ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವನಗುಡಿಯಲ್ಲಿ ಕಡ್ಲೇ ಕಾಯಿ ಪರಿಷೆ ಕ್ರೇಜ್ ಶುರು

By Mahesh
|
Google Oneindia Kannada News

ಬೆಂಗಳೂರು,ನ.16: ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ದೊರಯಲಿದೆ. ಕಾರ್ತಿಕ ಮಾಸದ ಕೊನೆಯವಾರ ದೊಡ್ಡ ಗಣಪತಿ ದೇವಾಲಯದ ಆವರಣದಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ.ಆದರೆ, ರಜಾ ದಿನದ ಲಾಭ ಪಡೆದಿರುವ ಆಸ್ತಿಕರು, ಕಡ್ಲೇಕಾಯಿ ಪ್ರಿಯರು ಭಾನುವಾರ ದಿನವೇ ಪರಿಷೆ ಸಂಭ್ರಮ ಅನುಭವಿಸುತ್ತಿದ್ದಾರೆ.

ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿರುವ ಕಡಲೆಕಾಯಿ ಜಾತ್ರೆಗೆ ನಿನ್ನೆಯಿಂದಲೇ ಕಡಲೆಕಾಯಿ ಮಾರಾಟ ಮಳಿಗೆಗಳು ಬಂದಿವೆ. ಲೋಡುಗಟ್ಟಲೇ, ಮೂಟೆಗಟ್ಟಲೇ ಕಡಲೆಕಾಯಿಯನ್ನು ರಾಶಿ ರಾಶಿ ಹಾಕಿಕೊಂಡು ಮಾರಾಟಕ್ಕೆ ಇಳಿದಿದ್ದಾರೆ. ಹುರಿದ ಕಡಲೆಕಾಯಿ, ಹಸಿಕಡಲೆಕಾಯಿ, ಬೇಯಿಸಿದ ಕಡಲೆಕಾಯಿ, ಅಬ್ಬಿ ಕಡಲೆಕಾಯಿ, ಒಣಗಿದ ಕಡಲೆಕಾಯಿ ಹೀಗೆ ನಾನಾ ರೀತಿ ಕಡಲೆಕಾಯಿಗಳ ಮಾರಾಟಕ್ಕೆ ಸಿದ್ಧವಾಗಿದೆ.

ಹೆಚ್ಚಿದ ಪರಿಷೆ ಕ್ರೇಜ್: ವರ್ಷದಿಂದ ವರ್ಷಕ್ಕೆ ಪರಿಷೆ ಕ್ರೇಜ್ ಹೆಚ್ಚುತ್ತಿದೆ. ಕಳೆದ ವರ್ಷದಿಂದ ಸಾಮಾಜಿಕ ಜಾಲ ತಾಣಗಳಲ್ಲೂ ಪರಿಷೆಗೆ ಭಾರಿ ಪ್ರಚಾರ ಸಿಗುತ್ತಿದೆ. ಈ ವರ್ಷದ ಪರಿಷೆಗೆ 5 ರಿಂದ 6 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ಸ್ಥಳೀಯರು ಅಂದಾಜು ಮಾಡಿದ್ದಾರೆ.

ಸೋಮವಾರದ ಕಾರ್ಯಕ್ರಮ: ಸೋಮವಾರ ಬೆಳಗ್ಗೆ ಪರಿಷೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ. ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಶಾಂತಕುಮಾರಿ, ಶಾಸಕ ರವಿ ಸುಬ್ರಹ್ಮಣ್ಯ, ಆರ್.ವಿ.ದೇವರಾಜ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗಣಪ, ಬಸವನಿಗೆ ಪೂಜೆ: ರೈತರು ವ್ಯಾಪರಕ್ಕೆ ಇಳಿಯುವ ಮೊದಲು ದೊಡ್ಡ ಗಣಪತಿ ಹಾಗೂ ದೊಡ್ಡ ಬಸವನಿಗೆ ತಾವು ತಂದಿರುವ ಬೆಳೆಯನ್ನು ಅರ್ಪಿಸುತ್ತಾರೆ. ದೊಡ್ಡ ಬಸವನಿಗೆ, ದೊಡ್ಡ ಗಣಪತಿಗೆ ಒಂದು ಸಾವಿರ ಕೆ.ಜಿ ಕಡಲೆಕಾಯಿಯಿಂದ, ಅಭಿಷೇಕ, ಪೂಜೆ ಮಾಡಲಾಗುತ್ತದೆ. ನಂತರ ಪ್ರಸಾದ ರೂಪದ ಈ ಕಡಲೆಕಾಯಿಯನ್ನು ಗ್ರಾಹಕರ ಮುಂದೆ ವ್ಯಾಪಾರಕ್ಕಿಡಲಾಗುತ್ತದೆ.

