ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಘು ದೀಕ್ಷಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಗಾಯಕ ನೀಡಿದ ಸ್ಪಷ್ಟನೆಗಳೇನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 11: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸೆಲೆಬ್ರಿಟಿಗಳ ಆರೋಪ ಪ್ರಕರಣ ಕನ್ನಡಕ್ಕೂ ಕಾಲಿಟ್ಟಿದೆ. ಖ್ಯಾತ ಗಾಯಕ ರಘು ದೀಕ್ಷಿತ್ ಅವರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಗಾಯಕಿಯಬ್ಬರು ಆರೋಪಿಸಿದ್ದಾರೆ.

ಚಿನ್ಮಯಿ ಶ್ರೀ ಪಾದ್ ಎಂಬ ಗಾಯಕಿ ರಘು ದೀಕ್ಷಿತ್ ಮೇಲೆ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. ರಘು ದೀಕ್ಷಿತ್ ತನ್ನ ಸ್ನೇಹಿತೆಯಾಗಿರುವ ಒಬ್ಬ ಗಾಯಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚಿನ್ಮಯಿ ಆರೋಪಿಸಿದ್ದಾರೆ.

ಬಾಲಿವುಡ್‌ ಹಾಗೂ ಇತರೆ ಕ್ಷೇತ್ರಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ #MeToo ಅಭಿಯಾನ ನಡೆಯುತ್ತಿದೆ. ಅದಕ್ಕೆ ಕೈ ಜೋಡಿಸಿರುವ ಚಿನ್ಮಯಿ, ರಘು ದೀಕ್ಷಿತ್ ಕೂಡ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿದ್ದಾರೆ. ಇದಕ್ಕೆ ರಘು ದೀಕ್ಷಿತ್ ಸ್ಪಷ್ಟನೆ ನೀಡಿದ್ದಾರೆ.

#ಮೀಟೂ: ಮಹಿಳೆಯರ ಮೇಲೂ ಲೈಂಗಿಕ ಕಿರುಕುಳದ ಆರೋಪ#ಮೀಟೂ: ಮಹಿಳೆಯರ ಮೇಲೂ ಲೈಂಗಿಕ ಕಿರುಕುಳದ ಆರೋಪ

ತಮ್ಮ ಮೇಲಿನ ಆರೋಪದ ಬಗ್ಗೆ ಸುದೀರ್ಘ ಟ್ವೀಟ್ ಬರಹ ಬರೆದಿರುವ ರಘು ದೀಕ್ಷಿತ್, 'ಆ ಘಟನೆ ನಡೆದಿರುವುದು ನಿಜ. ತಬ್ಬಿಕೊಂಡು, ಮುತ್ತು ಕೊಡಲು ಯತ್ನಿಸಿದ್ದು ನಿಜ. ಆದರೆ, ಚಿನ್ಮಯಿ ಅವರು ಹೇಳಿದ ಎಲ್ಲವೂ ಸತ್ಯವಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

ಆರೋಪದ ಬಗ್ಗೆ ತಿಳಿದಿದೆ

ಆರೋಪದ ಬಗ್ಗೆ ತಿಳಿದಿದೆ

'ಮೊದಲನೆಯದಾಗಿ ಇದು ಸಮರ್ಥನೆಯಲ್ಲ. ನನ್ನ ವಿರುದ್ಧ ಮಾಡಿರುವ ಆರೋಪದ ಬಗ್ಗೆ ನನಗೆ ವಾಸ್ತವವಾಗಿ ಅರಿವಿದೆ. ಹೀಗಾಗಿ ಈ ಘಟನೆಯ ನನ್ನ ಕಡೆಯ ಸಂಗತಿಯನ್ನು ಹೇಳಿಕೊಳ್ಳಲು ಬಯಸುತ್ತೇನೆ ಮತ್ತು ಕ್ಷಮೆ ಕೋರುತ್ತೇನೆ' ಎಂದು ರಘು ದೀಕ್ಷಿತ್ ಹೇಳಿದ್ದಾರೆ.

ಕಚೇರಿ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಅಪರಾಧಕ್ಕೆ ಯಾವ ಕಾನೂನು, ಶಿಕ್ಷೆಗಳಿವೆ ಗೊತ್ತೇ?ಕಚೇರಿ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಅಪರಾಧಕ್ಕೆ ಯಾವ ಕಾನೂನು, ಶಿಕ್ಷೆಗಳಿವೆ ಗೊತ್ತೇ?

