ದರ್ಶನ್‌ ಬಂಧನ: ಇಂದು ಮೈಸೂರಿಗೆ ಕರೆದೊಯ್ಯಲಿರುವ ಪೊಲೀಸರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣ ದಿನ ಕಳೆದಂತೆ ಹೊಸ ತಿರುವು ಪಡೆದುಕೊಳ್ಳುತ್ತಲೇ ಸಾಗುತ್ತಿದೆ. ಈ ಪ್ರಕರಣದಲ್ಲಿ ಈಗಾಗಲೇ 18 ಜನರನ್ನು ಬಂಧಿಸಲಾಗಿದೆ. ಹೈ ಪ್ರೋಫೈಲ್‌ ಕೇಸ್‌ನ್ನು ಪೊಲೀಸರು ಅಷ್ಟೇ ನಿಷ್ಠೆಯಿಂದ ಮಾಡುತ್ತಾ ಇದ್ದಾರೆ. ಈಗ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಂದು ನಟರನ್ನು ಮೈಸೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ.

ದರ್ಶನ್‌ ಪ್ರೇಯಸಿ ಪವಿತ್ರಾ ಗೌಡ್ ಅವರಿಗೆ ಅಶ್ಲೀಲ ಮೆಸೇಜ್‌ ಕಳಿಸಿದ್ದ ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ಚಿತ್ರದುರ್ಗದಿಂದ ನಟನ ಅಭಿಮಾನಿಗಳು ರೇಣುಕಾಸ್ವಾಮಿರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಆ ನಂತರ ಪಟ್ಟಣಗೇರೆಯ ಶೆಡ್ಡನಲ್ಲಿ ಹಲ್ಲೇ ನಡೆಸಿರುವ ಆರೋಪಗಳು ನಟನ ಮೇಲೆ ಕೇಳಿ ಬಂದಿವೆ. ಈಗ ದರ್ಶನ್‌ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಲಾಗುತ್ತಿದೆ.

Kannada Actor Darshan Arrested in Murder Case Police to Escort Him to Mysore Today

ಮೈಸೂರಿಗೆ ಏಕೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಜೋರಾಗಿದೆ. ಹತ್ಯೆ ನಡೆದ ಬಳಿಕ ನಟ ದರ್ಶನ್‌ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ ನಟ ದರ್ಶನ್‌ ಡೇವಿಲ್‌ ಚಿತ್ರದ ಶೂಟಿಂಗ್ ಕಾರ್ಯಕ್ರಮದಲ್ಲಿ ಭಾಗವವಹಿಸಿದ್ದರು. ಪೊಲೀಸರು ದರ್ಶನ್‌ರನ್ನು ಬಂಧಿಸದ್ದಿರಿಂದ, ಅವರನ್ನು ಮೈಸೂರಿಗೆ ಕರೆದುಕೊಡು ಹೋಗಿ ಸ್ಥಳ ಮಹಜರು ಮಾಡುವ ಸಿದ್ಧತೆ ನಡೆಸಿದೆ.

ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್‌ ಶೂಟಿಂಗ್‌ನಲ್ಲಿ ಭಾಗವಹಿಸಿದ್ದು. ಆದರೆ ಈ ಬಗ್ಗೆಯೇ ಯೋಚನೆ ಮಾಡುತ್ತಾ ಇದ್ದರು ಎಂದು ತಿಳಿದು ಬದಿದೆ. ಅವರು ಶೂಟಿಂಗ್ ವೇಳೆ ಸದಾ ಮೊಬೈಲ್‌ ನೋಡುತ್ತಾ ಚಿಂತಾಕ್ರಾಂತರಾಗುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಮೈಸೂರಿನಲ್ಲಿ ಮಹಜರು ನಡೆಯಲಿದೆ.

ಚಿತ್ರದುರ್ಗದ ರೇಣುಕಾಸ್ವಮಿ ಹತ್ಯೆಯ ಪ್ರಕರಣದಲ್ಲಿ ನಟ ದರ್ಶನರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಹೀಗಾಗಿ ಪೊಲೀಸರು ಸ್ಥಳ ಮಹಜರು ನಡೆಸಲು ಸಜ್ಜಾಗಿದ್ದಾರೆ. ಹತ್ಯೆಯ ಬಳಿಕ ಮೈಸೂರಿಗೆ ತೆರಳಿ, ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಕೇಸ್‌ನ್ನು ಮುಚ್ಚಿಹಾಕುವಂತೆ ದರ್ಶನ್‌, ಮೈಸೂರಿನಲ್ಲಿ ಕುಳಿತು ಕೊಂಡೆ ತಂತ್ರವನ್ನು ಹೆಣೆದು, ಪ್ರಭಾವಿಗಳಿಗೆ ಕಾಲ್‌ ಮಾಡಿದ್ದರು. ಹೀಗಾಗಿ ಸ್ಥಳ ಮಹಜರು ನಡೆಯಲಿದೆ. ಈ ವೇಳೆ ದರ್ಶನ್ ಬಳಿಸಿದ್ದ ಕಾರನ್ನು ಸ್ಥಳ ಪರೀಶಿಲಿಸಲಾಗುತ್ತದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+