• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರವಿ ಬೆಳಗೆರೆ ಪುತ್ರಿ ಭಾವನಾಗೆ ಫೇಸ್ಬುಕ್ ನಲ್ಲಿ ಕಿರುಕುಳ

By Mahesh
|

ಬೆಂಗಳೂರು, ಮಾರ್ಚ್ 11: ಪತ್ರಕರ್ತ ರವಿ ಬೆಳಗೆರೆ ಅವರ ಪುತ್ರಿ ಭಾವನಾಗೆ ಫೇಸ್ಬುಕ್ ನಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡಿರುವ ಘಟನೆ ನಡೆದಿದೆ. ಕಿರಿಕಿರಿ ಉಂಟು ಮಾಡಿದ ವ್ಯಕ್ತಿಯ ವಿರುದ್ಧ ಸುಬ್ರಹ್ಮಣಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ವಿಡಿಯೋ ಕಾಲ್ ಮಾಡುವುದರ ಜೊತೆಗೆ ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸುತ್ತಿರುವ ಪ್ರದೀಪ್ ಕುಮಾರ್ ಪಾಯಲ್ ಎಂಬ ಫೇಸ್ ಬುಕ್ ಐಡಿಯುಳ್ಳ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸುವಂತೆ ಸೈಬರ್ ಕ್ರೈಂ ಪೊಲೀಸರ ನೆರವನ್ನು ಭಾವನಾ ಬೆಳಗೆರೆ ಅವರು ಕೇಳಿದ್ದಾರೆ.

ಮಾರ್ಚ್ 15ಕ್ಕೆ ಓ ಮನಸೇ ಮಾರುಕಟ್ಟೆಗೆ, ಭಾವನಾ ಬೆಳಗೆರೆ ಸಂದರ್ಶನ

'ಅವರು ಯಾರು ಅನ್ನೋದು ನನಗೆ ಖಂಡಿತ ಗೊತ್ತಿಲ್ಲ. 'ಬಿಗ್ ಬಾಸ್'ಗೆ ಹೋಗುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಜಾಸ್ತಿ ಆಕ್ಟೀವ್ ಆಗಿದ್ದೆ. 'ಬಿಗ್ ಬಾಸ್'ಗೆ ಹೋಗಿ ಬಂದ್ಮೇಲೆ, ನನ್ನ ಫೇಸ್ ಬುಕ್ ಅಕೌಂಟ್ ಪೇಜ್ ಆಗಿ ಕ್ರಿಯೇಟ್ ಆಯ್ತು. ನಲವತ್ತು ಸಾವಿರ ಫಾಲೋವರ್ಸ್ ಇದ್ದಿದ್ರಿಂದ, ಪ್ರತಿಯೊಬ್ಬರಿಗೂ ಪ್ರತಿಕ್ರಿಯೆ ಕೊಡಲು ನನಗೆ ಕಷ್ಟ ಆಯ್ತು.

ಆದರೆ, ನನ್ನ ಪರ್ಸನಲ್ ಅಕೌಂಟ್ ಗೆ ಪ್ರದೀಪ್ ಕುಮಾರ್ ಪಾಯಲ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನ ನಾನು ಅಕ್ಸೆಪ್ಟ್ ಮಾಡಿದ್ದೆ. ಅದನ್ನೇ ದುರುಪಯೋಗ ಪಡಿಸಿಕೊಂಡು ಮೊನ್ನೆಯಿಂದ ನನಗೆ ವಿಡಿಯೋ ಕಾಲ್ ಮಾಡ್ತಿದ್ದಾನೆ. ಸಾಲದಕ್ಕೆ, ಅಶ್ಲೀಲ, ಕೆಟ್ಟ, ಕೊಳಕ ಮೆಸೇಜ್ ಕಳುಹಿಸುತ್ತಿದ್ದಾನೆ. ಅವನನ್ನ ಬ್ಲಾಕ್ ಮಾಡೋದು ದೊಡ್ಡ ವಿಷಯ ಅಲ್ಲ. ಆದ್ರೆ, ನಾಳೆ ಇನ್ನೊಬ್ಬರಿಗೆ ಇದೇ ತರಹ ಆಗಬಾರದು. ಹೀಗಾಗಿ ,ನಾನು ಸೈಬರ್ ಕ್ರೈಂ ಪೊಲೀಸರ ಬಳಿ ಹೋಗಲು ನಿರ್ಧಾರ ಮಾಡಿದ್ದೇನೆ'' ಎಂದು ಭಾವನಾ ಬೆಳಗೆರೆ ತಿಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Journalist, Daughter of Ravi Belagere, Wife of Kannada Actor Srinagara Kitty Bhavana Belagere gets annoyed with Unknown person who is sending her nasty pics and making video calls on Facebook. Bhavana seeks Cyber police help to tame his stalker named Pradeep Payal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more