ದಾಳಿ ಮಾಡಬೇಡಿ

'ಚಿನ್ಮಯಿ ಶ್ರೀಪಾದ್​ ಅವರ ಮೇಲೆ ದಾಳಿ ಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ. ಚಿನ್ಮಯಿ ಒಬ್ಬ ಒಳ್ಳೆಯ ವ್ಯಕ್ತಿ. ಬೇರೆಯವರಿಗೋಸ್ಕರ ಧ್ವನಿ ಎತ್ತುವ ಮೂಲದ ಸರಿಯಾದ ಕೆಲಸ ಮಾಡಿದ್ದಾರೆ. ಈ ಹಿಂದೆ ಅವರೊಂದಿಗೆ ಮಾತನಾಡಿದಾಗ ನನ್ನೊಂದಿಗೆ ಕೂಡ ಚೆನ್ನಾಗಿದ್ದರು. ಹೈದರಾಬಾದ್​​ನಲ್ಲಿ ಒಮ್ಮೆ ನನ್ನ ಕಾರ್ಯಕ್ರಮಕ್ಕೆ ಅವರು ಬಂದಿದ್ದು ನೆನಪಿದೆ. ಆಗ ಊಟಕ್ಕೆ ಬರುವಂತೆ ತಮ್ಮ ಮನೆಗೆ ಆಹ್ವಾನ ನೀಡಿದ್ದರು'.

ನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆ

ಹಿಂದೆಯೇ ಕ್ಷಮಾಪಣೆ ಕೇಳಿದ್ದೆ

ಹಿಂದೆಯೇ ಕ್ಷಮಾಪಣೆ ಕೇಳಿದ್ದೆ

'ಚಿನ್ಮಯಿ ಈಗ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿರುವ ಪ್ರಕರಣ ನನಗೆ ನೆನಪಿದೆ. ಅದರಲ್ಲಿ ಪ್ರಸ್ತಾಪಿಸಿರುವ ವ್ಯಕ್ತಿ ನನಗೆ ಪರಿಚಯವಿದ್ದು, ಆಕೆಗೆ ಈ ಹಿಂದೆಯೇ ಕ್ಷಮಾಪಣೆ ಕೇಳಿದ್ದೆ. ಮತ್ತೊಮ್ಮೆ ಈಗ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿಕೊಳ್ಳುವುದರ ಜೊತೆಗೆ ಮತ್ತೊಮ್ಮೆ ಅವರಲ್ಲಿ ಖಾಸಗಿಯಾಗಿಯೂ ಕ್ಷಮೆ ಕೇಳುವೆ.

#metoo ಅಭಿಯಾನ ತಪ್ಪು ದಾರಿಗೆ ಸೂಚನೆ: ಬಿಜೆಪಿ ಸಂಸದ #metoo ಅಭಿಯಾನ ತಪ್ಪು ದಾರಿಗೆ ಸೂಚನೆ: ಬಿಜೆಪಿ ಸಂಸದ

ಬಾಲಿಶವಾದ ನಡೆ

ಬಾಲಿಶವಾದ ನಡೆ

'ಈ ಘಟನೆ ನಡೆದಿರುವುದು ನಿಜ. ಆದರೆ, ಅವರು ವಿವರಿಸಿರುವಂತೆ ಸಂಪೂರ್ಣವಾಗಿ ಸತ್ಯವಲ್ಲ. ನನ್ನ ಕಡೆಯಿಂದ ಆದ ಬಾಲಿಶವಾದ ನಡೆ ಅದು. ಆಕೆಯನ್ನು ನಾನು ಅಪ್ಪಿಕೊಂಡು ಮುತ್ತು ನೀಡಲು ಮುಂದಾದೆ. ಆಗ ಆಕೆ ನನ್ನನ್ನು ತಡೆದು ಸ್ಟುಡಿಯೋದಿಂದ ಹೊರಹೋದರು. ನಂತರ ಆಕೆ ನನಗೆ ಮೆಸೇಜ್ ಕಳಿಸಿ, ನನ್ನ ವರ್ತನೆ ಇಷ್ಟವಾಗಲಿಲ್ಲ ಎಂದು ತಿಳಿಸಿದರು. ಕೂಡಲೇ ನಾನು ಕ್ಷಮೆ ಕೇಳಿಕೊಂಡೆ'.

