ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮಲ್ ಪಂತ್‌ಗೆ ಅಧಿಕಾರ ಹಸ್ತಾಂತರಿಸಿದ ಭಾಸ್ಕರ್ ರಾವ್

|
Google Oneindia Kannada News

ಬೆಂಗಳೂರು, ಆಗಸ್ಟ್ 1: ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಬೆಂಗಳೂರು ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದ್ದಾರೆ.

ಕಮಲ್ ಪಂತ್ ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಟ್ವೀಟ್ ಮಾಡಿರುವ ಭಾಸ್ಕರ್ ರಾವ್ ಬೆಂಗಳೂರು ಜನತೆಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ನೇಮಕಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ನೇಮಕ

''ಕಳೆದ ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೂ ನನಗೆ ಹಾಗೂ ಬೆಂಗಳೂರು ಪೊಲೀಸರಿಗೆ ನಿರಂತರ ಬೆಂಬಲ, ಸಹಕಾರ, ಸಹಾಯ ನೀಡಿದ್ದಕ್ಕಾಗಿ ಪ್ರತಿಯೊಬ್ಬ ನಾಗರಿಕರಿಗೂ ಹೃದಯಪೂರ್ವಕ ಧನ್ಯವಾದ. ಎಂದಿಗೂ ನಿಮ್ಮ ಸ್ನೇಹಿತನಾಗಿ ಉಳಿಯುವೆ'' ಎಂದು ಟ್ವೀಟ್ ಮಾಡಿದ್ದಾರೆ.

Kamal Pant takes charge as Bengaluru City Commissioner of Police

ಜುಲೈ 31 ರಂದು ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಭಾಸ್ಕರ್ ರಾವ್ ಜಾಗಕ್ಕೆ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಗುಪ್ತಚರ ಇಲಾಖೆ ಕಮಲ್ ಪಂತ್ ಅವರನ್ನು ನೇಮಕ ಮಾಡಿತ್ತು.

ವಿಶೇಷ ಅಂದ್ರೆ ಭಾಸ್ಕರ್ ರಾವ್ ಮತ್ತು ಪಂಥ್ ಇಬ್ಬರು ಒಂದೇ ಬ್ಯಾಚ್‌ನಲ್ಲಿ (1990ರ ಐಪಿಎಸ್ ಬ್ಯಾಚ್) ಐಪಿಎಸ್ ಅಧಿಕಾರಿಗಳು.

ಕಳೆದ ಆಗಸ್ಟ್ ತಿಂಗಳಲ್ಲಿ ಭಾಸ್ಕರ್ ರಾವ್ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಒಂದು ವರ್ಷ ಪೂರೈಸಿದ ಹಿನ್ನೆಲೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

English summary
Kamal Pant, Additional Director General of Police Intelligence (left) takes charge as Additional Director General of Police & Commissioner of Police, Bengaluru City
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X