ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿತ ಪ್ರಕರಣ ಸಿಸಿಬಿ ತನಿಖೆಗೆ
Recommended Video

ಬೆಂಗಳೂರು, ಮಾರ್ಚ್ 08: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿತದ ಪ್ರಕರಣದವನ್ನು ಸಿಸಿಬಿ ತನಿಖೆಗೆ ವಹಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶ ನೀಡಿದ್ದಾರೆ.
ನಿನ್ನೆ ಮಧ್ಯಾಹ್ನ ತುಮಕೂರು ನಿವಾಸಿ ತೇಜರಾಜ್ ಶರ್ಮಾ ಎಂಬಾತ ಲೋಕಾಯುಕ್ತರ ಕಚೇರಿಯಲ್ಲೇ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿದಿದ್ದ. ಆ ಕೂಡಲೇ ಅವನನ್ನು ಬಂಧಿಸಲಾಗಿತ್ತು. ಪುಣ್ಯವಷಾತ್ ವಿಶ್ವನಾಥ ಶೆಟ್ಟಿ ಅವರ ಜೀವಕ್ಕೆ ಯಾವುದೇ ಅಪಾಯ ಆಗಿಲ್ಲ.
ಘಟನೆ ನಡೆಯಲು ಭದ್ರತಾ ಲೋಪವೇ ಕಾರಣ ಎಂದು ಹೇಳಲಾಗುತ್ತಿದ್ದು, ಘಟನೆಯ ಕೂಲಂಕುಷ ತನಿಖೆ ನಡೆಸಲು ಸಿಸಿಬಿ ಡಿಸಿಪಿ ಜೀನೇಂದ್ರ ಕಣಗವಿ ಅವರಿಗೆ ಸೂಚಿಸಲಾಗಿದ್ದು, ಅವರು ವರದಿ ನೀಡಿದ ನಂತರ ಭದ್ರತಾ ಲೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಟಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಆರೋಪಿಯು ಅನೇಕ ಸರ್ಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರುಗಳನ್ನು ನೀಡಿದ್ದ ಆದರೆ ಸಾಕ್ಷ್ಯದ ಕೊರತೆಯಿಂದ ಎಲ್ಲಾ ದೂರುಗಳು ವಜಾಗೊಂಡ ಹಿನ್ನೆಲೆಯಲ್ಲಿ ಹತಾಶನಾಗಿ ನ್ಯಾಯಮೂರ್ತಿಗಳಿಗೆ ಇರಿದಿದ್ದಾನೆ ಎನ್ನಲಾಗಿದೆ.
ಆರೋಪಿಯನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ತನಿಖೆ ದೃಷ್ಠಿಯಿಂದಾಗಿ ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಕೃತ್ಯ ಕುರಿತು ಹೆಚ್ಚಿನ ವಿವರಗಳು ತನಿಖೆ ನಂತರ ಬೆಳಕಿಗೆ ಬರುವ ಸಾಧ್ಯತೆ ಇದೆ.












Click it and Unblock the Notifications