ಸೇರಿಗೆ ಎಷ್ಟು ಬೆಲೆ? : ಸುಮಾರು 20 ರು.ನಿಂದ 30 ರು.ಗಳವರೆಗೆ ಒಂದು ಸೇರು ಕಡಲೆಕಾಯಿ ವ್ಯಾಪಾರವಾಗುತ್ತದೆ. ಬೆಲೆ ಹೆಚ್ಚು ಕಮ್ಮಿಯಾಗುತ್ತಲೇ ಇರುತ್ತದೆ. ಕಡಲೆಕಾಯಿ ಬೆಳೆಗಾರರು ನೇರವಾಗಿ ವ್ಯಾಪಾರ ಮಾಡಲು ಈ ಪರಿಷೆ ವೇದಿಕೆ ಒದಗಿಸುತ್ತದೆ. ತಮಿಳುನಾಡಿನ ಧರ್ಮಪುರಿ, ಕೃಷ್ಣಗಿರಿ, ಆಂಧ್ರಪ್ರದೇಶ, ತೆಲಂಗಾಣದ ವಿವಿಧ ಪ್ರದೇಶಗಳೂ ಸೇರಿದಂತೆ ರಾಜ್ಯದ ಕೋಲಾರ, ದೊಡ್ಡಬಳ್ಳಾಪುರ, ರಾಮನಗರದ ರೈತರು, ಮಾರಾಟಗಾರರು ಈ ಪರೀಷೆಯಲ್ಲಿ ಪಾಲ್ಗೊಳ್ಳುತ್ತಾರೆ.

Kadlekai Parishe

ಐತಿಹಾಸಿಕ ಹಿನ್ನಲೆ: ಈ ಪರಿಷೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ.ಬಸನವಗುಡಿ ಪರಿಷೆಗೆ ಐತಿಹಾಸಿಕ ಹಿನ್ನಲೆ ಇದೆ. ಸದ್ಯ ಬೆಂಗಳೂರೇ ಆಗಿಹೋಗಿರುವ ಸುಂಕೇನಹಳ್ಳಿ, ಗವಿಪುರ, ಹೊಸಕೆರೆಹಳ್ಳಿ, ನಾಗಸಂದ್ರ ಮತ್ತು ಮಾವಳ್ಳಿ ಮುಂತಾದ ಹಳ್ಳಿಗಳನ್ನೆಲ್ಲಾ ರೈತರು ಶೇಂಗಾ ಮತ್ತು ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದರಂತೆ. ಆದರೆ, ಈ ಬೆಳೆಯನ್ನು ಎತ್ತೊಂದು ರಾತ್ರಿ ವೇಳೆ ಹೊಲಕ್ಕೆ ನುಗ್ಗಿ ತಿಂದು ಹಾಕುತ್ತಿತ್ತು.

ಒಂದು ದಿನ ಇದನ್ನು ಪತ್ತೆ ಹಚ್ಚಿದ ರೈತರು ಇದನ್ನು ಓಡಿಸಿಕೊಂಡು ಬಂದರಂತೆ. ಅದು ಹೆದರಿ ಗುಹೆಯೊಳಗೆ ಸೇರಿಕೊಂಡಿಂತು. ಆಗ ರೈತರು, "ಬಸವಾ ನೀನು ಇಲ್ಲೇ ಕುಳಿತಿರು. ನಾವೇ ನಿನ್ನ ಬಳಿ ಕಡಲೆಕಾಯಿ ತಂದು ನೀಡುತ್ತೇವೆ" ಎಂದು ಮನವಿ ಮಾಡಿಕೊಂಡರಂತೆ. ಅಂದಿನಿಂದಲೂ ಬಸವಣ್ಣನಿಗೆ ಕಡಲೆ ಕಾಯಿ ಅರ್ಪಿಸಿ ನಂತರ ಮಾರಾಟ ಮಾಡುತ್ತಾರೆ. ಸದ್ಯ ಈ ಬಸವಣ್ಣ ದೇವರ ಜಾತ್ರೆಯೇ ಕಡಲೆಕಾಯಿ ಪರಿಷೆಯಾಗಿ ಪ್ರಸಿದ್ದಿ ಪಡೆದಿದೆ. [ಇನ್ನಷ್ಟು ವಿವರ ಓದಿ]

English summary
The area around Doddabasavanagudi (Big Bull Temple) in Basavanagudi, Bengaluru is set to spring to life with the two-day groundnut fair, popularly known as Kadlekai Parishe, which will begin from Nov 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X