ತಪ್ಪಾಗಿ ಅರ್ಥ ಮಾಡಿಕೊಂಡೆ

'ಸಿನಿಮಾಕ್ಕೆ ಹಾಡೊಂದರ ಧ್ವನಿ ಮುದ್ರಣ ನಡೆಯುತ್ತಿತ್ತು. ಆ ಚಿತ್ರದ ನಿರ್ದೇಶಕರಿಗೆ ನಾನು ಅರ್ಪಿಸುತ್ತಿದ್ದ ಹಾಡಾಗಿತ್ತು. ಅದರಲ್ಲಿ ಆ ಗಾಯಕಿಯ ಧ್ವನಿ ಒಂದು ಆಯ್ಕೆಯಾಗಿತ್ತಷ್ಟೇ. ರೆಕಾರ್ಡಿಂಗ್ ಮುಗಿದ ಬಳಿಕ ಆ ಗಾಯಕಿಯ ಧ್ವನಿ ತುಂಬಾ ಚೆನ್ನಾಗಿ ಬಂದಿದೆ ಎನಿಸಿತು.

ಅದರ ಬಳಿಕ ನಾವು ಖಾಸಗಿ ಜೀವನದ ಬಗ್ಗೆ ಚರ್ಚಿಸಿದ್ದೆವು. ಆ ಸಂದರ್ಭದಲ್ಲಿ ನನ್ನ ಹೆಂಡತಿ ಮತ್ತು ನನ್ನ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಹೀಗಾಗಿ ನನಗೆ ಒಂದು ಹಿತಕರ ಬದುಕಿನ ಅಗತ್ಯವಿತ್ತು. ಆಕೆ ತುಂಬಾ ಸಿಹಿಯಾದ ವ್ಯಕ್ತಿತ್ವದವರು. ನನ್ನ ಬದುಕಿನ ಬಗ್ಗೆ ಹೇಳಿಕೊಂಡಾಗ ಅನುಕಂಪ ತೋರಿದರು. ಆ ಕ್ಷಣವನ್ನು ನಾನು ತಪ್ಪಾಗಿ ಅರ್ಥ ಮಾಡಿಕೊಂಡೆ.

ಯಾರಿಗೂ ಆಮಿಷ ಒಡ್ಡಿಲ್ಲ

ಯಾರಿಗೂ ಆಮಿಷ ಒಡ್ಡಿಲ್ಲ

ಆದರೆ, ಚಿನ್ಮಯಿ ಅವರ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಕೆಲವು ಅಂಶಗಳನ್ನು ನಾನು ಒಪ್ಪುವುದಿಲ್ಲ.
ನಾನು ಭಕ್ಷಕನೇ? ಖಂಡಿತಾ ಅಲ್ಲ.

ನನ್ನ ಸಿನಿಮಾದಲ್ಲಿ ಹಾಡಲು 'ಅವಕಾಶ' ನೀಡುವುದಾಗಿ ಈ ಗಾಯಕಿ ಅಥವಾ ಬೇರೆ ಯಾರಿಗಾದರೂ ಆಮಿಷ ಒಡ್ಡಿದ್ದೇನೆಯೇ? ಇಲ್ಲವೇ ಇಲ್ಲ. ಈ ಗಾಯಕಿ ಆಗಲೇ ಆ ಹಾಡನ್ನು ಹಾಡಿ ಮುಗಿಸಿದ್ದರು. ನನ್ನ ಪತ್ನಿಯೊಂದಿಗೆ ಕೆಟ್ಟದಾಗಿ ಮಾತನಾಡಿದ್ದೇನೆಯೇ? ಇಲ್ಲ. ಆದರೆ, ಆಗ ನಾವು ಒಳ್ಳೆಯ ಸಂಬಂಧ ಹೊಂದಿರಲಿಲ್ಲ.

ಒಳ್ಳೆಯ ಗಂಡ ಆಗಿರಲಿಲ್ಲ

ಒಳ್ಳೆಯ ಗಂಡ ಆಗಿರಲಿಲ್ಲ

'ನಾನು ನನ್ನ ಹೆಂಡತಿಗೆ ಒಳ್ಳೆಯ ಗಂಡ ಆಗಿರಲಿಲ್ಲ. ನಮ್ಮ ವೈವಾಹಿಕ ಸಂಬಂಧವನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನಿಸಿದರೂ ಇಬ್ಬರೂ ಸಾಧ್ಯವಾಗಲಿಲ್ಲ. ನಾನು ಮೂರು ವರ್ಷಗಳಿಂದ ಆಕೆಯಿಂದ ದೂರವಿದ್ದೇನೆ. ಡೈವೋರ್ಸ್​ ಪಡೆಯುವ ಕೊನೆಯ ಹಂತದಲ್ಲಿ ಇದ್ದೇವೆ. ನನ್ನ ಕಡೆಯಿಂದ ಈ ಪ್ರಕ್ರಿಯೆ ಸರಾಗವಾಗಿ ನಡೆಯಲೆಂದು ಕೆಲವು ವೃತ್ತಿಪರ ಸಲಹೆಗಾರರನ್ನು ಸಂಪರ್ಕಿಸಿದ್ದೇನೆ'.

ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ

ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ

'ನನ್ನಿಂದ ದೂರವಾಗಿರುವ ನನ್ನ ಹೆಂಡತಿಗೆ ಕ್ಷಮೆ ಕೇಳುವೆ. ಆಕೆ ನಿಜಕ್ಕೂ ಅದ್ಭುತ ವ್ಯಕ್ತಿ. ಹೃದಯದಿಂದ ಸೌಂದರ್ಯವತಿ. ನನ್ನ ಅಭಿಮಾನಿಗಳು, ನನ್ನನ್ನು ಹಾಗೂ ನನ್ನ ಸಂಗೀತವನ್ನು ಇಷ್ಟಪಡುವ ಎಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ಇದನ್ನು ಓದುವುದು ಕಠಿಣ ಎನಿಸುತ್ತದೆ ಎನ್ನುವುದು ನನಗೆ ಗೊತ್ತು. ಮುಂದೊಂದು ದಿನ ಇದನ್ನು ಸರಿಯಾಗುತ್ತದೆ ಎಂಬ ಭರವಸೆ ಇದೆ.

MeToo ಅಭಿಯಾನಕ್ಕೆ ನನ್ನ ಬೆಂಬಲವಿದೆ

MeToo ಅಭಿಯಾನಕ್ಕೆ ನನ್ನ ಬೆಂಬಲವಿದೆ

'ಈ 'MeToo' ಅಭಿಯಾನ ಬಹು ಮುಖ್ಯವಾಗಿದ್ದು, ನನ್ನ ಸಂಪೂರ್ಣ ಬೆಂಬಲವಿದೆ. ಈ ಪ್ರಕರಣದ ಬಗ್ಗೆ ಯಾವುದೇ ಕಾನೂನಾತ್ಮಕ ತನಿಖೆಗೆ ನಾನು ಸಹಕಾರ ನೀಡುತ್ತೇನೆ. ಈ ಪ್ರಕರಣದಲ್ಲಿ ನಾನೇ ಮುಖ್ಯ ವ್ಯಕ್ತಿಯಾಗಿದ್ದರೂ, ಆರೋಪಿಸಿರುವವರನ್ನು ನಂಬುವುದನ್ನು ನಾವು ಮುಂದುವರಿಸಬೇಕು. ಇದು ಈಗಿನ ಅಗತ್ಯ ಕೂಡ. ಈಗ ನಡೆಯುತ್ತಿರುವುದರಿಂದ ಮತ್ತು ನಮ್ಮದೇ ತಪ್ಪುಗಳು ಹಾಗೂ ತಪ್ಪು ಹೆಜ್ಜೆಗಳಿಂದ ನಾವು ಪಾಠ ಕಲಿಯಲೇಬೇಕು. ನಾವು ಮಹಿಳೆಯರನ್ನು ಸಬಲಗೊಳಿಸಲೇಬೇಕು.

ನನಗೆ ನನ್ನ ಪರಿಪೂರ್ಣತೆ ಬಗ್ಗೆ ಸಂಪೂರ್ಣ ನಂಬಿಕೆಯಿದೆ. ಈ ಪ್ರಕರಣದ ಕುರಿತು ಮುಂದುವರಿಯಲು ಆಕೆ ಬಯಸಿದ್ದಲ್ಲಿ ನಾನು ಯಾವುದೇ ತನಿಖೆಗೆ ಹಾಜರಾಗಲು ಸಿದ್ಧ. ಈ ಪ್ರತಿಕ್ರಿಯೆಯ ಮೂಲಕ ನನಗೆ ನಾನು ಬದ್ಧನಾಗಿದ್ದೇನೆ. ನಿಮ್ಮೆಲ್ಲರ ನಂಬಿಕೆ ಹುಸಿಗೊಳಿಸಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ'

English summary
Music director and singer Raghu Dixit reacted in twitter on Chinmayi Sripaada's sexual harassment claim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X