆಗೆ
ಸ್ಥಳ: ಕೆ.ಇ.ಎ.ಪ್ರಭಾತ್ ರಂಗಮಂದಿರ, ಬಸವೇಶ್ವರನಗರ

ಚಾರಣ ಮತ್ತು ಚರ್ಚೆ, ಕರ್ವಾಲೋ ಕಾದಂಬರಿ ಬಗ್ಗೆ

ಚಾರಣ ಮತ್ತು ಚರ್ಚೆ, ಕರ್ವಾಲೋ ಕಾದಂಬರಿ ಬಗ್ಗೆ

ಚಾರಣ ಮತ್ತು ಚರ್ಚೆ, ಕರ್ವಾಲೋ ಕಾದಂಬರಿ ಬಗ್ಗೆ, "ಮೂರರ ಮುಂದೆ ಏಳು ಸೊನ್ನೆ"
ಇದು ಉಚಿತ ಚಾರಣವಾಗಿದ್ದು, ರಿಜಿಸ್ಟರ್ ಮಾಡಿಕೊಂಡವರನ್ನು‌ ಮಾತ್ರ ಆಹ್ವಾನಿಸಲಾಗುವುದು.
ಸ್ಥಳ:ಐರಣಿ ಕೋಟೆ
ರಾಣೆಬೆನ್ನೂರು ತಾಲೋಕು
ಹಾವೇರಿ ಜಿಲ್ಲೆ
ದಿನಾಂಕ ಮತ್ತು ಸಮಯ:
8-Sep-2018, ಶನಿವಾರ
ಮಧ್ಯಾಹ್ನ 3 ಗಂಟೆಯಿಂದ
9-Sep-2018, ಭಾನುವಾರ
ಬೆಳಗ್ಗೆ 9 ಗಂಟೆಯವರೆಗೆ

ಅರಿವಿನ ಕೃಷಿ- ಸಂಚಿಕೆ-74

ಅರಿವಿನ ಕೃಷಿ- ಸಂಚಿಕೆ-74

ವಿಷಯ: ತೇಜಸ್ವಿ ಓದು
(ಅವರ ಪುಸ್ತಕಗಳನ್ನು ಓದುವ ಮೂಲಕ ತೇಜಸ್ವಿಯವರನ್ನು ಸ್ಮರಿಸುವುದು)
ದಿನಾಂಕ: 09/10/2018ರ ಭಾನುವಾರ ಬೆಳಿಗ್ಗೆ 7:30 ಗಂಟೆಗೆ
ಸ್ಥಳ: ಸಾಹಿತ್ಯ ವನ, ವಿ.ಸಿ. ಮನೆ ಹತ್ತಿರ ಬೆಂಗಳೂರು ವಿಶ್ವವಿದ್ಯಾಲಯ
ಸಾಹಿತ್ಯವನದ ಅರಿವಿನ‌ ಕೃಷಿಗೆ ಎಲ್ಲರಿಗೂ ಆತ್ಮೀಯ ಸ್ವಾಗತ...
ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ
ನಿಮ್ಮ ನಿರೀಕ್ಷೆಯಲ್ಲಿ
- ಸಾಹಿತ್ಯವನ ಗೆಳೆಯರು

***

ನಿರುತ್ತರ ಪುಸ್ತಕ
ಕೆಪಿ ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರ -2018
ಪ್ರಶಸ್ತಿ ಪ್ರದಾನ : ಎಂಎಸ್ ಆಶಾದೇವಿ
ಪ್ರಶಸ್ತಿ ಪುರಸ್ಕೃತರು: ಅಮರೇಂದ್ರ ಹೊಲ್ಲಂಬಳ್ಳಿ
ಮುಖ್ಯ ಅತಿಥಿ: ಕೃಷ್ಣಮೂರ್ತಿ ರಾವ್
ಪುಸ್ತಕ ಕುರಿತ ಮಾತು : ಪಿ ಚಂದ್ರಿಕಾ
ಸ್ಥಳ: ಬೈಗಿನ ಗುಡ್ಡ, ಬೆಂಗಳೂರು ವಿಶ್ವವಿದ್ಯಾಲಯ
ಸಮಯ: ಬೆಳಗ್ಗೆ 7 ಗಂಟೆಗೆ
ದಿನಾಂಕ : 8 ಸೆಪ್ಟೆಂಬರ್ 2018

ತೇಜಸ್ವಿ ಜೀವಲೋಕ 81: ಬಾವಲಿಗಳ ಲೋಕ

ತೇಜಸ್ವಿ ಜೀವಲೋಕ 81: ಬಾವಲಿಗಳ ಲೋಕ

ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ
ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 7 ಗಂಟೆ ತನಕ
ದಿನಾಂಕ: ಶನಿವಾರ, ಸೆಪ್ಟೆಂಬರ್ 08, 2018, ಮಧ್ಯಾಹ್ನ 3.30ಕ್ಕೆ
ಸ್ಥಳ : ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಂಗಳೂರು
ಉದ್ಘಾಟನೆ: ಡಾ. ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ
ಮುಖ್ಯ ಅತಿಥಿಗಳು : ಡಾ. ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ
ಡಾ. ಜಾಫೆಟ್, ಬೆಂಗಳೂರು ಕೇಂದ್ರ ವಿವಿ
ಡಾ ಬಂದನ ಆಲ್ ಅರೋರಾ, ಆಂಡಮಾನ್ ನಿಕೋಬಾರ್ ದ್ವೀಪ ಬಾವಲಿಗಲ ಸಂಶೋಧಕಿ
ಅಧ್ಯಕ್ಷತೆ :
ಡಾ. ಬಿ.ಎಲ್ ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು

ಕಾರ್ಯಕ್ರಮ ಸಂಯೋಜಕ: ಈಶ್ವರ್ ಪ್ರಸಾದ್, ಕಾರ್ಯದರ್ಶಿ, ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆ, ಸಂಚಾಲಕ, ಸ್ಫೂರ್ತಿ ವನ ಸಲಹಾ ಸಮಿತಿ, ಬೆಂಗಳೂರು ಜಲಮಂಡಳಿ,ತಿಪ್ಪಗೊಂಡನಹಳ್ಳಿ

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಅಂಗವಾಗಿ ಕೊಟ್ಟಿಗೆಹಾರದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮಗಳು.

ಸೆಪ್ಟೆಂಬರ್ 08ರಂದು ಬೆಳಗ್ಗೆ 10 ಗಂಟೆಗೆ ಕೊಟ್ಟಿಗೆಹಾರದಲ್ಲಿರುವ ಪ್ರತಿಷ್ಠಾನದ ಕಚೇರಿಯ ಬಳಿ ಇರುವ ಏಕಲವ್ಯ ವಸತಿಶಾಲೆಯ ಮಕ್ಕಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Writer, novelist, photographer, ornithologist, publisher, painter and environmentalist KP Poornachandra Tejaswi's 80th birthday being celebrated across the State from September 08, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more