ಸಂಪಾದಕ ರವಿಬೆಳಗೆರೆ ವಿರುದ್ಧ ದೂರು ನೀಡಿದ ಪತ್ರಕರ್ತ ಸುನೀಲ್
ಬೆಂಗಳೂರು, ಡಿಸೆಂಬರ್ 11: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ರವಿ ಬೆಳಗೆರೆ ವಿರುದ್ಧ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರು ಸೋಮವಾರ ಬೆಳಗ್ಗೆ ದೂರು ದಾಖಲಿಸಿದ್ದಾರೆ.
ಸುಪಾರಿ ಕೇಸಿಗೆ ಸಂಬಂಧಿಸಿದಂತೆ ಸಿ.ಸಿ.ಬಿ. ಅಧಿಕಾರಿಗಳ ವಶದಲ್ಲಿದ್ದ ರವಿ ಬೆಳಗೆರೆ ಅವರನ್ನು ಇದೀಗ 1ನೇ ಎಸಿಎಂಎಂ ಕೋರ್ಟಿಗೆ ಹಾಜರುಪಡಿಸಲಾಗುತ್ತಿದೆ.
ಈ ನಡುವೆ ವಸಂತಪುರ ಬಳಿ ಮನೆ ಹೊಂದಿರುವ ಸುನೀಲ್ ಅವರು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ರವಿ ಬೆಳಗೆರೆ ವಿರುದ್ಧ ಕೊಲೆ ಸಂಚು ಆರೋಪ ಹೊರೆಸಿ ದೂರು ದಾಖಲಿಸಿದ್ದಾರೆ.

ರವಿ ಬೆಳಗೆರೆ ವಿರುದ್ಧ ಈಗಾಗಲೇ ಸುಪಾರಿ ಕೇಸಿಗೆ ಸಂಬಂಧಿಸಿದಂತೆ ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಹಾಗೂ 120 (ಬಿ) ಅನ್ವಯ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ 1958ರ ಸೆಕ್ಷನ್ 3 ಹಾಗೂ 25ರ ಅನ್ವಯ ಸುಬ್ರಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ಕೊಲೆ ಸಂಚು ಆರೋಪದಲ್ಲಿ ಈ ಐಪಿಎಸ್ ಸೆಕ್ಷನ್ 115 ನಂತೆ ಪ್ರಕರಣ ದಾಖಲಾಗಿದೆ.
'ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆಮನವಿ ಸಲ್ಲಿಸುವುದಾಗಿ ಸುನೀಲ್ ಹೇಳಿದ್ದಾರೆ.












Click it and Unblock the Notifications