ಕಾಲಾ ಚಿತ್ರ ಬಿಡುಗಡೆ ವಿರೋಧಿಸಿ ಒರಾಯನ್ ಮಾಲ್ ಎದುರು ಪ್ರತಿಭಟನೆ
ಬೆಂಗಳೂರು, ಜೂನ್ 6: ಕಳೆದ ಒಂದು ವಾರದಿಂದ ಕಾಲಾ ಸಿನೆಮಾ ಬಿಡುಗಡೆ ಕುರಿತಾಗಿ ರಾಜ್ಯಾದ್ಯಂತ ತೀವ್ರ
ವಿರೋಧ ವ್ಯಕ್ತವಾಗುತ್ತಿದೆ. ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಒರಾಯನ್ ಮಾಲ್ ಎದುರು ಪ್ರೊಟೆಸ್ಟ್ ಮಾಡುತ್ತಿದ್ದಾರೆ.
ನಮ್ಮ ಹೋರಾಟ ರಜನಿಕಾಂತ್ ಅವರ ವಿರುದ್ಧವಾಗಿದೆ. ನಾಗರಹಾವು ಚಿತ್ರ ತಮಿಳುನಲ್ಲಿ ಡಬ್ ಆದಾಗ ಅದನ್ನು ಮೂಲೆಗುಂಪು ಮಾಡಿದ್ದರು. ತಮಿಳುನಾಡಿನಲ್ಲಿ ಕನ್ನಡ ಚಿತ್ರಕ್ಕೆ ಗೌರವ ಕೊಡಲಿಲ್ಲ.
ಈಗ ಕಾವೇರಿ ವಿಚಾರವನ್ನು ತಮ್ಮ ಹಕ್ಕು ಎನ್ನುತ್ತಿದ್ದಾರೆ, ಕೋರ್ಟ್ ಮನವಿ ಮಾಡಿದರೂ ನಮಗೆ ಕನ್ನಡ ಮುಖ್ಯ, ಕೋರ್ಟ್ ಹೋರಾಡಬೇಡಿ ಎಂದು ಹೇಳಿಲ್ಲ ಮುಖ್ಯಮಂತ್ರಿಯವರು ನಮ್ಮ ಜತೆ ಇದ್ದಾರೆ ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.

ರಜನಿಕಾಂತ್ ಕನ್ನಡ ವಿರೋಧಿ, ಕಾವೇರಿ ವಿಚಾರದಲ್ಲಿ ಕರ್ನಾಟಕ ವಿರೋಧಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಬಿಡಬಾರದೆಂದು ಆಗ್ರಹಿಸಿದ್ದಾರೆ.
ರಜನೀಕಾಂತ್ ವಿರುದ್ಧ ಘೋಷಣೆ ಕೂಗುವ ಮೂಲಕ ಕಾಲಾ ಚಿತ್ರ ಬಿಡುಗಡೆಯನ್ನು ವಿರೋಧಿಸಿದ್ದಾರೆ. ಚಿತ್ರದ ನಾಯಕ ರಜನಿಕಾಂತ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತದೆ ಎಂದು ನನಗೆ ಭರವಸೆ ಇದೆ ಎಂದಿದ್ದಾರೆ.












Click it and Unblock the Notifications