ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಶಂಕರ್ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಸಿಐಡಿ ಸೈಬರ್ ಪರೀಕ್ಷೆಗೆ ರವಾನೆ

ಬೆಂಗಳೂರು, ಸೆ. 29: ಪತ್ರಕರ್ತಹಲ್ಲೆಗೆರೆ ಶಂಕರ್ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪತ್ರಕರ್ತ ಶಂಕರ್ ಹಲವರ ಜತೆ ನಡೆಸಿರುವ ವಾಟ್ಸಪ್ ಸಂದೇಶ ಪತ್ತೆ ಮಾಡಲು ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನ್ನು ಸಿಐಡಿ ಸೈಬರ್ ತಂಡದ ಪರೀಕ್ಷೆಗೆ ರವಾನಿಸಲಾಗಿದೆ.

ಹಲ್ಲೆಗೆರೆ ಶಂಕರ್ ವಿರುದ್ಧ ಆತನ ಪತ್ರ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಾನಾ ಆರೋಪ ಮಾಡಿದ್ದ. ತನ್ನ ತಂದೆ ಹಲವರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ನನ್ನ ತಾಯಿ ಹಾಗೂ ಕುಟುಂಬದ ಜತೆ ಯಾವಾಗಲು ಜಗಳ ಮಾಡುತ್ತಿದ್ದರು ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿದ್ದ. ಈ ಹಿನ್ನೆಲೆಯಲ್ಲಿ ಶಂಕರ್ ಅವರ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಮೃತ ಇಬ್ಬರು ಹೆಣ್ಣು ಮಕ್ಕಳ ಪತಿಯರ ಮೊಬೈಲ್ ಗಳನ್ನು ಸಿಐಡಿ ಸೈಬರ್ ತಜ್ಞರಿಗೆ ನೀಡಲಾಗಿದೆ. ಮೊಬೈಲ್ ಹಾಗೂ ಲ್ಯಾಪ್‌ಟಾಪ್ ನಲ್ಲಿರುವ ಸಂದೇಶಗಳನ್ನು ರೀಕವರಿ ಮಾಡುವಂತೆ ಮನವಿ ಮಾಡಲಾಗಿದ್ದು, ಈ ಸಂದೇಶಗಳ ಮೂಲಕ ಅಸಲಿ ಸತ್ಯ ಹೊರ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಹತ್ಯೆ: ಇನ್ನು ಐವರ ಸಾಮೂಹಿಕ ಸಾವಿನ ಕುರಿತ ವೈದ್ಯಕೀಯ ವರದಿ ಬ್ಯಾಡರಹಳ್ಳಿ ಪೊಲೀಸರ ಕೈ ಸೇರಿದೆ. 9 ತಿಂಗಳ ಮಗುವನ್ನು ತಾಯಿ ಸಿಂಧೂರಾಣಿ ಬಟ್ಟೆಯಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾಳೆ. ಆನಂತರ ಆಕೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ವೈದ್ಯಕೀಯ ವರದಿಯಿಂದ ಬೆಳಕಿಗೆ ಬಂದಿದೆ. ಇನ್ನು ಮಧುಸಾಗರ್ ಅವರ ತಾಯಿ, ಇಬ್ಬರು ಅಕ್ಕಂದಿರು ಸಹ ಒಂದೇ ಸಲ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 journalist Hallegere shankar family suicide case: Reason behind Mother killing her infant

ಡೆತ್‌ನೋಟ್‌ನಿಂದ ಸಂಕಷ್ಟ: ಮಧುಸಾಗರ್ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಆಧರಿಸಿ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಂಕರ್ ಗೆ ಸಂಬಂಧಿಸಿದ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಐಡಿ ಸೈಬರ್ ಎಸ್ಪಿ ಶರತ್ ನೇತೃತ್ವದಲ್ಲಿ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಸಂದೇಶಗಳನ್ನು ಹೊರ ತೆಗೆಯಲು ಮುಂದಾಗಿದ್ದಾರೆ. ಮಧು ಸಾಗರ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದಂತೆ ಏನಾದರೂ ಸಂದೇಶಗಳು ಹಾಗೂ ಸಾಕ್ಷಿಗಳು ಸಿಕ್ಕಿದಲ್ಲಿ ಶಂಕರ್ ಹಾಗೂ ಅವರ ಇಬ್ಬರು ಅಳಿಯಂದಿರ ಪಾಲಿಗೆ ಸಂಕಷ್ಟ ಎದುರಾಗಲಿದೆ. ಕೆಲ ಮಹಿಳೆಯರ ಜತೆ ಶಂಕರ್ ನಡೆಸಿದ್ದಾರೆ ಎನ್ನಲಾದ ವಾಟ್ಸಪ್ ಸಂವಹನ ಸ್ಕ್ರೀನ್ ಶಾಟ್‌ಗಳನ್ನು ಮಧುಸಾಗರ್ ಇಟ್ಟುಕೊಂಡಿದ್ದ. ಆತ್ಮಹತ್ಯೆ ಮುನ್ನ ಈ ಕುರಿತು ಉಲ್ಲೇಖಿಸಿ ಡೈರಿಯಲ್ಲೂ ಬರೆದಿದ್ದ ಎಂಬ ಸಂಗತಿ ಘಟನೆ ನಡೆದ ಮೊದಲ ದಿನವೇ ಬೆಳಕಿಗೆ ಬಂದಿತ್ತು.

ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ:

Recommended Video

      ಮೈಮೇಲೆ ಎಗರಿದ ಚಿರತೆ ಜೊತೆ ಮಹಿಳೆಯ ಫೈಟಿಂಗ್ ವಿಡಿಯೋ ವೈರಲ್ | oneindia kannada

      ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ಐದು ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದೆ. ಡಿಸಿಪಿ ರವಿ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮುಂಬಯಿ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಐವರು ಆರೋಪಿಗಳನ್ನು ಬಂಧಿಸಿದ್ದು, ಶೇಷಾದ್ರಿಪುರಂ, ಹೈಗ್ರೌಂಡ್ಸ್, ಉಪ್ಪಾರಪೇಟೆ, ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಕೇಸುಗಳು ದಾಖಲಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+