Bengaluru: ಬೆಂಗಳೂರಿನ ಈ ಪಾರ್ಕ್‌ನಲ್ಲಿ ಜಾಗಿಂಗ್ ನಿಷೇಧ!
ಬೆಂಗಳೂರು ನಗರದ ಪ್ರತಿಷ್ಠಿತ ಏರಿಯಾದಲ್ಲಿ ಒಂದಾಗಿರುವ ಇಂದಿರಾ ನಗರದ ಪಾರ್ಕ್ ಒಂದರಲ್ಲಿ ಜಾಗಿಂಗ್ ನಿಷೇಧ ಮಾಡಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಜಾಗಿಂಗ್ ನಿಷೇಧ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಹೀಗೆ ಮಾಡುತ್ತಿರುವುದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಅವರು, ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ಸಹನಾ ಎನ್ನುವವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಜಾಗಿಂಗ್ ನಿಷೇಧಿಸಲಾಗಿದೆ, ವಾಕಿಂಗ್ ಮಾಡಿ, ಗೇಮಿಂಗ್ ಚಟುವಟಿಕೆ ನಿಷೇಧಿಸಲಾಗಿದೆ ಎನ್ನುವ ಪಾರ್ಕ್‌ನ ನಿಯಮಗಳಿರುವ ಫೋಟೊ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಆರೋಗ್ಯ ಕಾಪಾಡಿಕೊಳ್ಳಲು ಜಾಗಿಂಗ್ ಮಾಡಬಾರದು ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

"ಇದು ತಮಾಷೆಯ ವಿಷಯವಲ್ಲ, ಇಂದಿರಾನಗರ ಉದ್ಯಾನವನದಲ್ಲಿ ಜಾಗಿಂಗ್ ಬೇಡ? ಮುಂದೇನು, ಉದ್ಯಾನವನಗಳಲ್ಲಿ ಪಾಶ್ಚಿಮಾತ್ಯ ಬಟ್ಟೆ ಧರಿಸಬಾರದು? ಜಾಗಿಂಗ್ ಮಾಡುವವರು ಉದ್ಯಾನವನಗಳಿಗೆ ಏನು ಮಾಡಿದ್ದಾರೆ?" ಎಂದು ಅವರು ಕೇಳಿದ್ದಾರೆ, ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಸರ್ಕಾರ ಅಥವಾ ಉದ್ಯಾನವನ ನಿರ್ವಹಣೆಯನ್ನು ನಿರ್ವಹಿಸುವ ಸ್ಥಳೀಯ ಗುಂಪುಗಳು ಹೇಗೆ ನಿಯಂತ್ರಿಸುತ್ತಿವೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ವೈರಲ್, ವ್ಯಾಪಕ ಚರ್ಚೆ
ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯಿತು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಲವರು ಈ ಕ್ರಮವನ್ನು ವಿರೋಧಿಸಿದ್ದರೆ ಇನ್ನಷ್ಟು ಮಂದಿ ಸಮರ್ಥನೆ ಮಾಡಿಕೊಂಡಿದ್ದಾರೆ. ಕೆಲವರು ಸಹನಾ ಅವರ ಹತಾಶೆಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ಇಂತಹ ನಿಷೇಧವನ್ನು ಅಸಂಬಂಧ ಮತ್ತು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.
ಇನ್ನಷ್ಟು ಮಂದಿ ಆಡಳಿತ ವರ್ಗದ ಕ್ರಮವನ್ನು ಸಮರ್ಥನೆ ಮಾಡಿದ್ದು, ವಾಕಿಂಗ್ ಮಾಡುವ ಮಾರ್ಗ ಕಿರಿದಾಗಿರುವ ಕಾರಣ ಜಾಗಿಂಗ್ ಮಾಡಲು ನಿಷೇಧ ಹೇರಿರಬಹುದು ಎಂದು ಹೇಳಿದರು. ಕೋರಮಂಗಲದಲ್ಲಿರುವ ಪಾರ್ಕ್ ಒಂದರಲ್ಲಿ ಕೂಡ ಇದೇ ನಿಯಮವಿರುವ ಉದ್ಯಾನವಿದೆ, ಜಾಗ ಕಡಿಮೆ ಇರುವ ಕಾರಣ ಸಂಘರ್ಷ ತಪ್ಪಿಸಲು ಇಂತಹ ಕ್ರಮ ಕೈಗೊಳ್ಳುತ್ತಾರೆ, ಇದು ನನಗೆ ತಡವಾಗಿ ಅರ್ಥವಾಯಿತು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೊಬ್ಬರು ಇದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ, ಸೈಕಲ್ ಲೇನ್‌ನಲ್ಲಿ ಪಾದಚಾರಿ ಮಾರ್ಗವನ್ನು ಒಂದೇ ಮಾಡಲಾಗದು, ಎರಡೂ ಬೇರೆ ಬೇರೆ ಇರಬೇಕು, ಇದು ಕೂಡ ಹಾಗೆ ಜಾಗಿಂಗ್ ಮಾಡುವವರಿಂದ ವಾಕಿಂಗ್ ಮಾಡುವವರಿಗೆ ಸಮಸ್ಯೆಯಾಗುತ್ತದೆ ಎಂದು ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.












Click it and Unblock the Notifications