ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಕಾಮಗಾರಿ ಪ್ರಸ್ತುತ ಸ್ಥಿತಿ

ಬೆಂಗಳೂರು, ಫೆಬ್ರವರಿ 28: ಕಾಡುಗೋಡಿಯಲ್ಲಿ ನಮ್ಮ ಮೆಟ್ರೋ ಡಿಪೋ ನಿರ್ಮಾಣ ಕಾರ್ಯ ಇನ್ನೆರೆಡು ತಿಂಗಳಲ್ಲಿ ಅಂದರೆ ಮೇನಲ್ಲಿ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದ ಕೊನೆಯಲ್ಲಿ ನೇರಳೆ ಮಾರ್ಗಕ್ಕಾಗಿ ನಿರ್ಮಾಣವಾಗಲಿರುವ ಕಾಡುಗೋಡಿ ಡಿಪೋಗೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ, ಈಗ ಡಿಪೋದ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.

ಮೈಸೂರು ರಸ್ತೆ-ಬೈಯಪ್ಪನಹಳ್ಳಿ ರಸ್ತೆ ನೇರಳೆ ಮಾರ್ಗವನ್ನು ವೈಟ್‌ಫೀಲ್ಡ್‌ವರೆಗೆ ವಿಸ್ತರಿಸುವ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇನ್ನೊಂದೆಡೆ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ಸಾಗುವ ಮಾರ್ಗದ ಕಾಮಗಾರಿ ಕೂಡ ನಡೆಯುತ್ತಿದೆ. ಎರಡನೇ ಹಂತದ ಈ ಯೋಜನೆಗಳಿಗೆ ಚುರುಕು ನೀಡಲಾಗಿದೆ.

kadugodi metro depot work will starts from may

ಹಾಗೆಯೇ ಕಾಡುಗೋಡಿಯಲ್ಲಿ ಅರಣ್ಯ ಭೂಮಿಯಲ್ಲಿ ಡಿಪೊ ನಿರ್ಮಿಸಬೇಕಿದ್ದರಿಂದ ಪ್ರಕ್ರಿಯೆಗಳು ತಡವಾಗುವ ಆತಂಕವಾಗಿತ್ತು. ಇದೀಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾಡುಗೋಡಿ ಡಿಪೋಗಾಗಿ ಅರಣ್ಯ ಭೂಮಿಯನ್ನು ಪಡೆಯಲು ಸುಮಾರು ನಾಲ್ಕು ವರ್ಷ ಒದ್ದಾಡಬೇಕಾಯಿತು.ಕಾಡುಗೋಡಿಯಲ್ಲಿ 45 ಎಕರೆ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಪರ್ಯಾಯ ಭೂಮಿ ನೀಡಿ ಇದೀಗ ಅರಣ್ಯ ಇಲಾಖೆ ಜಾಗವನ್ನು ಪಡೆಯಲಾಗಿದೆ.

ಕಾಮಗಾರಿಗೆ ವೇಗ: 15.50 ಕಿ.ಮೀ ಉದ್ದದ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದ ಕಾಮಗಾರಿ ಶೇ.34 ರಷ್ಟು ಮುಗಿದಿದ್ದು ಭೂಸ್ವಾಧೀನ ಪ್ರಕ್ರಿಯೆ ಶೇ.97ರಷ್ಟು ಮುಕ್ತಾಯಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+