ಕರ್ನಾಟಕ ಬಂದ್; ಕರವೇ ಪ್ರವೀಣ ಶೆಟ್ಟಿಗೆ ಗೃಹ ಬಂಧನ
ಬೆಂಗಳೂರು, ಫೆಬ್ರವರಿ 13; ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳ ಕೆಲ ಮುಖಂಡರನ್ನು ಬೆಂಗಳೂರು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ.
ಆರ್ ಟಿ ನಗರದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರನ್ನು ಮನೆಯಿಂದ ಹೊರಗೆ ಬಿಡದೇ ಪೊಲೀಸರು ಮನೆ ಮುಂದೆ ಪಹರೆ ಹಾಕಿದ್ದಾರೆ. ಸಂಜೆವರೆಗೂ ಪ್ರವೀಣ್ ಶೆಟ್ಟಿ ಮನೆಗೆ ಪೊಲೀಸರು ಪಹರೆ ಇರಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯಾದ್ಯಂತ ಕರ್ನಾಟಕ ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಂದಿನಂತೆ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕೆಲ ಕನ್ನಡಪರ ಹೋರಾಟಗಾರರು ಬಂದ್ ಆಚರಿಸುವುದು ಬೇಡ ಎಂದು ಬಿಎಂಟಿಸಿ ಸಿಬ್ಬಂದಿಗೆ ಹೂವು ನೀಡಿ ಕೆಲಸಕ್ಕೆ ಬಂದಿರುವುದಕ್ಕೆ ಧನ್ಯವಾದ ಹೇಳುತ್ತಿದ್ದಾರೆ.

ಇತ್ತ ಕನ್ನಡಿಗರಿಗೆ ಉದ್ಯೋಗಗಳಲ್ಲಿ ಮೀಸಲು ನೀಡಲು ಬದ್ದವಿದೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದಾರೆ. ಹೋರಾಟಗಾರರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸಂಘಟನೆಗಳು ಮಹಿಷಿ ವರದಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿವೆ.












Click it and Unblock the Notifications