ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಸಂದರ್ಶನ

ಅವಕಾಶವಿದ್ದರೂ ರಾಜಕೀಯಕ್ಕೆ ಧುಮುಕದೆ, ಆಹ್ವಾನವಿದ್ದರೂ ಯಾವುದೇ ರಾಜಕೀಯ ಪಕ್ಷದೊಡನೆ ಗುರುತಿಸಿಕೊಳ್ಳದೆ, ಭ್ರಷ್ಟಾಚಾರವನ್ನು ಬುಡಸಮೇತ ನಿರ್ಮೂಲನ ಮಾಡಬೇಕೆಂಬ ಏಕೈಕ ಉದ್ದೇಶದಿಂದ, ಇಪ್ಪತ್ತರ ಹದಿಹರೆಯದ ಯುವಕರನ್ನು ಬಡಿದೆಬ್ಬಿಸುತ್ತಿರುವ ಎಪ್ಪತ್ತರ ಹದಿಹರೆಯದ ಧುರೀಣ ಅಣ್ಣಾ ಹಜಾರೆ ಒಬ್ಬರಾದರೆ, ಅದೇ ವಯಸ್ಸಿನ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ನಿಟ್ಟೆ ಸಂತೋಷ್ ಹೆಗ್ಡೆ ಮತ್ತೊಬ್ಬರು.

ಒಂದೇ ಉದ್ದೇಶವನ್ನು ಇಟ್ಟುಕೊಂಡು ಹಿಂದೆ ಜಂಟಿಯಾಗಿ ಹೋರಾಟ ನಡೆಸಿದ್ದ ಇಬ್ಬರು ಇಂದು ನಾನಾ ಕಾರಣಗಳಿಂದಾಗಿ ಒಂಟಿಯಾಗಿಯೇ ತಮ್ಮ ಗುರಿಯೆಡೆಗೆ ದಿಟ್ಟ ಹೆಜ್ಜೆಯನ್ನು ಇರಿಸಿದ್ದಾರೆ. ಅವರು ಒಂಟಿಯಾಗಿ ವ್ಯವಸ್ಥೆಯ ಕೊಳೆಯನ್ನು ತೊಳೆಯುತ್ತ, ಭ್ರಷ್ಟಾಚಾರದ ಬಲ ಕುಗ್ಗಿಸುವತ್ತ ಹೆಜ್ಜೆ ಇರಿಸಿದ್ದರೇನಂತೆ ಅವರ ಹಿಂದೆ ಸಹಸ್ರಾರು ಯುವಕರ ಪಡೆ ಸಜ್ಜುಗೊಳ್ಳುತ್ತಿದೆ. ಭ್ರಷ್ಟಾಚಾರ ವಿರೋಧಿ ಯುವಕರ ಪಡೆ ಸದ್ದಿಲ್ಲದೆ ಸಿದ್ಧಗೊಳ್ಳುತ್ತಿದೆ.

Justice Santosh Hegde interview

ಇಂದಿಲ್ಲದಿದ್ದರೇನಂತೆ ಮುಂದೊಂದು ದಿನ ತಮ್ಮ ಹೋರಾಟಕ್ಕೆ ಜಯ ಸಿಕ್ಕೇಸಿಗುತ್ತದೆ, ಭ್ರಷ್ಟ ಸರಕಾರಿ ನೌಕರರು ಕೂಡ ಇದಕ್ಕೆ ಕೈಜೋಡಿಸುತ್ತಾರೆ ಎಂಬ ಆಶಾಭಾವನೆಯೊಂದಿಗೆ ತಮ್ಮದೇ ವಿಭಿನ್ನ ದಾರಿಯಲ್ಲಿ ಸಾಗಿರುವ ನ್ಯಾ. ಸಂತೋಷ್ ಹೆಗ್ಡೆ ಅವರು, ಹೋರಾಟದ ರೂಪುರೇಷೆ, ರಾಜಕೀಯ ಒಲವು ನಿಲುವು, ಮುಂಬರುವ ಲೋಕಸಭೆ ಚುನಾವಣೆಯ ಬಗ್ಗೆ ಒನ್ಇಂಡಿಯಾ ಜೊತೆ ಮುಕ್ತವಾಗಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ, ಕರ್ನಾಟಕದ ಲೋಕಾಯುಕ್ತರಾಗಿ ಉನ್ನತ ಹುದ್ದೆ ಅಲಂಕರಿಸಿದ್ದರೂ ಯಾವುದೇ ಹಮ್ಮುಬಿಮ್ಮುಗಳಿಲ್ಲದ ಸರಳ ವ್ಯಕ್ತಿತ್ವದ ಸಂತೋಷ್ ಹೆಗ್ಡೆ ಅವರ ಸಂದರ್ಶನದ ಸಾರಾಂಶ ಮುಂದೆ ಓದಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+