ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರಿನಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದ ಕನ್ಹಯ್ಯ

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ

|
Google Oneindia Kannada News

ಬೆಂಗಳೂರು, ಜನವರಿ 19: ಕಳೆದ ಮೂರು ವರ್ಷಗಳಲ್ಲಿ ದೇಶದ ಉನ್ನತ ಶಿಕ್ಷಣ, ಕೃಷಿ ಮತ್ತು ಆರ್ಥಿಕ ಕ್ಷೇತ್ರಗಳು ದಯನೀಯ ಸ್ಥಿತಿ ತಲುಪಿದ್ದು, ಜನರ ಗಮನ ಬೇರೆಡೆ ಸೆಳೆಯಲು ಪ್ರತಿನಿತ್ಯ ಹೊಸದೊಂದು ನೀತಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯಕುಮಾರ್ ಕಳವಳ ವ್ಯಕ್ತಪಡಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರ ನೇರ ಹಸ್ತಕ್ಷೇಪ ಮಾಡುತ್ತಿದೆ. ಐಐಎಂ, ಐಐಟಿ, ಕೇಂದ್ರೀಯ ವಿಶ್ವವಿದ್ಯಾಲಯಗಳಂತಹ ಮಹತ್ವದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳು ನೇರ ರಾಜಕೀಯ ಮಾಡುತ್ತಿದ್ದಾರೆ. ಮತ್ತೊಂದೆಡೆ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿದ್ದ ಅನುದಾನವನ್ನು ಶೇ.೭೦ರಷ್ಟು ಕಡಿತಗೊಳಿಸಲಾಗಿದೆ. ಆರ್‌ಎಸ್‌ಎಸ್ ಸಿದ್ಧಾಂತದ ಮೇಲೆ ಸಂಸ್ಥೆಗಳು ನಡೆಯಬೇಕೆಂಬ ಹುನ್ನಾರ ಕೇಂದ್ರ ಸರ್ಕಾರದ ಹಸ್ತಕ್ಷೇಪದ ಹಿಂದಿನ ಹುನ್ನಾರವಾಗಿದೆ ಎಂದು ಆರೋಪಿಸಿದರು.

ದೇಶದ ಕೃಷಿ ಕ್ಷೇತ್ರದ ಬೆಳವಣಿಗೆ ಶೇ.೪೨ರಷ್ಟು ಕುಸಿತವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಪ್ರಧಾನಿ ಮೋದಿ ಸಿದ್ಧರಿಲ್ಲ. ಬದಲಾಗಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲು ಗೋದಿ ಆಮದು ಮೇಲಿನ ಸುಂಕವನ್ನು ಇಳಿಕೆ ಮಾಡಲಾಗಿದೆ. ಇದರಿಂದ ದೇಶದ ರೈತರು ದಿಕ್ಕುತಪ್ಪಿದಂತಾಗಿದ್ದಾರೆ. ಕೃಷಿಕರ ರಕ್ಷಣೆಗಾಗಿ ನೀತಿಗಳಿರಬೇಕು ಎಂಬ ದೇಶದ ಸಂವಿಧಾನ ತತ್ವಗಳಿಗೂ ಕೇಂದ್ರ ಸರ್ಕಾರದ ನಡತೆಗೂ ತಾಳೆಯಾಗುತ್ತಿಲ್ಲ ಎಂದು ದೂರಿದರು.

Kanhaiya accuses centre to deviate the attention of the people

ಅಧ್ಯಯನಕ್ಕಾಗಿ ಬಳಸಲ್ಪಡಬೇಕಾದ ವಿಶ್ವವಿದ್ಯಾಲಯಗಳು ಕುತಂತ್ರದಿಂದ ರಾಜಕೀಯ ಚಟುವಟಿಕೆ ಕೇಂದ್ರಗಳಾಗಿ ಮಾರ್ಪಡುತ್ತಿವೆ ಆರ್‌ಎಸ್‌ಎಸ್‌ನ ಚಟುವಟಿಕೆಗಳು ದೇಶದ ಸಂವಿಧಾನದ ವಿರುದ್ಧವಾಗಿವೆ ಎಂದ ಅವರು, ಇಂತಹ ಚಟುವಟಿಕೆಗಳಿಂದ ಸಮಾಜದಲ್ಲಿನ ವ್ಯವಸ್ಥೆ ಹಾಳಾಗುತ್ತಿದೆ.

ನಮ್ಮ ಸುತ್ತ ಏನು ನಡೆಯುತ್ತಿದೆ ಎನ್ನುವುದನ್ನು ಅರಿತುಕೊಳ್ಳದಷ್ಟು ಮಟ್ಟಕ್ಕೆ ವಿದ್ಯಾರ್ಥಿಗಳು ತಲುಪಿದ್ದಾರೆ ಎಂದರು.
ಪ್ರಧಾನಮಂತ್ರಿಗಳಾಗಲಿ, ಆರ್‌ಎಸ್‌ಎಸ್ ಆಗಲಿ ದೇಶವಲ್ಲ, ಅವರು ದೇಶದ ಒಂದು ಭಾಗ ಮಾತ್ರ ಶ್ವದ್ಯಾನಿಲಯಗಳು ಸಂಪೂರ್ಣ ಸ್ವಾಯತತ್ತೆುಂದ ಕೂಡಿರಬೇಕು.

ರಾಜಕೀಯವನ್ನು ಶಿಕ್ಷಣದಲ್ಲಿ ಲೀನಗೊಳಿಸಬಾರದು ಎಂದರು. ಕಪ್ಪು ಹಣ ನಿಗ್ರಹಕ್ಕಾಗಿ ಕೈಗೊಂಡ ನೋಟು ನಿಷೇಧ ಕ್ರಮದಿಂದ ಯಾವುದೇ ಬದಲಾವಣೆಗಳಾಗಿಲ್ಲ. ದೇಶದ ೨೦ ಲಕ್ಷಕ್ಕೂ ಅಧಿಕ ಜನ ನೋಟು ನಿಷೇಧದಿಂದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ರಕ್ಷಣೆ, ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.

ಆದರೆ, ಸರ್ಕಾರದ ರೀತಿ- ನೀತಿಗಳು ಸಮಾಜದಲ್ಲಿನ ರಾಜಕೀಯ ವ್ಯವಸ್ಥೆಗಳು ದೇಶದ ಪರಿಸ್ಥಿತಿಯನ್ನು ಹದಗೆಡಿಸುತ್ತಿವೆ ಎಂದ ಅವರು, ದೇಶದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ಫಲವಾಗಿದೆ ಎಂದರು. ೩೫ ವರ್ಷದೊಳಗಿನ ಶೇ. ೬೫ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ.

ನಿರುದ್ಯೋಗ ನಿವಾರಣೆಗಾಗಿ ಸರ್ಕಾರಗಳು ಬಜೆಟ್‌ನಲ್ಲಿ ಯಾವುದೇ ಯೋಜನೆಗಳನ್ನು ಘೋಸದಿರುವುದು ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದ ಆಶಾವಾದ ರಾಜಕೀಯಕ್ಕೆ ಯುವಕರು ಬಲಿಯಾಗುತ್ತಿದ್ದಾರೆ ಎಂದು ದೂರಿದರು.

English summary
JNU student Kishan Kanhaiya accuses the centre for deviating people's mind from downfalling of higher education, agriculture and economic sectors, while talking to the press in Bangalore on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X